ರಾಯಚೂರು: ಜಿಲ್ಲೆಯ ದೇವದುರ್ಗದ ಶಾಸಕಿ (Devadurga MLA) ಕರೆಮ್ಮ ನಾಯಕ್‌ಗೆ (Karemma Nayak) ಅವಾಚ್ಯ ಶಬ್ದಗಳಿಂದ ನಿಂದಿಸಿ ಕೊಲೆ ಬೆದರಿಕೆ ಹಾಕಿರುವ ಆರೋಪ ಹಿನ್ನೆಲೆ 8 ಜನರ ವಿರುದ್ಧ ದೇವದುರ್ಗ (Devadurga) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೂನ್ 4 ರಂದು ತಾಲೂಕಿನ ಆಲದಮರ ತಾಂಡದಲ್ಲಿ ವಿದ್ಯುತ್ ಅವಘಡದಿಂದ ಲೈನ್‌ಮ್ಯಾನ್ ವಿರೂಪಾಕ್ಷಿ ಮೃತಪಟ್ಟಿದ್ದರು. ಘಟನಾ ಸ್ಥಳಕ್ಕೆ ಶಾಸಕಿ ಭೇಟಿ ನೀಡಿದಾಗ ತಡವಾಗಿ ಬಂದಿದ್ದಾರೆ ಎಂದು ಕೆಲವರು ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೈ ಹಿಡಿದು ಎಳೆದಾಡಿ, ಚಪ್ಪಲಿ ಎಸೆದಿರುವ ಆರೋಪದ ಮೇಲೆ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಒಡಿಶಾ ರೈಲು ದುರಂತವಾಗಿ 4 ದಿನ ಕಳೆದರೂ 101 ಮೃತದೇಹಗಳ ಗುರುತು ಇನ್ನೂ ಪತ್ತೆಯಾಗಿಲ್ಲ
Advertisement
Advertisement
ಘಟನೆ ಹಿನ್ನೆಲೆ ಜೆಡಿಎಸ್ ಕಾರ್ಯಕರ್ತರು ಹಾಗೂ ಶಾಸಕಿ ಕರೆಮ್ಮ ನಾಯಕ್ ಅಭಿಮಾನಿಗಳು ದೇವದುರ್ಗ ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ಮಾಡಿ ಆರೋಪಿಗಳ ಬಂಧನಕ್ಕೆ ಒತ್ತಾಯ ಮಾಡಿದ್ದಾರೆ. ಬಂಡೆಗುಡ್ಡದ ಭದ್ರಪ್ಪ, ಅಮರೇಶ, ಭಗವಂತ್ರಾಯ ಸೇರಿ 8 ಜನ ವಿರುದ್ಧ ದೇವದುರ್ಗ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ವಿಧಾನಸಭೆ ಗೆದ್ದ ಕಾಂಗ್ರೆಸ್‍ಗೆ ಲೋಕಸಭೆಯೇ ಟಾರ್ಗೆಟ್- ವಿವಾದ ಸೃಷ್ಠಿಸದಂತೆ ಹೈಕಮಾಂಡ್ ಸೂಚನೆ