ಕೋಲಾರ: ಅಂತರಗಂಗೆ (Antara Gange) ಬೆಟ್ಟದ ಬಂಡೆಗಳ ಮೇಲೆ ಪಾಕ್ ಬಾವುಟದ ಮಾದರಿಯ ಪೇಂಟಿಂಗ್ ಮಾಡಿದ್ದ ಆರೋಪಿಯನ್ನು ಕೋಲಾರದ (Kolar) ಪೊಲೀಸರು (Police) ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಅನ್ವರ್ ಎಂದು ಗುರುತಿಸಲಾಗಿದೆ. ವಿವಾದಾತ್ಮಕ ಬರಹಗಳ ವಿಚಾರವಾಗಿ ಅರಣ್ಯ ಸಿಬ್ಬಂದಿ ದೂರು ನೀಡಿದ್ದರು. ದೂರಿನ ಅನ್ವಯ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಈಗಾಗ್ಲೇ 50 ಲಕ್ಷ ಕೊಟ್ಟಿದ್ದು, ಉಳಿದ ಹಣವನ್ನೂ ವಾಪಸ್ ಮಾಡ್ತೀನಿ: ಹಾಲಶ್ರೀ ಹೈಡ್ರಾಮಾ
ಆರೋಪಿ ಕಾಶಿ ವಿಶ್ವನಾಥ ದೇವಾಲಯ ಇರುವ ಬೆಟ್ಟದ ದೊಡ್ಡ ಬಂಡೆಯೊಂದರ ಮೇಲೆ ಹಸಿರು ಬಿಳಿ ಬಣ್ಣ ಬಳಸಿ ಪಾಕಿಸ್ತಾನದ ಬಾವುಟದ ಮಾದರಿಯ ಚಿತ್ರ ಬಿಡಿಸಿದ್ದ. ಅಲ್ಲದೇ ಅದರ ಮೇಲೆ ಉರ್ದು ಅಕ್ಷರಗಳನ್ನು ಬರೆದಿದ್ದ. 786 ಎಂದು ಧ್ವಜದ ಮೇಲೆ ಬರೆಯಲಾಗಿದ್ದು, ಅದರ ಪಕ್ಕದಲ್ಲೆ ಭಾರತದ ಬಾವುಟವನ್ನು ಸಹ ಬಿಡಿಸಿದ್ದ. ಇದು ಭಾರೀ ವಿವಾದಕ್ಕೆ ಕಾರಣವಾಗಿತ್ತು.
ಈ ಸಂಬಂಧ ಕೋಲಾರ ಗ್ರಾಮಾಂತರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಇದನ್ನೂ ಓದಿ: ವಾಟ್ಸಪ್ ಗ್ರೂಪ್‍ನಲ್ಲೇ ದರೋಡೆಗೆ ಪ್ಲಾನ್- ಡಿಫರೆಂಟ್ ಗ್ಯಾಂಗ್ ಅರೆಸ್ಟ್
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]