ಲೋಕಾಯುಕ್ತ ಅಂತ ಹೇಳ್ಕೊಂಡು 8ನೇ ಕ್ಲಾಸ್ ಓದಿದವನಿಂದ ಮಹಿಳಾ ಆಧಿಕಾರಿಗೆ ಬ್ಲ್ಯಾಕ್‌ಮೇಲ್!

Public TV
2 Min Read
Chikkaballapura Crime

– ನಗರಸಭೆ ಪೌರಾಯುಕ್ತೆಗೆ ಕರೆ ಮಾಡಿ ಹಣಕ್ಕೆ ಬೇಡಿಕೆ; 10 ತಿಂಗಳ ನಂತ್ರ ಆರೋಪಿ ಅಂದರ್‌

ಚಿಕ್ಕಬಳ್ಳಾಪುರ: ಇದು ಆನ್‍ಲೈನ್ ಜಮಾನ, ದಿನಕ್ಕೊಂದು ರೀತಿಯ ತಂತ್ರಗಳನ್ನು ಬಳಸಿ ಸೈಬರ್‌ ವಂಚಕರು ಕನ್ನ ಹಾಕುತ್ತಿರುವ ಪ್ರಕರಣಗಳು ಬೆಳಕಿಗೆ ಬರುತ್ತಲೇ ಇವೆ. ಆದರಿಲ್ಲಿ, 8ನೇ ತರಗತಿ ಓದಿದ ಹೈನಾತಿ ತಾನೂ ಲೋಕಾಯುಕ್ತ ಅಧಿಕಾರಿ (Lokayukta Officer) ಅಂತ ಹೇಳಿಕೊಂಡು ಮಹಿಳಾ ಅಧಿಕಾರಿಯನ್ನೇ ಬ್ಲ್ಯಾಕ್‌ಮೇಲ್‌ ಮಾಡಿದ್ದಾನೆ. ಸದ್ಯ ಗ್ರಹಚಾರ ಕೆಟ್ಟು ಈಗ ಚಿಕ್ಕಬಳ್ಳಾಪುರ ಪೊಲೀಸರ (Chikkaballapura Police) ಅತಿಥಿಯಾಗಿಯಾಗಿದ್ದಾನೆ.

cyber crime mobile phone

ಚನ್ನಕೇಶವ ರೆಡ್ಡಿ (24) ಬಂಧಿತ ಆರೋಪಿ. ಆಂಧ್ರಪ್ರದೇಶದ ಸತ್ಯಸಾಯಿ ಜಿಲ್ಲೆಯ ಚಿರುವುಮುನೆಪ್ಪಗಾರಿಪಲ್ಲಿಯ ನಿವಾಸಿ. ಇದನ್ನೂ ಓದಿ: ತಾಪಮಾನ ಹೆಚ್ಚಳದಿಂದಾಗಿ ಮುಂಜಾಗ್ರತಾ ಕ್ರಮ – ಬಿಸಿಲಿನಿಂದ ಅಸ್ವಸ್ಥಗೊಂಡವರಿಗೆ ಹೀಟ್ ಸ್ಟ್ರೋಕ್ ವಾರ್ಡ್ ಆರಂಭ

ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ನಗರಸಭೆಯ ಪೌರಾಯುಕ್ತೆ ಗೀತಾ ಮೊಬೈಲ್ ನಂಬರ್‌ಗೆ ಕರೆ ಮಾಡಿರೋ ಈತ ತಾನು ಬೆಂಗಳೂರು ಲೋಕಾಯುಕ್ತ ಸಂಸ್ಥೆಯ ಅಧಿಕಾರಿ, ನಿಮ್ಮ ನಗರಸಭೆಯಲ್ಲಿ ಲಕ್ಷಾಂತರ ರೂಪಾಯಿ ಅವ್ಯವಹಾರ ಮಾಡಿದ್ದೀರಿ, ನಿಮ್ಮ ಮೇಲೆ ಲೋಕಾಯುಕ್ತ ಕೇಂದ್ರ ಕಚೇರಿಗೆ ದೂರು ಬಂದಿದೆ. ನಿಮ್ಮ ಕಚೇರಿ ಮೇಲೆ ರೇಡ್ ಮಾಡಿಬಿಡ್ತೀವಿ ಅಂತ ಹೆದರಿಸಿದ್ದಾನೆ. ರೇಡ್ ಮಾಡಬಾರದು ಅಂದ್ರೆ ನಾವ್ ಹೇಳೀದಷ್ಟು ದುಡ್ಡು ಅರ್ಧ ಗಂಟೆಯಲ್ಲಿ ಕೊಡಬೇಕು ಅಂತ ಬ್ಲ್ಯಾಕ್‌ಮೇಲ್‌ ಮಾಡಿದ್ದಾನೆ.

