ಚಿಕ್ಕಬಳ್ಳಾಪುರ: ಸರ್ಕಾರ ವಿವಿಧ ಯೋಜನೆಗಳ ಲಕ್ಷಾಂತರ ರೂ. ಹಣ ಗ್ರಾಪಂ ಅಧ್ಯಕ್ಷೆಯ ಪತಿ ಖಾತೆಗೆ ಸಂದಾಯವಾಗುತ್ತಿದೆ ಎಂದು ಆರೋಪಿಸಿ ಗ್ರಾಪಂಗೆ ಬೀಗ ಹಾಕಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ ಘಟನೆ ಚಿಕ್ಕಬಳ್ಳಾಪುರದ ಬಾಗೇಪಲ್ಲಿ ತಾಲೂಕಿನ ಗೊರ್ತಪಲ್ಲಿ ಗ್ರಾಮ ಪಂಚಾಯತಿ ಕಚೇರಿ ಎದುರು ನಡೆದಿದೆ.
ಗ್ರಾಮಗಳ ಅಭಿವೃದ್ಧಿ ಕಾರ್ಯಗಳಿಗೆ ಎಂದು ಸರ್ಕಾರ ಗ್ರಾಪಂಗಳಿಗೆ ಕೋಟಿ ಕೋಟಿ ಹಣ ಕೊಟ್ಟರೆ, ಗ್ರಾಪಂ ಅಧಿಕಾರಿಗಳು ಹಾಗೂ ಜನ ಪ್ರತಿನಿಧಿಗಳು ಸೇರಿ ಕಾಮಗಾರಿಗಳನ್ನೇ ಮಾಡದೆ ಲಕ್ಷಾಂತರ ರೂ. ಹಣವನ್ನು ಲಪಟಾಯಿಸಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದು, ಇದಕ್ಕೆ ಪೂರಕ ಎನ್ನುವಂತೆ ಗ್ರಾಪಂ ಅಧ್ಯಕ್ಷೆಯ ಪತಿಯ ಖಾತೆಗೆ ಲಕ್ಷಾಂತರ ರೂ. ಹಣ ಸಂದಾಯವಾಗಿರೋ ದಾಖಲೆ ಸಿಕ್ಕಿದ್ದು ಅನುಮಾನ ಮೂಡಿಸಿದೆ.
Advertisement
Advertisement
ಬರದನಾಡು ಗಡಿ ನಾಡು ಅಂತ್ಯಂತ ಹಿಂದುಳಿದ ತಾಲೂಕು ಎನ್ನುವ ಹಣೆಪಟ್ಟಿ ಕಟ್ಟಿಕೊಂಡಿರುವ ಬಾಗೇಪಲ್ಲಿ ತಾಲೂಕಿನ ಈ ಗೊರ್ತಪಲ್ಲಿ ಗ್ರಾಮ ಪಂಚಾಯತಿಯಲ್ಲಿ 15ನೇ ಹಣಕಾಸು ಯೋಜನೆಯಲ್ಲಿ 65 ಲಕ್ಷ ರೂ. ಹಣವನ್ನು ಲೂಟಿ ಮಾಡಲಾಗಿದೆ ಎಂದು ಆರೋಪ ಕೇಳಿ ಬರುತ್ತಿದೆ. ಇದನ್ನೂ ಓದಿ: ಅಸ್ಸಾಂನಲ್ಲಿರುವ ಶಿವಸೇನೆ ರೆಬಲ್ ಶಾಸಕರನ್ನು ಆತಿಥ್ಯಕ್ಕೆ ಕರೆದ ಮಮತಾ ಬ್ಯಾನರ್ಜಿ
Advertisement
ಗ್ರಾಪಂ ಪಿಡಿಓ ವೆಂಕಟರಮಣಪ್ಪ ಹಾಗೂ ಗ್ರಾಪಂ ಅಧ್ಯಕ್ಷೆ ನಿರ್ಮಲಬಾಯಿ ಪತಿ ಶ್ರೀನಿವಾಸ್ ನಾಯಕ್ ಸೇರಿ ಲಕ್ಷಾಂತರ ರೂ. ಹಣ ದೋಚಿದ್ದಾರೆ. ಹೀಗಾಗಿ ಕೆಲ ಗ್ರಾಪಂ ಸದಸ್ಯರು ಹಾಗೂ ಗ್ರಾಮಸ್ಥರು ಪ್ರತಿಭಟನೆ ನಡೆಸಿ ತನಿಖೆಗೆ ಆಗ್ರಹಿಸಿದರು.
Advertisement
ಗ್ರಾಮಸ್ಥರ ಆರೋಪಕ್ಕೆ ಪೂರಕವಾಗಿ ಗ್ರಾಪಂ ಅಧ್ಯಕ್ಷೆಯ ಪತಿ ಶ್ರೀನಿವಾಸ್ ನಾಯಕ್ ಏಜೆನ್ಸಿ ಎಂಬ ಖಾತೆಗೆ 20 ಲಕ್ಷಕ್ಕೂ ಅಧಿಕ ಹಣ, ಅಂಬಿಕಾ ಎಲೆಕ್ಟ್ರಿಕಲ್ಸ್ ಅಂಡ್ ಹಾರ್ಡ್‌ವೇರ್ ಎಜೆನ್ಸಿಯ ಖಾತೆಗೂ ಲಕ್ಷಾಂತರ ರೂ. ಹಣ ಸಂದಾಯವಾಗಿದೆ. ವಿಶೇಷ ಎಂದರೆ ಒಂದೇ ದಿನ 20ಕ್ಕೂ ಹೆಚ್ಚು ಬಾರಿ ಈ ಖಾತೆಗಳಿಗೆ ಲಕ್ಷಾಂತರ ರೂ. ಹಣ ಸಂದಾಯವಾಗಿದೆ. ಇದನ್ನೂ ಓದಿ: ಉತ್ತರ ಕರ್ನಾಟಕ ರಾಜ್ಯ ನಿರ್ಮಾಣ ಪ್ರಸ್ತಾಪ ಸರ್ಕಾರದ ಮುಂದಿಲ್ಲ: ಬೊಮ್ಮಾಯಿ
65 ಲಕ್ಷದಲ್ಲಿ ಬಹುತೇಕ ಹಣ ಶ್ರೀನಿವಾಸ್ ನಾಯಕ್ ಏಜೆನ್ಸಿ ಹಾಗೂ ಅಂಬಿಕಾ ಎಲೆಕ್ಟ್ರಿಕಲ್ಸ್ ಅಂಡ್ ಹಾಡ್ರ್ವೇರ್ ಖಾತೆಗಳಿಗೆ ಸಂದಾಯವಾಗಿದೆ. ಇನ್ನೂ ಗ್ರಾಮಸ್ಥರ ಪ್ರತಿಭಟನೆ ಮಾಹಿತಿ ತಿಳಿದು ಪಂಚಾಯತಿಗೆ ಭೇಟಿ ನೀಡಿದ ಜಿಲ್ಲಾ ಪಂಚಾಯತಿ ಯೋಜನಾ ಅಧಿಕಾರಿ ಧನುರೇಖಾ ತನಿಖೆ ಕೈಗೊಂಡಿದ್ದಾರೆ. ತನಿಖೆಯಲ್ಲಿ ಭ್ರಷ್ಟ ಅಧಿಕಾರಿಗಳ ಮುಖವಾಡ ಕಳಚಿ ಬೀಳುತ್ತಾ ಕಾದು ನೋಡಬೇಕಿದೆ.