ಕಲಬುರಗಿ: ಇತ್ತೀಚಿಗೆ ರೌಡಿಶೀಟರ್ ವಿರೇಶ್ ಸಾರಥಿಯನ್ನ ಬರ್ಬರವಾಗಿ ಹತ್ಯೆ ಮಾಡಿದ್ದ ಆರೋಪಿಯನ್ನು ಕಲಬುರಗಿಯ (Kalaburagi) ಉಪನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಶಿವಾನಂದ ಅಲಿಯಾಸ್ ಶಿವು ಕುಂಬಾರ ಬಂಧಿತ ಆರೋಪಿ.
ಮಾ.4 ರಂದು ಬೆಳಗ್ಗೆ ರೌಡಿಶೀಟರ್ ವಿರೇಶ್ ಸಾರಥಿಯನ್ನು ಕಬ್ಬಿಣದ ರಾಡ್‌ನಿಂದ ಹೊಡೆದು ಶಿವು ಕೊಲೆ ಮಾಡಿದ್ದ. ರಾತ್ರಿಯೆಲ್ಲಾ ಎಣ್ಣೆ ಪಾರ್ಟಿ ಮಾಡಿ ಬೆಳಗ್ಗಿನ ಜಾವ ಕೊಲೆ ಮಾಡಲಾಗಿದೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ. ಇದನ್ನೂ ಓದಿ: ಹಿಂದುಳಿದ ವರ್ಗಗಳ ನಿರುದ್ಯೋಗಿಗಳಿಗೆ ಬಂಪರ್ – 3 ಲಕ್ಷ ರೂ. ವರೆಗೆ ಸಹಾಯಧನ
ರೌಡಿಶೀಟರ್ ವಿರೇಶ್, ಆರೋಪಿ ಶಿವುಗೆ 50,000 ರೂ. ಹಣ ನೀಡುವಂತೆ ಪೀಡಿಸುತ್ತಿದ್ದ. ಇದರಿಂದ ಕೋಪಗೊಂಡ ಶಿವು ರೌಡಿಶೀಟರ್ ವಿರೇಶ್‌ನನ್ನು ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಮಂಡ್ಯ | ವಿದ್ಯುತ್ ಪ್ರವಹಿಸಿ ಚೆಸ್ಕಾಂ ಸಿಬ್ಬಂದಿ ಸಾವು – ಅಧಿಕಾರಿಗಳ ನಿರ್ಲಕ್ಷ್ಯ ಆರೋಪ
ಕಲಬುರಗಿಯ ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.