ಲಕ್ನೋ: ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ಅವರ ಡೀಪ್‌ಫೇಕ್ (Deep Fake) ವೀಡಿಯೋವನ್ನು ಪೋಸ್ಟ್ ಮಾಡಿ ಶೇರ್ ಮಾಡಿದ ಆರೋಪದ ಮೇಲೆ ಉತ್ತರಪ್ರದೇಶ (Uttar Pradesh) ಎಸ್‌ಟಿಎಫ್ (STF) ತಂಡ ಓರ್ವನನ್ನು ಬಂಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದಾರಿತಪ್ಪಿಸುವ ಸಂಗತಿಗಳನ್ನು ಹರಡಲು, ದೇಶ ವಿರೋಧಿ ಅಂಶಗಳನ್ನು ಬಲಪಡಿಸಲು ಈ ವಿಡಿಯೋವನ್ನು ಬಳಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಮಿತಾಬ್ ಯಶ್ ಹೇಳಿದ್ದಾರೆ. ಮೇ 1ರಂದು ಉತ್ತರ ಪ್ರದೇಶ ಮುಖ್ಯಮಂತ್ರಿಯ ಎಐ ಡೀಪ್‌ಫೇಕ್ ವೀಡಿಯೋವನ್ನು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ಬಳಿಕ ಇದು ವೈರಲ್ ಆಗಿದೆ ಎಂದು ಯಶ್ ತಿಳಿಸಿದ್ದಾರೆ. ಇದನ್ನೂ ಓದಿ: ಹೆಚ್.ಡಿ.ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ನಾಳೆಗೆ ಮುಂದೂಡಿಕೆ
ಭಾರತೀಯ ದಂಡ ಸಂಹಿತೆಯ ಸೆಕ್ಷನ್ 468 (ವಂಚನೆಗಾಗಿ ಫೋರ್ಜರಿ), 505(2) (ಸಾರ್ವಜನಿಕ ಕಿಡಿಗೇಡಿತನದ ಹೇಳಿಕೆ) ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ನೋಯ್ಡಾ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದ್ದು, ಎಸ್‌ಟಿಎಫ್ ಈ ಬಗ್ಗೆ ತನಿಖೆ ಆರಂಭಿಸಿತ್ತು. ಇದನ್ನೂ ಓದಿ: KSET -23 ತಾತ್ಕಾಲಿಕ ಅಂಕ ಪ್ರಕಟ
ಆರೋಪಿ ಶ್ಯಾಮ್ ಕಿಶೋರ್ ಗುಪ್ತಾನನ್ನು ಗುರುವಾರ ಬಂಧಿಸಲಾಗಿದೆ. ನೋಯ್ಡಾದ ಸ್ಥಳೀಯ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಹೆಚ್ಚಿನ ಕಾನೂನು ಪ್ರಕ್ರಿಯೆಗಳನ್ನು ನಡೆಸಲಾಗುತ್ತಿದೆ ಎಂದು ಯಶ್ ಹೇಳಿದ್ದಾರೆ. ಇದನ್ನೂ ಓದಿ: ಲೈಂಗಿಕ ಕಿರುಕುಳ ಆರೋಪ ಹೊತ್ತಿರುವ ಬ್ರಿಜ್‌ಭೂಷಣ್‌ಗೆ ಟಿಕೆಟ್ ಇಲ್ಲ – ಪುತ್ರನಿಗೆ ಬಿಜೆಪಿ ಮಣೆ