– ಮನೋರಂಜನ್ ಮನೆಯಲ್ಲಿ ಕ್ರಾಂತಿಕಾರಿಗಳ ಸಾವಿರಾರು ಪುಸ್ತಕಗಳು ಪತ್ತೆ
– ಬಿಡುವಿನ ವೇಳೆ ಮಕ್ಕಳಿಗೆ ಕರಾಟೆ ಹೇಳಿಕೊಡ್ತಿದ್ದ ಆರೋಪಿ
ನವದೆಹಲಿ/ಮೈಸೂರು: ಸಂಸತ್ತಿಗೆ (Lok Sabha) ನುಗ್ಗಿದ ಆರೋಪಿ ಮನೋರಂಜನ್ ವಾಸವಿದ್ದ ಮೈಸೂರಿನ ವಿಜಯನಗರ (Mysuru Vijayanagara) ನಿವಾಸಕ್ಕೆ ಭಯೋತ್ಪಾದನಾ ನಿಗ್ರಹ ದಳದ ಅಧಿಕಾರಿಗಳೊಂದಿಗೆ ನಗರದ ಹಿರಿಯ ಪೊಲೀಸ್ (Mysuru Police) ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜೊತೆಗೆ ಪೋಷಕರೊಂದಿಗೂ ಮಾತನಾಡಿ ಕೆಲ ಮಾಹಿತಿ ಕಲೆಹಾಕಿದ್ದಾರೆ.
ಆರೋಪಿ ಮನೋರಂಜನ್ (Manoranjan) ಕ್ರಾಂತಿಕಾರಿ ನಾಯಕರ ಜೀವನ ಚರಿತ್ರೆಗಳಿಂದ ಪ್ರಭಾವಿತನಾಗಿದ್ದ, ಪ್ರಾಥಮಿಕ, ಪ್ರೌಢ ಹಾಗೂ ಕಾಲೇಜು ಶಿಕ್ಷಣವನ್ನು ಮೈಸೂರಿನಲ್ಲಿ ಪೂರ್ಣಗೊಳಿಸಿ, ಬಳಿಕ ಬೆಂಗಳೂರಿನ ಕಾಲೇಜೊಂದರಲ್ಲಿ BA ಪದವಿ ಪಡೆದಿದ್ದ.
Advertisement
Advertisement
ಎಂಜಿನಿಯರಿಂಗ್ ಮುಗಿಸಿ 9 ವರ್ಷ ಕಳೆದರೂ ಯಾವುದೇ ಉದ್ಯೋಗಕ್ಕೆ ಪ್ರಯತ್ನಿಸದೇ ದೇಶದ ವಿವಿಧೆಡೆಗಳಲ್ಲಿ ಸುತ್ತಾಡುತ್ತಿದ್ದ ಮನೋರಂಜನ್ ಕರಾಟೆಪಟುವಾಗಿದ್ದು, ಬಿಡುವಿನ ವೇಳೆಯಲ್ಲಿ ಮಕ್ಕಳಿಗೆ ಕರಾಟೆ ಹೇಳಿಕೊಡುತ್ತಿದ್ದ. ಪೋಷಕರಿಗೂ ಮಗ ಏನು ಮಾಡುತ್ತಿದ್ದಾನೆ ಅನ್ನುವ ಮಾಹಿತಿ ಇರಲಿಲ್ಲ. ಪೋಷಕರು ಉದ್ಯೋಗ ಮಾಡುವಂತೆ ಒತ್ತಾಯಿಸುತ್ತಿದ್ದರು. ಕೊನೇ ಪಕ್ಷ ಊರಿನಲ್ಲಿರುವ ಜಮೀನು ನೋಡಿಕೊಳ್ಳುವಂತೆ ಹೇಳಿದ್ದರು. ಅದ್ಯಾವುದು ಪ್ರಯೋಜನವಾಗದಿದ್ದಾಗ ಮಗನ ಬಗ್ಗೆ ತಲೆ ಕೆಡಿಸಿಕೊಳ್ಳುವುದನ್ನೇ ಬಿಟ್ಟಿದ್ದರು. ಈಗ ಮಗನ ಕೃತ್ಯದಿಂದ ಆಘಾತಕ್ಕೆ ಒಳಗಾಗಿದ್ದು, ತಪ್ಪು ಮಾಡಿದ್ದಲ್ಲಿ ತಕ್ಕ ಶಿಕ್ಷೆಯಾಗಲಿ ಎಂದು ಮನೋರಂಜನ್ ತಂದೆ ದೇವರಾಜೇಗೌಡ ಹೇಳಿದ್ದಾರೆ. ಇದನ್ನೂ ಓದಿ: ಒಂದಲ್ಲ ಮೂರು ಬಾರಿ ಮನೋರಂಜನ್‌ಗೆ ಪ್ರತಾಪ್ ಸಿಂಹ ಕಚೇರಿಯಿಂದ ಸಿಕ್ಕಿತ್ತು ಪಾಸ್!
