ಬೆಂಗಳೂರು: ನಗರದ ನಾಲ್ಕು ವರ್ಷದ ಪುಟ್ಟ ಪೋರನ ಮಾಡೆಲಿಂಗ್ ಕ್ಷೇತ್ರದಲ್ಲಿನ ಸಾಧನೆ ಇಂದು ಅಂತರಾಷ್ಟ್ರೀಯ ಮಟ್ಟ ತಲುಪಿದೆ.
ನಗರದ ನಿವಾಸಿಯಾದ ನಿಶಾಂತ್ ಮತ್ತು ನಿಕ್ಕು ದಂಪತಿಯ ನಾಲ್ಕು ವರ್ಷದ ಪುತ್ರ ನಿಲ್ ಎಲ್‍ಕೆಜಿ ಓದುತ್ತಿದ್ದು ಮಾಡೆಲಿಂಗ್ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾನೆ.
Advertisement
Advertisement
ಮಾಡೆಲಿಂಗ್‍ನಲ್ಲಿ ಚಿಕ್ಕ ಬಾಲಕರಿಗಾಗಿ ಜೂನಿಯರ್ ಮಾಡೆಲಿಂಗ್ ಸ್ಫರ್ಧೆ ಇದೆ. ಕಳೆದ ತಿಂಗಳು ಕೇರಳದ ಕ್ಯಾಲಿಕ್ಯಾಟ್‍ನಲ್ಲಿ ನಡೆದ ಜ್ಯೂನಿಯರ್ ಮಾಡೆಲ್ ಇಂಟರ್ ನ್ಯಾಷನಲ್ ಇಂಡಿಯಾ ಸ್ಪರ್ಧೆಯಲ್ಲಿ ಸ್ಪರ್ಧಿಸಿ ಮೆಡಲ್ ಪಡೆದಿದ್ದಾನೆ. ಇನ್ನೂ 2015-16 ನೇ ಸಾಲಿನಲ್ಲಿ ನಡೆದ ಜ್ಯೂನಿಯರ್ ಮಾಡೆಲ್ ಇಂಟರ್ ನ್ಯಾಷನಲ್ ಇಂಡಿಯಾ ಸ್ಪರ್ಧೆಯಲ್ಲಿ ರನ್ನರ್ ಅಪ್ ಆಗಿದ್ದು ಈ ಬಾರಿಯ ಸ್ಪರ್ಧೆಯಲ್ಲಿ ವಿಜೇತನಾಗಿದ್ದಾನೆ.
Advertisement
Advertisement
ಓದಿನ ಜೊತೆಗೆ ಪೋರನ ಫ್ಯಾಶನ್ ಪ್ರೀತಿ ಕಂಡು ತಾಯಿ ಮಾಡೆಲಿಂಗ್ ಕ್ಷೇತ್ರಕ್ಕೆ ಕರೆದೊಯ್ದಿದ್ದಾರೆ. ಅಲ್ಲಿ ಕಮಾಲ್ ಮಾಡಿದ ಪೋರ ಎರಡು ಬಾರಿ ಹ್ಯಾಂಡ್ಸಮ್ ಮಾಡೆಲ್ ಪ್ರಶಸ್ತಿ ಪಡೆದಿದ್ದಾನೆ. ಮುಂದಿನ ಜುಲೈ ತಿಂಗಳಲ್ಲಿ ಥೈಲ್ಯಾಂಡ್‍ನಲ್ಲಿ ನಡೆಯೋ ಲಿಟಲ್ ಪ್ರಿನ್ಸ್ ಅಂಡ್ ಪ್ರಿನ್ಸಸ್ ವರ್ಲ್ಡ್ ಫೀನಾಲೆಗೆ ಆಯ್ಕೆಯಾಗಿದ್ದಾನೆ.
ನಾಲ್ಕು ವರ್ಷಕ್ಕೆ ಅಂತರರಾಷ್ಟ್ರೀಯ ಮಟ್ಟದವರೆಗೂ ಗುರುತಿಸಿಕೊಂಡಿರುವ ನಿಲ್ ಮುಂದಿನ ಜುಲೈ ತಿಂಗಳಲ್ಲಿ ಥೈಲ್ಯಾಂಡ್ ಅಲ್ಲಿ ನಡೆಯೋ ಮಾಡೆಲಿಂಗ್ ಸ್ಫರ್ಧೆಯಲ್ಲಿ ಜಯಗಳಿಸಲಿ ಎಂದು ಆಶಿಸೋಣ.