ಬೆಂಗಳೂರು: ಕಾಮಾಕ್ಷಿಪಾಳ್ಯ ಠಾಣೆ ವ್ಯಾಪ್ತಿಯಲ್ಲಿ ಯುವತಿ ಕೆಲಸಕ್ಕೆ ಹೋಗಿದ್ದ ಸಂದರ್ಭದಲ್ಲಿ ಕಿಡಿಗೇಡಿ ಯುವಕ ಆ್ಯಸಿಡ್ ದಾಳಿ ಮಾಡಿದ್ದಾನೆ. ಈ ಹಿನ್ನೆಲೆ ಆ್ಯಸಿಡ್ ದಾಳಿಗೆ ಒಳಗಾದ ಸಂತ್ರಸ್ತೆ ಯುವತಿಯ ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸಂತ್ರಸ್ತೆ ಯುವತಿಯ ವೈದ್ಯಕೀಯ ವೆಚ್ಚಕ್ಕೆ ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಘದ ವತಿಯಿಂದ 1 ಲಕ್ಷ ರೂ. ಸಹಾಯಹಸ್ತದ ಚೆಕ್ ಅನ್ನು ವಿಶೇಷ ಆಯುಕ್ತರಾದ ರಂಗಪ್ಪ ಮತ್ತು ಬಿಬಿಎಂಪಿ ನೌಕರರ ಭವನದ ಅಧ್ಯಕ್ಷರಾದ ಅಮೃತ್ ರಾಜ್ ಕುಟುಂಬಸ್ಥರಿಗೆ ಕೊಟ್ಟರು. ಈ ವೇಳೆ ಆಡಳಿತಾಧಿಕಾರಿಗಳ ಆಪ್ತ ಕಾರ್ಯದರ್ಶಿ ನಾರಾಯಣ್‍ಸ್ವಾಮಿ, ಕಂದಾಯ ಅಧಿಕಾರಿ ಉಮಾ ಹಾಗೂ ಸಂಘದ ಪದಾಧಿಕಾರಿಗಳಾದ ಎಸ್.ಜಿ.ಸುರೇಶ್, ಸಾಯಿಶಂಕರ್, ಕೆ.ಜಿ.ರವಿ, ಕೆ.ಮಂಜೇಗೌಡರು, ನರಸಿಂಹ ಅವರು ಪಾಲ್ಗೊಂಡಿದ್ದರು. ಇದನ್ನೂ ಓದಿ: ಅವನನ್ನ ಪ್ಲೀಸ್ ಬಿಡಬೇಡಿ, ಅವನಿಗೆ ಶಿಕ್ಷೆಯಾಗಲೇ ಬೇಕು: ಪೊಲೀಸರನ್ನು ಬೇಡಿಕೊಂಡ ಆಸಿಡ್ ಸಂತ್ರಸ್ತೆ
Advertisement
Advertisement
ವಿಶೇಷ ಆಯುಕ್ತರಾದ ರಂಗಪ್ಪ ಅವರು ಈ ವೇಳೆ ಮಾತನಾಡಿದ್ದು, ಜನರ ಮೂಲಭೂತ ಸೌಲಭ್ಯ ಒದಗಿಸುವ ಜನಸ್ನೇಹಿ ಸಂಸ್ಥೆ ಬಿಬಿಎಂಪಿಯಾಗಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಘವು ನೌಕರರ ಹಿತಾರಕ್ಷಣೆ ಜೊತೆಯಲ್ಲಿ ಜನರ ಸಂಕಷ್ಟಗಳಿಗೆ ನೆರವು ನೀಡುವ ಸಾಮಾಜಿಕ ಸೇವಾ ಸಂಘಟನೆಯಾಗಿ ರೂಪುಗೊಂಡಿದೆ. ಆ್ಯಸಿಡ್ ದಾಳಿಗೆ ಒಳಗಾದ ಯುವತಿಯ ವೈದ್ಯಕೀಯ ಚಿಕಿತ್ಸೆಗೆ 1 ಲಕ್ಷ ರೂ. ನೀಡಲಾಗಿದೆ. ಸಂತ್ರತ್ತೆ ಯುವತಿ ಬೇಗನೆ ಗುಣಮುಖರಾಗಲಿ ಎಂಬ ಪ್ರಾರ್ಥಿಸುತ್ತೇನೆ ಎಂದು ಹೇಳಿದರು.
