– ಕೆಲವೇ ಕ್ಷಣಗಳಲ್ಲಿ ಆರೋಪಿಯ ಬಂಧನ
ಬೆಳಗಾವಿ: ಜಿಲ್ಲೆಯ ಕೆಲವು ಕಡೆ ವಿಕೃತ ಕಾಮಿಗಳ ಅಟ್ಟಹಾಸ ಮುಂದುವರಿದಿದೆ. ಅಸಾಹಾಯ ಹಾಗೂ ಮೂಕ ಯುವತಿಯರನ್ನೇ ಟಾರ್ಗೆಟ್ ಮಾಡುವ ಇವರು ಅತ್ಯಾಚಾರವೆಸಗಿ ಪರಾರಿಯಾಗುತ್ತಾರೆ.
ಬೆಳಗಾವಿ ಜಿಲ್ಲೆಯ ಗೋಕಾಕ್ ಹಾಗೂ ಖಾನಾಪೂರ ತಾಲೂಕಿನ ಎರಡು ಪ್ರತ್ಯೇಕಗಳು ಪ್ರಕರಣ ದಾಖಲಾಗಿವೆ. ಗೋಕಾಕ್ ತಾಲೂಕಿನಲ್ಲಿ ಮೂಕ ಯುವತಿಯನ್ನು ಟಾರ್ಗೆಟ್ ಮಾಡಿದ ಆರೋಪಿ ಆಕೆಯ ಬಾಯಲ್ಲಿ ಬಟ್ಟೆ ಹಾಕಿ ಕ್ರೂರವಾಗಿ ವರ್ತಿಸಿ ಅತ್ಯಾಚಾರವೆಸಗಿದ್ದಾನೆ. ಈ ಘಟನೆ ನಡೆದ ಕೆಲವೇ ಕ್ಷಣಗಳಲ್ಲಿ ಪೊಲೀಸರು ಕೂಡಲೇ ಆರೋಪಿಯನ್ನು ಬಂಧಿಸಿದ್ದಾರೆ.
ಇನ್ನೊಂದು ಪ್ರಕರಣ ಖಾನಾಪೂರ ತಾಲೂಕಿನಿಂದ ವರದಿಯಾಗಿದ್ದು, ಕೃತ್ಯ ನಡೆದು ಒಂದು ವಾರದ ನಂತರ ಜನ ಗುಸುಗುಸು ಎಂದು ಗುಲ್ಲೆಬ್ಬಿಸುತ್ತಿದ್ದಂತೆ ಪೊಲೀಸರು ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಂಡು ಆರೋಪಿ ಬಂಧನಕ್ಕೆ ಬಲೆ ಬೀಸಿದ್ದಾರೆ.
ದೇಶದ ಹಲವಾರು ಕಡೆ ಇಂತಹ ಘಟನೆಗಳು ನಡೆದು ಭಾರೀ ಶಿಕ್ಷೆಗೆ ಗುರಿಯಾಗಿದ್ದರೂ ಕೂಡ ಅತ್ಯಾಚಾರ ಪ್ರಕರಣಗಳು ಕಡಿಮೆಯಾಗುತ್ತಿಲ್ಲ. ಈ ಕುರಿತು ಜನಜಾಗೃತಿ ಅತಿ ಅವಶ್ಯ ಎಂದು ಸಾರ್ವಜನಿಕ ವಲಯದಲ್ಲಿ ಮಾತು ಕೇಳಿ ಬರುತ್ತಿದೆ.