ಬೀದರ್: ನ್ಯಾಯಾಧೀಶರ ಮನೆಯಲ್ಲಿ 8 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿ ಪರಾರಿಯಾಗಿದ್ದ ಆರೋಪಿಗಳು ಮಹಾರಾಷ್ಟ್ರದ (Maharashtra) ಲಾತೂರು (Latur) ರೈಲ್ವೆ ಸ್ಟೇಷನ್‌ನಲ್ಲಿ ಬಂಧನಕ್ಕೊಳಗಾಗಿದ್ದಾರೆ.ಇದನ್ನೂ ಓದಿ: ಜಾತಿಗಣತಿ | ಮನೆ ಮನೆಗೆ ಹೋಗಿ ಮತ್ತೆ ಸಮೀಕ್ಷೆ ಮಾಡ್ಬೇಕು – ಶಾಸಕ ಬಾಲಕೃಷ್ಣ ಆಗ್ರಹ
ಏ.3 ರಂದು ಬೀದರ್ (Bidar) ನಗರದ ಜನವಾಡ (Janawad) ರಸ್ತೆಯಲ್ಲಿರುವ 2ನೇ ಜೆಎಂಎಫ್‌ಸಿ ನ್ಯಾಯಾಧೀಶ ಎಂ.ಡಿ.ಶೇಜ್ ಚೌಟಾಯಿ ವಸತಿ ಗೃಹದಲ್ಲಿ ಕಳ್ಳತನವಾಗಿತ್ತು. ಮಹಾರಾಷ್ಟ್ರದಿಂದ ರೈಲಿನಲ್ಲಿ ಬೀದರ್‌ಗೆ ಬಂದಿದ್ದ ಕಳ್ಳರು, ಮೂರು ದಿನ ಬೀದರ್‌ನಲ್ಲಿ ಉಳಿದು ಕಳ್ಳತನದ ಸ್ಕೆಚ್ ಹಾಕಿದ್ದರು. ಕುಟುಂಬದ ಸದಸ್ಯರೆಲ್ಲರೂ ಸೇರಿ ಕೊಪ್ಪಳಕ್ಕೆ ಹೋಗಿದ್ದಾಗ 109 ಗ್ರಾಂ ಬಂಗಾರ, 50 ಗ್ರಾಂ ಬೆಳ್ಳಿಯ ಆಭರಣಗಳು ಸೇರಿ ಒಟ್ಟು 8 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣವನ್ನು ಕದ್ದು, ಪರಾರಿಯಾಗಿದ್ದರು.
ಖದೀಮರ ಕಳ್ಳತನದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಈ ಕುರಿತು ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸದ್ಯ ಮಹಾರಾಷ್ಟ್ರದ ಲಾತೂರು ರೈಲ್ವೆ ಸ್ಟೇಷನ್‌ನಲ್ಲಿ ಕಳ್ಳತನ ಮಾಡಿದ್ದ ತಂದೆ, ಮಗ ಸೇರಿ ಮೂವರು ಖದೀಮರನ್ನು ಅರೆಸ್ಟ್ ಮಾಡಿದ್ದಾರೆ.ಇದನ್ನೂ ಓದಿ: ಮುಸ್ಲಿಂ ಸಮುದಾಯದ ಜಾತಿಗಳನ್ನು ಒಂದು ಮಾಡಿ ಮುಸ್ಲಿಮರೇ ಹೆಚ್ಚು ಅಂತ ಬಿಂಬಿಸಿದ್ದಾರೆ: ಛಲವಾದಿ ನಾರಾಯಣಸ್ವಾಮಿ