CrimeLatestLeading NewsMain PostNational

ರಾಮಮಂದಿರ ಹೋರಾಟದ ಪ್ರಮುಖ, ಗೋವುಗಳ ರಕ್ಷಣೆಗೆ 52 ದಿನ ಉಪವಾಸವಿದ್ದ ಆಚಾರ್ಯ ಧರ್ಮೇಂದ್ರ ಇನ್ನಿಲ್ಲ

ಜೈಪುರ: ರಾಮಂದಿರ (Rama Mandir) ಹೋರಾಟದ ಸಕ್ರಿಯರಾಗಿದ್ದ ಹಾಗೂ ಗೋವುಗಳ ರಕ್ಷಣೆಗಾಗಿ ಬರೋಬ್ಬರಿ 52 ದಿನಗಳ ಕಾಲ ಉಪವಾಸವಿದ್ದ ಆಚಾರ್ಯ ಧರ್ಮೇಂದ್ರ (Acharya Shri Dharmendra)  ಇಂದು ನಿಧನರಾಗಿದ್ದಾರೆ.

80 ವರ್ಷದ ಆಚಾರ್ಯ ಧರ್ಮೇಂದ್ರ ಅವರು ಕರುಳಿನ ಕಾಯಿಲೆಯಿಂದ ಬಳಲುತ್ತಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ಜೈಪುರದ ಸವಾಯಿ ಮಾನ್ ಸಿಂಗ್ (Sawai Mansingh Hospital) ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇದೀಗ ಅವರು ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾರೆ.

ತಮ್ಮ ಆವೇಶಭರಿತ ಭಾಷಣಗಳಿಗೆ ಹೆಸರಾದ ಧರ್ಮೇಂದ್ರ ಅವರು, ಗೋವುಗಳ ಕಲ್ಯಾಣಕ್ಕಾಗಿ ಧರ್ಮೇಂದ್ರ ಆಚಾರ್ಯ ಅವರು ಒಮ್ಮೆ 52 ದಿನಗಳ ಕಾಲ ಉಪವಾಸ ಮಾಡಿದ್ದರು. ದೇಶದಲ್ಲಿ ಈ ಹಿಂದೆ ನಡೆದಿದ್ದ ಬಾಬ್ರಿ (Babri Masjid) ಧ್ವಂಸ ಪ್ರಕರಣದಲ್ಲಿ ಆಚಾರ್ಯ ಧರ್ಮೇಂದ್ರ, ಲಾಲ್ ಕೃಷ್ಣ ಅಡ್ವಾಣಿ, ಮುರಳಿ ಮನೋಹರ್ ಜೋಶಿ, ಕಲ್ಯಾಣ್ ಸಿಂಗ್ ಮತ್ತು ಉಮಾಭಾರತಿ ಅವರನ್ನು ಆರೋಪಿಗಳೆಂದು ಪರಿಗಣಿಸಲಾಗಿತ್ತು.

ರಾಮ ಜನ್ಮಭೂಮಿ ಮಂದಿರ ಚಳವಳಿಯಲ್ಲಿ ಸಕ್ರಿಯ ಅಲ್ಲದೇ ಆಚಾರ್ಯ ಧರ್ಮೇಂದ್ರ ಅವರು ಮಹಾತ್ಮ ರಾಮಚಂದ್ರ ವೀರ ಮಹಾರಾಜರ ಪುತ್ರ ಆಚಾರ್ಯ ಧರ್ಮೇಂದ್ರ ಅವರು ರಾಮ ಜನ್ಮಭೂಮಿ ಮಂದಿರ ಚಳವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. ಅವರು ತಮ್ಮ ಇಡೀ ಜೀವನವನ್ನು ಹಿಂದೂ, ಹಿಂದುತ್ವ ಮತ್ತು ಹಿಂದೂಸ್ತಾನದ ಪ್ರಗತಿಗೆ ಮುಡಿಪಾಗಿಟ್ಟಿದ್ದರು.

ಸದ್ಯ ಹಿಂದೂ ಮುಖಂಡ ಆಚಾರ್ಯ ಧರ್ಮೇಂದ್ರ ಅವರ ನಿಧನಕ್ಕೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ಅವರು ಸಂತಾಪ ಸೂಚಿಸಿದ್ದಾರೆ. ಶ್ರೀಮದ್ ಪಂಚಖಂಡ ಪೀಠಾಧೀಶ್ವರ ಆಚಾರ್ಯ ಧರ್ಮೇಂದ್ರ ಜಿ ಅವರ ನಿಧನ ಸನಾತನ ಧರ್ಮಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ. ಅದಲ್ಲದೇ ಆರ್‍ಎಸ್‍ಎಸ್ ಮುಂಡರು ಕೂಡ ಸಂತಾಪ ಸೂಚಿಸಿದ್ದಾರೆ.

Live Tv

Leave a Reply

Your email address will not be published.

Back to top button