ಇಸ್ಲಾಮಾಬಾದ್: ಕೇವಲ ಧರ್ಮನಿಂದನೆಯ ಆರೋಪದ ಮೇಲೆ ಪಾಕಿಸ್ತಾನದಲ್ಲಿ ಅದೆಷ್ಟೋ ಹತ್ಯೆಗಳು ನಡೆದಿವೆ. ವಕೀಲರು ತಮ್ಮ ಪ್ರಾಣಕ್ಕೆ ಹೆದರಿ ಅಲ್ಪಸಂಖ್ಯಾತರ ಪರ ವಾದಿಸಲು ನಿರಾಕರಿಸುತ್ತಾರೆ. ಈ ಕಾರಣದಿಂದ ಅಸಂಖ್ಯಾತ ಜನರು ಅದೆಷ್ಟೋ ವರ್ಷಗಳಿಂದ ಜೈಲಿನಲ್ಲಿಯೇ ಕೊಳೆಯುವ ಪರಿಸ್ಥಿತಿ ಬಂದೊದಗಿದೆ. ಇದೇ ರೀತಿಯ ಘಟನೆ ಪಾಕಿಸ್ತಾನದಲ್ಲಿ ನಡೆದಿದ್ದು, ಅಲ್ಪಸಂಖ್ಯಾತರ ಭದ್ರತೆಗೆ ಇದು ಒಂದು ಸವಾಲಾಗಿದೆ.
ಪಾಕಿಸ್ತಾನದಲ್ಲಿ ಹಿಂದೂ ನೈರ್ಮಲ್ಯ ಕಾರ್ಮಿಕನೊಬ್ಬ ಖುರಾನ್ ಅನ್ನು ಅಪವಿತ್ರಗೊಳಿಸಿರುವುದಾಗಿ ಆರೋಪಿಸಲಾಗಿದ್ದು, ಆತನ ವಿರುದ್ಧ ಧರ್ಮ ನಿಂದನೆಯ ಪ್ರಕರಣ ದಾಖಲಿಸಲಾಗಿದೆ. ಹಿಂದೂ ಅಲ್ಪಸಂಖ್ಯಾತನ ಸೆರೆ ಹಿಡಿಯಲು ಹಾಗೂ ದಾಳಿ ನಡೆಸಲು ಆತನ ಅಪಾರ್ಟ್ಮೆಂಟ್ ಕಟ್ಟಡದ ಸುತ್ತಲೂ ಜನರು ಜಮಾಯಿಸಿರುವುದು ವೀಡಿಯೋವೊಂದರಲ್ಲಿ ಕಂಡುಬಂದಿದೆ.
Advertisement
Advertisement
ಪಾಕಿಸ್ತಾನದ ಹೈದರಾಬಾದ್‌ನಲ್ಲಿ ನೈರ್ಮಲ್ಯ ಕಾರ್ಮಿಕ ಅಶೋಕ್ ಕುಮಾರ್ ಸ್ಥಳೀಯ ನಿವಾಸಿಯೊಬ್ಬರೊಂದಿಗೆ ಜಗಳವಾಡಿದ್ದು, ಬಳಿಕ ನಿವಾಸಿ ಅಶೋಕ್ ವಿರುದ್ಧ ಧರ್ಮನಿಂದನೆಯ ದೂರು ದಾಖಲಿಸಿದ್ದಾರೆ. ಧರ್ಮನಿಂದನೆಗೆ ಕೋಪಗೊಂಡ ಜನರು ಆತನನ್ನು ಸೆರೆ ಹಿಡಿಯಲು ಹಿಂಸಾತ್ಮಕ ರೂಪದಲ್ಲಿ ಆತನ ನಿವಾಸದ ಸುತ್ತಲೂ ಜಮಾಯಿಸಿದ್ದಾರೆ. ಕೊನೆಗೆ ಪೊಲೀಸರು ಲಾಠಿ ಚಾರ್ಜ್ ಮಾಡಿ ಗುಂಪನ್ನು ಚದುರಿಸಿದ್ದಾರೆ. ಇದನ್ನೂ ಓದಿ: ಅಮಿತ್ ಶಾಗೆ ಶೂ ಎತ್ತಿಕೊಟ್ಟ ಬಿಜೆಪಿ ನಾಯಕನ ವೀಡಿಯೋ ವೈರಲ್
Advertisement
ಹಿಂದೂ ವ್ಯಕ್ತಿಯ ಮೇಲೆ ದಾಳಿ ಮಾಡಲು ನೂರಾರು ಜನರು ಮುಂದಾದಾಗ ಸ್ಥಳೀಯ ಮಾಧ್ಯಮವೊಂದು ಮುಸ್ಲಿಮರ ಪವಿತ್ರ ಪುಸ್ತಕವನ್ನು ಮುಸ್ಲಿಂ ಮಹಿಳೆಯೇ ಸುಟ್ಟು ಅಪಮಾನ ಮಾಡಿರುವುದಾಗಿ ವರದಿ ಮಾಡಿದೆ. ಇದರಲ್ಲಿ ಅಶೋಕ್ ಕುಮಾರ್‌ನ ಯಾವುದೇ ತಪ್ಪಿಲ್ಲ, ಆತನ ಮೇಲೆ ಸುಳ್ಳು ಆರೋಪ ಹೊರಿಸಲಾಗಿದೆ ಎಂದು ತಿಳಿಸಿದೆ.
Advertisement
Hyderabad police dispersed a violent mob which was demanding handing over a Hindu sanitary worker accusing him of #blasphemy Police claims the sanitary worker was targeted because of a personal clash with a local resident pic.twitter.com/CnSFLNLqhH
— Mubashir Zaidi (@Xadeejournalist) August 21, 2022
ಅಶೋಕ್ ಕುಮಾರ್ ಮೇಲೆ ದಾಳಿ ನಡೆಸಲು ಪ್ರಯತ್ನಿಸುತ್ತಿದ್ದ ಗುಂಪನ್ನು ಪೊಲೀಸರು ಚದುರಿಸಿದ್ದಕ್ಕೆ ಸಾಮಾಜಿಕ ಮಾಧ್ಯಮಗಳಲ್ಲಿ ಶ್ಲಾಘನೆ ವ್ಯಕ್ತವಾಗಿದೆ. ಅದರ ವೀಡಿಯೋಗಳು ಕೂಡಾ ವೈರಲ್ ಆಗುತ್ತಿದ್ದು, ಮತಾಂಧತೆಗೆ ಒಬ್ಬನ ಜೀವ ಬಲಿಯಾಗುತ್ತಿದ್ದುದು ತಪ್ಪಿದಂತಾಗಿದೆ ಎಂದು ಜನರು ಕೊಂಡಾಡಿದ್ದಾರೆ. ಇದನ್ನೂ ಓದಿ: ಕೊರೊನಾ ವೇಳೆ ಜನರಿಂದ ಸುಲಿಗೆ – 577 ಖಾಸಗಿ ಆಸ್ಪತ್ರೆಗಳಿಗೆ ನೋಟಿಸ್
Earlier, a charged mob gathered around the apartment building to get hold of the Hindu man. Police dispersed the mob and arrested the victim. pic.twitter.com/3j0RHUzzHO
— Naila Inayat (@nailainayat) August 21, 2022
ಪಾಕಿಸ್ತಾನ ಧರ್ಮನಿಂದನೆಗೆ ಕ್ರೂರವಾದ ಕಾನೂನನ್ನು ಹೊಂದಿದೆ. ಕೇವಲ ಆರೋಪಗಳ ಮೇಲೆ ಅನೇಕ ಜನರನ್ನು ಹತ್ಯೆ ಮಾಡಲಾಗಿದೆ. ಡಿಸೆಂಬರ್ 2021 ರಲ್ಲಿ ಧರ್ಮನಿಂದೆಯ ಆರೋಪದ ಮೇಲೆ ಪಾಕಿಸ್ತಾನದ ಜನರ ಗುಂಪೊಂದು ಶ್ರೀಲಂಕಾದ ಫ್ಯಾಕ್ಟರಿ ಮ್ಯಾನೇಜರ್ ಅನ್ನು ಹೊಡೆದು ಕೊಂದು, ಸುಟ್ಟು ಹಾಕಿತ್ತು. ಈ ಘಟನೆ ಭಾರೀ ಆಕ್ರೋಶಕ್ಕೂ ಕಾರಣವಾಗಿ, ಆಗಿನ ಪ್ರಧಾನಿ ಇಮ್ರಾನ್ ಖಾನ್ ಅದನ್ನು ಪಾಕಿಸ್ತಾನಕ್ಕೆ ಅವಮಾನದ ದಿನ ಎಂದು ಕರೆದಿದ್ದರು.