ನವದೆಹಲಿ: ದೆಹಲಿಯ ಜೈಲಿನಲ್ಲಿಯೇ ಆರೋಪಿಗಳು ಮೋಜು-ಮಸ್ತಿ ಮಾಡುತ್ತಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಈ ವೀಡಿಯೋವನ್ನು ನೀರಜ್ ಬಾವಾನ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ದೆಹಲಿ ದರೋಡೆಕೋರ ನೀರಜ್ ಬವಾನಾ ಸಹೋದರರಾದ ರಾಹುಲ್ ಕಲಾ ಮತ್ತು ನವೀನ್ ಬಾಲಿಯನ್ನು ಪ್ರತ್ಯೇಕ ಪ್ರಕರಣಗಳಿಗೆ ಸಂಬಂಧಿಸಿದಂತೆ ಪೊಲೀಸರು ಬಂಧಿಸಿದ್ದರು. ಆಗಸ್ಟ್ 5 ರಂದು ಇವರನ್ನು ಬಂಧಿಸುವುದಕ್ಕಿಂತಲೂ ಮೊದಲು ಮಂಡೋಲಿ ಜೈಲಿನಲ್ಲಿದ್ದರು. ಆದರೆ ವಿಶೇಷ ಸೆಲ್ನಿಂದ ಅವರನ್ನು ಆಗಸ್ಟ್ 10ರವರೆಗೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ:ಕಾರು ಸಮೇತ ಭದ್ರಾ ನಾಲೆಗೆ ಬಿದ್ದು ನಾಲ್ವರು ಆತ್ಮಹತ್ಯೆಗೆ ಯತ್ನ
Advertisement
Advertisement
ಸದ್ಯ ಈ ವೀಡಿಯೋ ವಿಶೇಷ ಸೆಲ್ನದ್ದೋ ಅಥವಾ ಮಂಡೋಲಿ ಜೈಲಿನದ್ದೋ ಎಂಬುವುದರ ಬಗ್ಗೆ ಮಾಹಿತಿಯಿಲ್ಲ. ಈ ಕುರಿತಂತೆ ಪೊಲೀಸ್ ಮಹಾನಿರ್ದೇಶಕ ಸಂದೀಪ್ ಗೋಯಲ್ರನ್ನು ಪ್ರಶ್ನಿಸಿದಾಗ ಈ ಬಗ್ಗೆ ನಾವು ಪರಿಶೀಲಿಸಬೇಕಾಗಿದೆ ಎಂದು ಹೇಳಿದ್ದಾರೆ. ವೀಡಿಯೋದ ಅಸಲಿ ಸತ್ಯದ ಬಗ್ಗೆ ಸದ್ಯ ಪೊಲೀಸರಿಂದ ಯಾವುದೇ ಪ್ರತಿಕ್ರಿಯೆ ದೊರೆತಿಲ್ಲ.
Advertisement
View this post on Instagram
Advertisement
24 ಸೆಕೆಂಡ್ ಇರುವ ಈ ವೀಡಿಯೋದಲ್ಲಿ ಆರೋಪಿಗಳು ಮದ್ಯ, ತಿಂಡಿ ಮತ್ತು ಧೂಮಪಾನ ಮಾಡುತ್ತಿರುವುದನ್ನು ಕಾಣಬಹುದಾಗಿದೆ. ಎಲ್ಲರೂ ಹಾಸಿಗೆ ಮೇಲೆ ಕುಳಿತುಕೊಂಡಿದ್ದರೆ, ಒಬ್ಬರು ಈ ದೃಶ್ಯವನ್ನು ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ. ಈ ವೀಡಿಯೋ ವಿಚಾರವಾಗಿ ದೆಹಲಿ ಪೊಲೀಸ್ ವಕ್ತಾರ ಚಿನ್ಮೊಯ್ ಬಿಸ್ವಾಲ್, ವೀಡಿಯೋ ಬಗ್ಗೆ ಯಾವುದೇ ದೃಢಿಕರಿಸಲಾಗಿಲ್ಲ ಮತ್ತು ಲಾಕ್ ಅಪ್ನಲ್ಲಿ ಮದ್ಯವನ್ನು ನೀಡಲಾಗುವುದಿಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ:1ರಿಂದ 8ನೇ ತರಗತಿ ಶಾಲೆಗಳ ಆರಂಭ – ಆ. 30 ರಂದು ಸಿಎಂ ನೇತೃತ್ವದಲ್ಲಿ ಸಭೆ