ಬೆಂಗಳೂರು: ಲೋಕಾಯಕ್ತ ನ್ಯಾಯಮೂರ್ತಿ ವಿಶ್ವನಾಥ್ ಶೆಟ್ಟಿಗೆ ಇರಿದ ತುಮಕೂರು ಮೂಲದ ತೇಜಸ್ ಶರ್ಮಾ ಈ ಹಿಂದೆ ಅಧಿಕಾರಿಗಳು ಭ್ರಷ್ಟಚಾರ ಎಸಗಿದ್ದಾರೆ ಎಂದು ಆರೋಪಿಸಿ ಲೋಕಾಯುಕ್ತದಲ್ಲಿ ದೂರು ನೀಡಿದ್ದ. ಇದನ್ನೂ ಓದಿ: ಲೋಕಾಯುಕ್ತರಿಗೆ ಚಾಕು ಇರಿತ ಹೇಗಾಯ್ತು? ಇರಿದ ಆರೋಪಿ ಯಾರು?
Advertisement
ಅಧಿಕಾರಿಗಳಾದ ಗಿರಿಜಾ ಮತ್ತು ಉಮೇಶ್ ಎಂಬವರ ವಿರುದ್ಧ 17-05-2017ರಂದು ಲೋಕಾಯುಕ್ತಕ್ಕೆ ಈತ ದೂರು ನೀಡಿದ್ದ. ಗಿರಿಜಾ ಶಿಕ್ಷಣ ಇಲಾಖೆಯಲ್ಲಿ ಕ್ಲರ್ಕ್ ಆಗಿ ಹಾಗೂ ಉಮೇಶ್ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಇದನ್ನೂ ಓದಿ: ತಂದೆ ಮೇಲಿನ ಇರಿತ ಸುದ್ದಿ ಕೇಳಿದ್ರೂ ಹಾರ್ಟ್ ಆಪರೇಷನ್ ಪೂರ್ಣಗೊಳಿಸಿದ ಮಗ ರವಿಶಂಕರ್
Advertisement
ತೇಜರಾಜ್ ಶರ್ಮಾ ಅವರು ದಾಖಲಿಸಿದ್ದ ಕಂಪ್ಲೆಂಟ್ ನಂಬರ್ UPLOK/BD/1238/2017 ಇದಾಗಿದ್ದು, ಇವರು 27-3-2017ರಂದು ರೆವೆನ್ಯೂ ಡಿಪಾರ್ಟಮೆಂಟ್ ಮೇಲೂ ಕೂಡ ದೂರು ದಾಖಲಿಸಿದ್ದರು. ಕಳೆದ ವರ್ಷ 1238/17, 1196/17, 719/17, 720/17 ಹಾಗೂ 904/17 ನಂಬರ್‍ನ ಒಟ್ಟು ಐದು ದೂರುಗಳು ಲೋಕಾಯುಕ್ತದಲ್ಲಿ ತೇಜಸ್ ಶರ್ಮ ದಾಖಲಿಸಿದ್ದ. ಇದನ್ನೂ ಓದಿ: ಕೊಲೆ ಮಾಡಲೆಂದೇ ವಿಶ್ವನಾಥ್ ಶೆಟ್ಟಿ ಅವರ ಮೇಲೆ ದಾಳಿ ಮಾಡಿದ್ದಾನೆ, ತನಿಖೆಗೆ ಸೂಚಿಸಿದ್ದೇನೆ- ಸಿಎಂ
Advertisement
Advertisement
ಯಾರ ವಿರುದ್ಧ ದೂರು?
ಮಂಜುನಾಥ್ – ಉಪ ನಿರ್ದೇಶಕ, ಸಾರ್ವಜನಿಕ ಶೀಕ್ಷಣ ಇಲಾಖೆ, ತುಮಕೂರು
ಶಿವಕುಮಾರ್ – ಎಸ್‍ಡಿಎ, ಸಾರ್ವಜನಿಕ ಶೀಕ್ಷಣ ಇಲಾಖೆ
ದೇವರಾಜ್ – ಸಹಾಯಕ ನಿರ್ದೇಶಕ, ರೇಷ್ಮೆ ಗೂಡಿನ ಮಾರುಕಟ್ಟೆ, ಕೋಲಾರ
ಮಹಲಿಂಗಪ್ಪ– ಕ್ಲರ್ಕ್, ಪರ್ಚೆಸ್ ಸಕ್ಷೆನ್, ಟಿಯುಎಂಪಿ ಲಿ., ತುಮಕೂರು
ಡಾ.ಚಂದ್ರಪ್ಪ– ಮ್ಯಾನೇಜರ್, ಟಿಯುಎಂಪಿ ಲಿ., ತುಮಕೂರು
ಎಆರ್ ಚಂದ್ರಶೇಖರ್ – ವ್ಯವಸ್ಥಾಪಕ ನಿರ್ದೇಶಕ, ತುಮಕೂರು
ಪ್ರಭಾಕರ್ – ಜಂಟಿ ನಿರ್ದೇಶಕ , ರೇಷ್ಮೆ ವಿನಿಮಯ ಕೇಂದ್ರ, ಬೆಂಗಳೂರು
ಕುಮಾರ್ – ಎಸ್‍ಡಿಸಿ, ವಾಣಿಜ್ಯ ಮತ್ತು ಕೈಗಾರಿಕ ಇಲಾಖೆ, ತುಮಕೂರು
https://www.youtube.com/watch?v=5fwBei0ft2Q
https://www.youtube.com/watch?v=p9D7_SbY8aQ