ಹುಬ್ಬಳ್ಳಿ: ಸಂಚಾರ ನಿಯಮ ಉಲ್ಲಂಘನೆ ಮಾಡಿದ ಬೈಕ್ ಸವಾರರೊಬ್ಬರಿಗೆ ರಶೀದಿ ನೀಡದೆ ಲಂಚದ (Bribe) ರೂಪದಲ್ಲಿ ಹಣ ಪಡೆದ ಆರೋಪದ ಮೇಲೆ ಉತ್ತರ ಸಂಚಾರ ಠಾಣೆ ಎಎಸ್‌ಐ (ASI) ರಮ್ಜಾನಬಿ ಅಳಗವಾಡಿ ಅವರನ್ನು ಅಮಾನತು ಮಾಡಲಾಗಿದೆ.
Advertisement
ಹುಬ್ಬಳ್ಳಿ (Hubballi) ಹೊಸೂರಿನ ಗಾಳಿ ದುರ್ಗಮ್ಮ ದೇವಸ್ಥಾನದ ಎದುರು ಹೆಲ್ಮೆಟ್ ಧರಿಸದೆ ಬೈಕ್ ಸವಾರರೊಬ್ಬರು ತೆರಳುತ್ತಿದ್ದರು. ಅವರನ್ನು ತಡೆದು ದಂಡ ಪಾವತಿಸುವಂತೆ ಎಎಸ್‌ಐ ಹೇಳಿದ್ದರು. ಇದನ್ನೂ ಓದಿ: ಕುರುಡನ ಹೆಗಲ ಮೇಲೆ ಕುಂಟನ ಸವಾರಿಯಂತಿದೆ ಜೆಡಿಎಸ್-ಬಿಜೆಪಿ ಹೊಂದಾಣಿಕೆ: ಕಾಲೆಳೆದ ಕಾಂಗ್ರೆಸ್
Advertisement
Advertisement
ಸವಾರ ನೀಡಿದ ದಂಡದ ಶುಲ್ಕವನ್ನು ಎಎಸ್‌ಐ ಜೇಬಿಗೆ ಹಾಕಿಕೊಂಡು, ಅದಕ್ಕೆ ರಶೀದಿ ನೀಡಿರಲಿಲ್ಲ ಎಂಬ ಆರೋಪ ಕೇಳಿಬಂದಿತ್ತು. ಮಾಹಿತಿ ತಿಳಿದ ತಕ್ಷಣ ಪ್ರಕರಣ ಮಾಹಿತಿ ಪಡೆದ ಪೊಲೀಸ್ ಕಮಿಷನರ್ ಸಂತೋಷ್ ಬಾಬು ಎಎಸ್‌ಐಯನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ಇದನ್ನೂ ಓದಿ: KSRTC ನೌಕರ ಆತ್ಮಹತ್ಯೆ – ಮ್ಯಾನೇಜರ್ ಕಿರುಕುಳ ಆರೋಪ
Advertisement
Web Stories