ಶಿವಮೊಗ್ಗ: ಶಿಕಾರಿಪುರದ (Shikaripur) ತಾಲೂಕಿನ ಭದ್ರಾಪುರ ಗ್ರಾಮದಲ್ಲಿ ಮನೆಯಲ್ಲೇ ಅಕ್ರಮವಾಗಿ ಬಂದೂಕು (Gun) ತಯಾರಿಸುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಲಕ್ಷ್ಮಣಪ್ಪ (67) ಎಂದು ಗುರುತಿಸಲಾಗಿದೆ. ಆರೋಪಿ ತನ್ನ ಹಳೆಯ ಮನೆಯಲ್ಲಿ ಅಕ್ರಮವಾಗಿ 7 ನಾಡ ಬಂದೂಕು ತಯಾರಿಸಿ ಮಾರಾಟ ಮಾಡಲು ಇಟ್ಟುಕೊಂಡಿದ್ದ. ಬಂದೂಕು ಸಂಗ್ರಹಿಸಿಟ್ಟಿರುವ ಬಗ್ಗೆ ಬಂದ ಮಾಹಿತಿ ಮೇರೆಗೆ ಪೊಲೀಸರು ಸರ್ಚ್ ವಾರೆಂಟ್ ಪಡೆದು ದಾಳಿ ನಡೆಸಿದ್ದರು. ಈ ವೇಳೆ ಬಂದೂಕುಗಳು ಪತ್ತೆಯಾಗಿದ್ದು, ಅವುಗಳನ್ನು ವಶಕ್ಕೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: ಮ್ಯೂಲ್ ಅಕೌಂಟ್ ಸೈಬರ್ ದಂಧೆಗೆ ಸಿಐಡಿ ಶಾಕ್ – ಏಕಕಾಲಕ್ಕೆ ನೂರಾರು ಕಡೆ ದಾಳಿ
ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ದಾಳಿಯಲ್ಲಿ ಡಿಎಸ್ಪಿ ಕೇಶವ ಕೆ.ಇ , ಸಿಪಿಐ ಸಂತೋಷ್ ಎಂ.ಪಾಟೀಲ್, ಎಸ್ಐ ಶರತ್ ಹೆಚ್ ಪಿ., ಸಿಬ್ಬಂದಿ ಕೊಟ್ರೇಶಪ್ಪ, ಪ್ರದೀಪ್.ಕೆ. ನಾಗರಾಜ ಹಾಗೂ ರವಿ ನಾಯ್ಕ, ರವಿಕುಮಾರ್ ಭಾಗವ ಭಾಗಿಯಾಗಿದ್ದರು. ತನಿಖಾ ತಂಡಕ್ಕೆ ಪೊಲೀಸ್ ಅಧೀಕ್ಷಕ ಬಿ. ನಿಖಿಲ್ ಅಭಿನಂದಿಸಿದ್ದಾರೆ. ಇದನ್ನೂ ಓದಿ: ಉದ್ಯಮಿ ಅಪಹರಣ ಕೇಸ್ – ಸಿಸಿಬಿಯಿಂದ ರೌಡಿ ಶೀಟರ್ ಯಶಸ್ವಿನಿ ಗೌಡ ಅರೆಸ್ಟ್


