85 ವರ್ಷದ ವೃದ್ಧೆಯನ್ನು ಕೊಂದು ಅತ್ಯಾಚಾರ – ಆರೋಪಿ ಬಂಧನ

Public TV
1 Min Read
RAPE ARREST copy

ಹಾಸನ: 85 ವರ್ಷದ ವೃದ್ಧೆಯನ್ನು (Old Woman) ಬರ್ಬರವಾಗಿ ಕೊಂದು (Murder) ಬಳಿಕ ಅತ್ಯಾಚಾರವೆಸಗಿದ (Rape) ಅಮಾನುಷ ಘಟನೆ ಹಾಸನ (Hassan) ಜಿಲ್ಲೆಯ ಅರಸೀಕೆರೆ ತಾಲೂಕಿನ ಯರೇಹಳ್ಳಿ ಗ್ರಾಮದಲ್ಲಿ ನಡೆದಿದೆ.

ಅರಸೀಕೆರೆ (Arasikere) ತಾಲೂಕಿನ ಯರೇಹಳ್ಳಿ ಗ್ರಾಮದ ಮಿಥುನ್ ಕುಮಾರ್ (32) ಅತ್ಯಾಚಾರ ಎಸಗಿದ ಆರೋಪಿಯಾಗಿದ್ದು, ಐದು ವರ್ಷಗಳ ಹಿಂದೆಯೂ ಇದೇ ರೀತಿ ವೃದ್ಧೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದ. ಅದೇ ಸುಳಿವು ಹಿಡಿದು ವಿಚಾರಣೆ ನಡೆಸಿದಾಗ ತಾನು ಮಾಡಿದ ಪಾಪ ಕೃತ್ಯವನ್ನು ಒಪ್ಪಿಕೊಂಡಿದ್ದು, ಪೊಲೀಸರು ಈತನನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಮದ್ಯದ ಬಾಟ್ಲಿ, ಕಲ್ಲಿನಿಂದ ಜಜ್ಜಿ ವ್ಯಕ್ತಿಯ ಬರ್ಬರ ಕೊಲೆ 

RAPE copy

ಏಪ್ರಿಲ್ 1ರಂದು ತನ್ನ ಜಮೀನಿನ ಬಳಿ ತೆರಳಿದ್ದ ವೃದ್ಧೆಯನ್ನು ಅತ್ಯಾಚಾರ ಮಾಡಲು ಯತ್ನಿಸಿದ್ದು, ಇದಕ್ಕೆ ಪ್ರತಿರೋಧ ತೋರಿದ ವೃದ್ಧೆಯ ತಲೆಮೇಲೆ ಕಲ್ಲು ಎತ್ತಿಹಾಕಿ ಹತ್ಯೆಗೈದು ಬಳಿಕ ಅತ್ಯಾಚಾರ ಎಸಗಿದ್ದಾನೆ.

ತನ್ನ ಜಮೀನಿನ ಬಳಿ ತೆರಳಲು ಹೋಗಿ ದಾರಿತಪ್ಪಿ ಬೇರೆಡೆ ಹೋಗಿದ್ದ ಅಜ್ಜಿಯನ್ನು ಜಮೀನಿನ ಬಳಿ ಬಿಡುವುದಾಗಿ ಬೈಕಿನಲ್ಲಿ ಕರೆದೊಯ್ದು ನಿರ್ಜನ ಪ್ರದೇಶದಲ್ಲಿ ಅತ್ಯಾಚಾರ ಎಸಗಲು ಯತ್ನಿಸಿದ್ದಾನೆ. ಈ ದೌರ್ಜನ್ಯವನ್ನು ವಿರೋಧಿಸಿದಾಗ ಬರ್ಬರವಾಗಿ ಕೊಂದು ನಂತರ ವೃದ್ಧೆಯ ಮೇಲೆ ಅತ್ಯಾಚಾರವೆಸಗಿದ್ದಾನೆ. ತಾಯಿ ಮನೆಗೆ ಬಂದಿಲ್ಲ ಎಂದು ಏಪ್ರಿಲ್ 2ರಂದು ಕುಟುಂಬಸ್ಥರು ಹುಡುಕಾಡಿದ ವೇಳೆ ಯರೇಹಳ್ಳಿ ಗ್ರಾಮದ ಜಮೀನಿನಲ್ಲಿ ವೃದ್ಧೆಯ ಮೃತದೇಹ ಸಂಪೂರ್ಣ ಬೆತ್ತಲೆ ಸ್ಥಿತಿಯಲ್ಲಿ ಪತ್ತೆಯಾಗಿದೆ. ಇದನ್ನೂ ಓದಿ: ಚಿಕನ್ ಸಾರು ಖಾಲಿಯಾಗಿದ್ದಕ್ಕೆ ಜಗಳ- ಮಗನನ್ನೇ ಕೊಂದ ಅಪ್ಪ!

STOP RAPE CRIME

ಅನುಮಾನಾಸ್ಪದ ಸಾವು ಕೇಸು ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿದಾಗ ಈ ಅಮಾನುಷ ಕೃತ್ಯ ಬಯಲಾಗಿದ್ದು, ಕೊಲೆ ಅತ್ಯಾಚಾರ ಖಾತ್ರಿಯಾಗುತ್ತಲೇ ಅನುಮಾನಾಸ್ಪದ ಸಾವು ಪ್ರಕರಣವನ್ನು ಕೊಲೆ ಅತ್ಯಾಚಾರ ಕೇಸ್ ಆಗಿ ಬದಲಾಯಿಸಿ ಆರೋಪಿಯನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ವಾರ್ನ್ ಮಾಡಿದ್ರೂ ಕ್ಯಾರೇ ಎನ್ನದೆ ಚುಡಾಯಿಸಿದವನಿಗೆ ಚಪ್ಪಲಿ ಏಟು ಕೊಟ್ಟ ಯುವತಿ!

Share This Article