Advertisement
Advertisement
ಮನೋರಂಜನ್ ಸ್ವಾಮಿ ವಿವೇಕಾನಂದ ಅವರ ಪುಸ್ತಕ ಸೇರಿದಂತೆ ಮಹಾನ್ ಕ್ರಾಂತಿಕಾರಿ ನಾಯಕರ (Revolutionary Leaders) ವಿಚಾರಧಾರೆಗಳಿಂದ ಪ್ರಭಾವಿತನಾಗಿದ್ದಾನೆ. ಪುಸ್ತಕಗಳಿಗೆ ಸಾವಿರಾರು ರೂ. ಖರ್ಚು ಮಾಡುತ್ತಿದ್ದ. 40 ಸಾವಿರಕ್ಕೂ ಹೆಚ್ಚು ಪುಸ್ತಕಗಳು ಮನೆಯಲ್ಲಿವೆ. ನನ್ನ ಮಗನಿಗೆ ಸಮಾಜ ಸೇವೆ ಮಾಡಬೇಕೆಂಬ ಹಂಬಲವಿತ್ತು. ಒಂದು ವೇಳೆ ಅವನು ತಪ್ಪು ಮಾಡಿದ್ದರೆ ಗಲ್ಲಿಗೆ ಹಾಕಿ ಎಂದಿದ್ದಾರೆ ದೇವರಾಜೇಗೌಡ. ಇದನ್ನೂ ಓದಿ: ನಿರುದ್ಯೋಗದಿಂದ ಬೇಸತ್ತು ಸಾಯೋದೇ ಲೇಸು ಅನ್ನುತ್ತಿದ್ದಳು- ಸಂಸತ್ತಿನ ಹೊರಗಡೆ ಬಂಧಿಸಲ್ಪಟ್ಟವಳ ತಾಯಿ ಮಾತು
ಮನೋರಂಜನ್, ಮೂಲತಃ ಹಾಸನ ಜಿಲ್ಲೆ ಅರಕಲಗೂಡು ತಾಲ್ಲೂಕಿನ ಮಲ್ಲಾಪುರ ಗ್ರಾಮದ ದೇವರಾಜೇಗೌಡ ಮತ್ತು ಶೈಲಜಾ ದಂಪತಿಯ ಪುತ್ರ. ಈತನಿಗೆ ಸಹೋದರಿಯೂ ಇದ್ದಾರೆ. ದೇವರಾಜೇಗೌಡ ಕೃಷಿಕರಾಗಿದ್ದು, ಮಲ್ಲಾಪುರದಲ್ಲಿ 20 ಎಕರೆ ಜಮೀನಿನಲ್ಲಿ ಬೇಸಾಯ ಮಾಡುತ್ತಿದ್ದಾರೆ. ಮಕ್ಕಳ ಶಿಕ್ಷಣಕ್ಕಾಗಿ ಮೈಸೂರು ನಗರಕ್ಕೆ ಬಂದು ನೆಲೆಸಿದ್ದರು. ವಿಜಯನಗರದ 2ನೇ ಹಂತದಲ್ಲಿ ಸ್ವಂತ ಮನೆ ಕಟ್ಟಿಕೊಂಡು ವಾಸಿಸುತ್ತಿದ್ದಾರೆ. ಆಗಾಗ್ಗೆ ಊರಿಗೆ ಹೋಗಿ ವ್ಯವಸಾಯ ನೋಡಿಕೊಳ್ಳುತ್ತಿದ್ದಾರೆ ಎಂದು ವಿಚಾರಣೆ ಬಳಿಕ ಅಧಿಕಾರಿಗಳಿಂದ ತಿಳಿದುಬಂದಿದೆ.
ಕ್ರಾಂತಿಕಾರಿ ನಾಯಕರ ಪುಸ್ತಕಗಳು ಪತ್ತೆ: ಮನೋರಂಜನ್ ಕೊಠಡಿಯನ್ನು ಪರಿಶೀಲಿಸಿದಾಗ ಕ್ರಾಂತಿಕಾರಿ ನಾಯಕರ ಜೀವನ ಚರಿತ್ರೆ, ಹೋರಾಟಗಳ ಪುಸ್ತಕಗಳು ಪತ್ತೆಯಾಗಿವೆ. ಈ ಬಗ್ಗೆ ನೆರೆಯ ನಿವಾಸಿಗಳು ಮತ್ತು ಮನೋರಂಜನ್ ಸ್ನೇಹಿತರನ್ನೂ ಅಧಿಕಾರಿಗಳು ಮಾತನಾಡಿಸಿ ಅಗತ್ಯ ಮಾಹಿತಿ ಪಡೆದುಕೊಂಡಿದ್ದಾರೆ.
ಇಲ್ಲಿನ ಉಪಪೊಲೀಸ್ ಆಯುಕ್ತ ಗಜೇಂದ್ರ ಪ್ರಸಾದ್ ಅವರೂ ಸಹ ಮನೋರಂಜನ್ ತಂದೆ ದೇವರಾಜೇಗೌಡ ಅವರಿಂದ ಮಾಹಿತಿ ಪಡೆದುಕೊಂಡಿದ್ದಾರೆ. ವಿಜಯನಗರ ಠಾಣೆ ಪೊಲೀಸರೊಂದಿಗೆ ಭಯೋತ್ಪಾದಕ ನಿಗ್ರಹ ದಳದ ಅಧಿಕಾರಿ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದಾರೆ. ಇದನ್ನೂ ಓದಿ: ಶ್ರೀಕೃಷ್ಣ ಜನ್ಮಭೂಮಿ ವಿವಾದ – ಶಾಹಿ ಈದ್ಗಾ ಮಸೀದಿ ಸಮೀಕ್ಷೆಗೆ ಹೈಕೋರ್ಟ್ ಅನುಮತಿ