ಚಿತ್ರದುರ್ಗ: ಬೈಕಲ್ಲಿ (Bike) ಬಂದು ಸುಲಿಗೆ ಮಾಡುತ್ತಿದ್ದ ಖತರ್ನಾಕ್ ಕಳ್ಳನನ್ನು ಬಂಧಿಸುವಲ್ಲಿ ಚಳ್ಳಕೆರೆ (Challakere) ಪೊಲೀಸರು ಯಶಸ್ವಿಯಾಗಿದ್ದಾರೆ.
ರೋಷನ್ ಎಂಬ ಆರೋಪಿ ಹಾಡುಹಗಲೇ ಕಳ್ಳತನ ಮಾಡಿ ಎಸ್ಕೇಪ್ ಆಗುತ್ತಿದ್ದ. ಹೀಗಾಗಿ ಚಳ್ಳಕೆರೆ ಪೊಲೀಸರಿಗೆ ಬಾರಿ ತಲೆನೋವು ಎನಿಸಿದ್ದು, ಭರ್ಜರಿ ಕಾರ್ಯಚರಣೆ ನಡೆಸಿರುವ ಚಳ್ಳಕೆರೆ ಪೊಲೀಸರು ಹಿರಿಯೂರು (Hiriyur) ತಾಲೂಕಿನ ಖಂಡನೇಹಳ್ಳಿ ಗ್ರಾಮದ ಆರೋಪಿ ರೋಷನ್‌ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದನ್ನೂ ಓದಿ: ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಅಂಕುಶ – ಸಂಜೆ 5 ಗಂಟೆಯ ನಂತರ ವಸೂಲಿ ಮಾಡುವಂತಿಲ್ಲ
ಈ ಆರೋಪಿ ಸೆರೆಯಿಂದ ಚಳ್ಳಕೆರೆ ತಾಲೂಕಿನ ಜನರು ನಿಟ್ಟುಸಿರು ಬಿಡುವಂತಾಗಿದೆ. ಬಂಧಿತ ಆರೋಪಿಯಿಂದ 10 ಲಕ್ಷ ಮೌಲ್ಯದ 7 ಮಾಂಗಲ್ಯ ಸರಗಳು, 2 ಲಕ್ಷ ಮೌಲ್ಯದ ಎರಡು ಬೈಕ್‌ಗಳು ಸೇರಿದಂತೆ 12 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಆರೋಪಿ ಚಳ್ಳಕೆರೆ ಸೇರಿದಂತೆ ವಿವಿಧ ಠಾಣೆಗಳಲ್ಲಿ 7 ಪ್ರಕರಣದಲ್ಲಿ ಭಾಗಿಯಾಗಿದ್ದಾನೆ. ಇದನ್ನೂ ಓದಿ: ಚಾರ್ಮಾಡಿ ಘಾಟಿಯಲ್ಲಿ ಭಾರೀ ಕಾಡ್ಗಿಚ್ಚು – ನೂರಾರು ಎಕರೆ ಅರಣ್ಯ ನಾಶ, ಸಂಕಷ್ಟದಲ್ಲಿ ಪ್ರಾಣಿ ಸಂಕುಲ