ಬೆಂಗಳೂರು: ಐಪಿಎಸ್ ಅಧಿಕಾರಿಯೊಬ್ಬರ ಹೆಸರಲ್ಲಿ ನಕಲಿ ಇನ್‍ಸ್ಟಾಗ್ರಾಮ್ ಖಾತೆ ತೆರದು ಬಡ ಹೆಣ್ಣು ಮಕ್ಕಳಗಾಗಿ ಎಂದು ಹೇಳಿ ಚಂದಾ ವಸೂಲಿ ಮಾಡುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ.
ಐಪಿಎಸ್ ಅಧಿಕಾರಿ ಡಿ.ರೂಪ ಅವರ ಹೆಸರಲ್ಲಿ ಕೆಲ ಆನ್‍ಲೈನ್ ಕಳ್ಳರು ಇನ್‍ಸ್ಟಾಗ್ರಾಮ್ ತೆರದಿದ್ದಾರೆ. ಈ ಕುರಿತು ಟ್ವೀಟ್ ಮೂಲಕ ಸ್ಪಷ್ಟನೆ ನೀಡಿರುವ ಡಿ.ರೂಪಾ ಅವರು, ಇದು ನನ್ನ ಖಾತೆಯಲ್ಲ. ನಾನು ಇನ್‍ಸ್ಟಾಗ್ರಾಮ್ ಖಾತೆಯನ್ನೇ ಹೊಂದಿಲ್ಲ. ಆರೋಪಿಗಳ ವಿರುದ್ಧ ಸೈಬರ್ ಕ್ರೈಂ ವಿಭಾಗಕ್ಕೆ ದೂರು ನೀಡುತ್ತೇನೆ ಎಂದು ತಿಳಿಸಿದ್ದಾರೆ.
Advertisement
This is not my account. I'm not on Instagram. This is brought to my notice only now. Will complain to Cyber crime police station @CIDKarnataka . Meanwhile request those on @instagram to report this issue https://t.co/DBYNDzzTog
— D Roopa IPS (@D_Roopa_IPS) December 28, 2018
Advertisement
ಏನಿದು ಪ್ರಕರಣ?:
ಡಿ.ರೂಪಾ ಅವರ ಹೆಸರಲ್ಲಿ ನಕಲಿ ಇನ್‍ಸ್ಟಾಗ್ರಾಮ್ ಖಾತೆ ತೆರೆದಿರುವ ಆರೋಪಿಗಳು, ಬಡ ಹೆಣ್ಣು ಮಕ್ಕಳ ಏಳಿಗೆಗೆ ಸಹಾಯ ಮಾಡಿ ಎಂದು ಪೋಸ್ಟ್ ಮಾಡಿದ್ದಾರೆ. ಇದನ್ನು ನಂಬಿದ ಸಾರ್ವಜನಿಕರು ಪೇಟಿಯಂ ಮೂಲಕ ಹಣ ಹಾಕಿದ್ದಾರೆ. ಇದನ್ನು ನೋಡಿದ ಸುರೇಶ್ ಹೊಸಮನಿ ಎಂಬವರು, ಮೇಡಂ ನೀವು ಯಾವ ಉದ್ದೇಶಕ್ಕಾಗಿ ಹಣ ವಸೂಲಿ ಮಾಡುತ್ತಿದ್ದೀರಿ. ಇದು ನಿಜವೇ ಎಂದು ಪ್ರಶ್ನಿಸಿ ಟ್ವೀಟ್ ಮಾಡಿದ್ದಾರೆ. ಈ ಮೂಲಕ ಹಣ ವಸೂಲಿ ಪ್ರಕರಣ ರೂಪಾ ಅವರ ಗಮನಕ್ಕೆ ಬಂದಿದೆ.
Advertisement
ಸಾರ್ವಜನಿಕರಿಂದ ಹಣ ವಂಚಿಸುವ ಜಾಲಕ್ಕೆ ಬೀಳದಂತೆ ರೂಪ ಅವರು ಟ್ವೀಟ್ ಮೂಲಕ ಮನವಿ ಮಾಡಿಕೊಂಡಿದ್ದಾರೆ. ಈ ಟ್ವೀಟ್ ಅನ್ನು ಸಿಐಡಿ ಮತ್ತು ಸಿಎಂ ಕುಮಾರಸ್ವಾಮಿ ಟ್ಯಾಗ್ ಮಾಡಿದ್ದಾರೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv