ಜೈಪುರ: ರಾಮಂದಿರ (Rama Mandir) ಹೋರಾಟದ ಸಕ್ರಿಯರಾಗಿದ್ದ ಹಾಗೂ ಗೋವುಗಳ ರಕ್ಷಣೆಗಾಗಿ ಬರೋಬ್ಬರಿ 52 ದಿನಗಳ ಕಾಲ ಉಪವಾಸವಿದ್ದ ಆಚಾರ್ಯ ಧರ್ಮೇಂದ್ರ (Acharya Shri Dharmendra) ಇಂದು ನಿಧನರಾಗಿದ್ದಾರೆ.
Advertisement
80 ವರ್ಷದ ಆಚಾರ್ಯ ಧರ್ಮೇಂದ್ರ ಅವರು ಕರುಳಿನ ಕಾಯಿಲೆಯಿಂದ ಬಳಲುತ್ತಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ಜೈಪುರದ ಸವಾಯಿ ಮಾನ್ ಸಿಂಗ್ (Sawai Mansingh Hospital) ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇದೀಗ ಅವರು ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾರೆ.
Advertisement
Advertisement
ತಮ್ಮ ಆವೇಶಭರಿತ ಭಾಷಣಗಳಿಗೆ ಹೆಸರಾದ ಧರ್ಮೇಂದ್ರ ಅವರು, ಗೋವುಗಳ ಕಲ್ಯಾಣಕ್ಕಾಗಿ ಧರ್ಮೇಂದ್ರ ಆಚಾರ್ಯ ಅವರು ಒಮ್ಮೆ 52 ದಿನಗಳ ಕಾಲ ಉಪವಾಸ ಮಾಡಿದ್ದರು. ದೇಶದಲ್ಲಿ ಈ ಹಿಂದೆ ನಡೆದಿದ್ದ ಬಾಬ್ರಿ (Babri Masjid) ಧ್ವಂಸ ಪ್ರಕರಣದಲ್ಲಿ ಆಚಾರ್ಯ ಧರ್ಮೇಂದ್ರ, ಲಾಲ್ ಕೃಷ್ಣ ಅಡ್ವಾಣಿ, ಮುರಳಿ ಮನೋಹರ್ ಜೋಶಿ, ಕಲ್ಯಾಣ್ ಸಿಂಗ್ ಮತ್ತು ಉಮಾಭಾರತಿ ಅವರನ್ನು ಆರೋಪಿಗಳೆಂದು ಪರಿಗಣಿಸಲಾಗಿತ್ತು.
Advertisement
श्रीमद् पंचखण्ड पीठाधीश्वर आचार्य धर्मेन्द्र जी का निधन सनातन धर्म की अपूरणीय क्षति है।
आचार्य धर्मेन्द्र जी का पूरा जीवन सनातन हिन्दू धर्म के लिए समर्पित था। श्री राम जन्मभूमि, गो-रक्षा आन्दोलन में आचार्य जी का योगदान अविस्मरणीय था।
उनका निधन समाज की अपूरणीय क्षति है।
— Yogi Adityanath (@myogiadityanath) September 19, 2022
ರಾಮ ಜನ್ಮಭೂಮಿ ಮಂದಿರ ಚಳವಳಿಯಲ್ಲಿ ಸಕ್ರಿಯ ಅಲ್ಲದೇ ಆಚಾರ್ಯ ಧರ್ಮೇಂದ್ರ ಅವರು ಮಹಾತ್ಮ ರಾಮಚಂದ್ರ ವೀರ ಮಹಾರಾಜರ ಪುತ್ರ ಆಚಾರ್ಯ ಧರ್ಮೇಂದ್ರ ಅವರು ರಾಮ ಜನ್ಮಭೂಮಿ ಮಂದಿರ ಚಳವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. ಅವರು ತಮ್ಮ ಇಡೀ ಜೀವನವನ್ನು ಹಿಂದೂ, ಹಿಂದುತ್ವ ಮತ್ತು ಹಿಂದೂಸ್ತಾನದ ಪ್ರಗತಿಗೆ ಮುಡಿಪಾಗಿಟ್ಟಿದ್ದರು.
In the passing of Shri Panchkhand Peethadheeshwar Acharya
Shri Dharmendra ji, Hindu society has lost one of its inspiring
spokesmen and a vigilant crusader of Hindu dharma and
culture. We express our deepest condolences to his bereaved
family members, followers and admirers. pic.twitter.com/v4UW2k70nu
— RSS (@RSSorg) September 19, 2022
ಸದ್ಯ ಹಿಂದೂ ಮುಖಂಡ ಆಚಾರ್ಯ ಧರ್ಮೇಂದ್ರ ಅವರ ನಿಧನಕ್ಕೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ಅವರು ಸಂತಾಪ ಸೂಚಿಸಿದ್ದಾರೆ. ಶ್ರೀಮದ್ ಪಂಚಖಂಡ ಪೀಠಾಧೀಶ್ವರ ಆಚಾರ್ಯ ಧರ್ಮೇಂದ್ರ ಜಿ ಅವರ ನಿಧನ ಸನಾತನ ಧರ್ಮಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ. ಅದಲ್ಲದೇ ಆರ್‍ಎಸ್‍ಎಸ್ ಮುಂಡರು ಕೂಡ ಸಂತಾಪ ಸೂಚಿಸಿದ್ದಾರೆ.