Karnataka Lokayukta

ವಂಚಕನ ಮಾತುಗಳಿಗೆ ಹೆದರದ ಪೌರಾಯುಕ್ತೆ ಗೀತಾ ಚಿಕ್ಕಬಳ್ಳಾಪುರ ಲೋಕಾಯುಕ್ತ ಸಂಸ್ಥೆಯ ಎಸ್ಪಿಯೊಂದಿಗೆ ಮಾತನಾಡಿ, ಗೌರಿಬಿದನೂರು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರಿನ ಮೇರೆಗೆ ತನಿಖೆ ನಡೆಸಿದ ಪೊಲೀಸರು 10 ತಿಂಗಳ ನಂತರ ಆರೋಪಿ ಚನ್ನಕೇಶವರೆಡ್ಡಿಯನ್ನ ಬಂಧಿಸಿದ್ದಾರೆ. ಇದನ್ನೂ ಓದಿ: ಶಿವಣ್ಣ ನಿವಾಸಕ್ಕೆ ಯಶ್‌ ದಂಪತಿ ಭೇಟಿ

ಅಂದಹಾಗೆ ಈ ಕಿಲಾಡಿ ನಕಲಿ ಆಫೀಸರ್ ಓದಿರೋದು ಬರೀ 8ನೇ ಕ್ಲಾಸ್. ಆಂಧ್ರ ಬಿಟ್ಟು ಬಂದು ಬೆಂಗಳೂರಿನಲ್ಲೇ ಬಿಡಾರ ಹೂಡಿದ್ದ ಆಸಾಮಿ ರಾಜ್ಯದ ಮೂಲೆ ಮೂಲೆಯಲ್ಲಿರೋ ಅಧಿಕಾರಿಗಳಿಗೆ ಇದೇ ರೀತಿ ಬ್ಲ್ಯಾಕ್‌ಮೇಲ್ ಮಾಡಿ ಹಣ ಮಾಡೋ ದಂಧೆ ಮಾಡಿಕೊಂಡಿರೋದು ಪೊಲೀಸರ ವಿಚಾರಣೆ ವೇಳೆ ಗೊತ್ತಾಗಿದೆ. ಈತನ ಜೊತೆ ಮತ್ತೋರ್ವ ಆರೋಪಿ ಧನುಷ್‌ ರೆಡ್ಡಿ ಸಹ ಕೃತ್ಯದಲ್ಲಿ ಭಾಗಿಯಾಗಿದ್ದು, ಆತ ತಲೆಮರೆಸಿಕೊಂಡಿದ್ದು ಆತನಿಗಾಗಿಯೂ ಪೊಲೀಸರು ಹುಡಕಾಟ ನಡೆಸಿದ್ದಾರೆ.

ಅಸಲಿಗೆ ಈ ಕಿಲಾಡಿಗಳು ಯಾರದ್ದೋ ಹೆಸರಿನಲ್ಲಿ ಸಿಮ್ ಕಾರ್ಡ್ ಪಡೆದು ಆ ನಂಬರಿನಿಂದ ಅಧಿಕಾರಿಗಳನ್ನ ಹೆದರಿಸುತ್ತಿದ್ರಂತೆ. ಒಂದು ಸಿಮ್‌ ನಿಂದ ಒಬ್ಬ ಅಧಿಕಾರಿಗೆ ಕರೆ ಮಾಡಿದ್ರೆ, ಮತ್ತೊಬ್ಬರಿಗೆ ಆ ಸಿಮ್‌ ಕಾರ್ಡ್‌ ಬಳಸುತ್ತಿರಲಿಲ್ಲವಂತೆ. ಹಾಗಾಗಿ ಆರೋಪಿ ಹಿಡಿಯೋದೇ ಪೊಲೀಸರಿಗೆ ಸವಾಲಾಗಿತ್ತು. ಆದ್ರೂ ಪಟ್ಟು ಬಿಡದ ಪೊಲೀಸರು ನಕಲಿ ಲೋಕಾಯುಕ್ತ ಅಧಿಕಾರಿಯನ್ನ ಬಂಧಿಸಿ ಜೈಲಿಗಟ್ಟಿದ್ದಾರೆ. ಇದನ್ನೂ ಓದಿ: ದಾವಣಗೆರೆ | ಸಾಲಬಾಧೆ ತಾಳಲಾರದೇ ಸಿಆರ್‌ಪಿಎಫ್ ಯೋಧ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ

Share This Article