Advertisement
Advertisement
ಇದೇ ಸಂದರ್ಭದಲ್ಲಿ ಅಧ್ಯಕ್ಷರಾದ ಅಮೃತ್ ರಾಜ್ ಅವರು ಮಾತನಾಡಿದ್ದು, ಬೆಂಗಳೂರು ನಗರ ನಾಗರಿಕರ ದಿನನಿತ್ಯ ಬಿಬಿಎಂಪಿ ಜೊತೆಯಲ್ಲಿ ಒಡನಾಟವಿರುತ್ತದೆ. ನಮ್ಮ ಸಂಘವು ಜನರ ನೋವು, ಸಂಕಷ್ಟಗಳಿಗೆ ಸದಾ ತನ್ನ ಸಹಾಯ ಹಸ್ತ ನೀಡುತ್ತಾ ಬಂದಿದೆ. ಕೊರೊನಾ ಲಾಕ್‍ಡೌನ್ ಸಂದರ್ಭದಲ್ಲಿ ದಿನಸಿ ಕಿಟ್ ಮತ್ತು ಮಾಸ್ಕ್, ಸ್ಯಾನಿಟೈಸರ್ ವಿತರಣೆ. ಕೊಡಗು, ಉತ್ತರಕರ್ನಾಟಕ ಪ್ರವಾಹದಿಂದ ನೊಂದ ಸಂಕಷ್ಟದಲ್ಲಿರುವ ಜನರಿಗೆ ಸಹಾಯಹಸ್ತ ನೀಡಿದೆ ಎಂದು ತಿಳಿಸಿದರು. ಇದನ್ನೂ ಓದಿ: ನಿಮಗೆ ಹಿಂದಿ ಬರದಿದ್ದರೆ ಈ ದೇಶ ಬಿಟ್ಟು ಹೋಗಿ: ಸಂಜಯ್ ನಿಶಾದ್
ಧರ್ಮಸ್ಥಳದಲ್ಲಿ ನೀರಿನ ಅಭಾವ ಇದ್ದಾಗ 1 ಲಕ್ಷ ಲೀಟರ್ ನೀರು ನೀಡಲಾಯಿತು. ಬೆಂಗಳೂರಿನಲ್ಲಿ ಅಪಘಾತದಿಂದ ಮೃತ್ತಪಟ್ಟ ವ್ಯಕ್ತಿ ಕುಟುಂಬದವರಿಗೆ 1 ಲಕ್ಷ ರೂ. ಮತ್ತು ಹಲವಾರು ಕುಟುಂಬಗಳಿಗೆ ಆಸ್ಪತ್ರೆ ವೆಚ್ಚ, ಔಷಧಿ ಸಂಘದ ವತಿಯಿಂದ ಭರಿಸಲಾಗಿದೆ. ಆ್ಯಸಿಡ್ ದಾಳಿಗೆ ಒಳಗಾದ ಸಂತ್ರತ್ತೆ ಯುವತಿಗೆ ಹೆಚ್ಚಿನ ವೈದ್ಯಕೀಯ ಚಿಕಿತ್ಸೆ ಮತ್ತು ಕುಟುಂಬದ ನಿರ್ವಹಣೆ 1 ಲಕ್ಷ ರೂಪಾಯಿಯನ್ನು ಸಂಘದ ವತಿಯಿಂದ ಸಹಾಯಹಸ್ತ ಮಾಡಲಾಗಿದೆ. ಇನ್ನು ಹೆಚ್ಚಿನ ಸಹಕಾರ ಬೇಕಾದಲ್ಲಿ ನೀಡುತ್ತೇವೆ ಎಂದು ಭರವಸೆ ಕೊಟ್ಟರು.