– ಬೆಳಗಾವಿ ಜೈಲು ಅಧಿಕಾರಿಗಳ ಕರ್ತವ್ಯ ನಿಷ್ಠೆಯ ಕೈಗನ್ನಡಿ
ಮಂಡ್ಯ: ಜೈಲಿನಲ್ಲಿ ಆರೋಪಿಗಳು ಹಾಗೂ ಕೈದಿಗಳು ಮೊಬೈಲ್‍ನಲ್ಲಿ ಸೆಲ್ಫಿ ತೆಗೆದುಕೊಂಡು ಫೇಸ್‍ಬುಕ್ ಬಳಕೆ ಮಾಡಿಕೊಂಡು ಆರಾಮವಾಗಿ ಇರುವಂತೆ ಕಾಣುತ್ತಿದೆ. ಇದಕ್ಕೆ ತಾಜ ಉದಾಹರಣೆ ಬೆಳಗಾವಿ ಜೈಲಿನಲ್ಲಿ ಜರುಗಿದೆ.
ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ತೊಪ್ಪನಹಳ್ಳಿಯ ಆರೋಪಿ ಟಿ.ಪಿ ಮುತ್ತೇಶ್ ಬೆಳಗಾವಿ ಜೈಲಿನಲ್ಲಿ ಇದ್ದುಕೊಂಡು ಸೆಲ್ಫಿ ಫೋಟೋವನ್ನು ಫೇಸ್‍ಬುಕ್‍ಗೆ ಅಪ್ಲೋಡ್ ಮಾಡಿದ್ದಾನೆ. ಮುತ್ತೇಶ್ 2016ರಲ್ಲಿ ತೋಪ್ಪನಹಳ್ಳಿಯಲ್ಲಿ ನಡೆದ ಜೋಡಿ ಕೋಲೆ ಹಾಗೂ 2018ರಲ್ಲಿ ಮದ್ದೂರಿನಲ್ಲಿ ನಡೆದ ಜೆಡಿಎಸ್ ಮುಖಂಡ ಪ್ರಕಾಶ್ ಹತ್ಯ ಪ್ರಕರಣಗಳಲ್ಲಿನ ಆರೋಪಿಯಾಗಿದ್ದಾನೆ.
Advertisement
Advertisement
ಈ ಎರಡು ಪ್ರಕರಣಗಳ ಆರೋಪಿಯಾಗಿದ್ದರಿಂದ ಮುತ್ತೇಶ್‍ನನ್ನು ಬೆಳಗಾವಿ ಜೈಲಿನಲ್ಲಿ ಇಡಲಾಗಿದೆ. ಇದೀಗ ಮುತ್ತೇಶ್ ಜೈಲಿನಲ್ಲಿ ಇದ್ದುಕೊಂಡು, ಜೈಲಿನ ಡ್ರಸ್‍ನಲ್ಲಿಯೇ ಮೊಬೈಲ್‍ನಲ್ಲಿ ಸೆಲ್ಫಿ ತೆಗೆದುಕೊಂಡಿದ್ದಾನೆ. ಈ ಸೆಲ್ಫಿ ಫೋಟೋವನ್ನು ಮಂಗಳವಾರ ಫೇಸ್‍ಬುಕ್‍ನಲ್ಲಿ ಅಪ್ಲೋಡ್ ಮಾಡಿದ್ದಾನೆ.
Advertisement
ಆರೋಪಿಗಳು ಹಾಗೂ ಕೈದಿಗಳು ಜೈಲಿನಲ್ಲಿ ಇದ್ದುಕೊಂಡು ಮೊಬೈಲ್ ಬಳಕೆ ಮಾಡಿಕೊಂಡು ಈ ರೀತಿ ಚಟುವಟಿಕೆಯಲ್ಲಿ ತೊಡಗಿರುವುದು ಜೈಲು ಅಧಿಕಾರಿಗಳ ಕರ್ತವ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಬೆಳಗಾವಿ ಜೈಲಿನ ಕುರಿತು ತನಿಖೆಯಾಗಬೇಕೆಂದು ಸಾಮಾಜಿಕ ಜಾಲತಾಣದಲ್ಲಿ ಆಗ್ರಹಿಸಲಾಗುತ್ತಿದೆ.