ತುಮಕೂರು: ಮಹಾನಗರ ಪಾಲಿಕೆ ಸಿಬ್ಬಂದಿಗೆ ಬ್ಲಾಕ್ ಮೇಲ್ ಮಾಡಿದ್ದ ಆರೋಪದ ಮೇರೆಗೆ ಬಿಗ್ ಬಾಸ್ ಖ್ಯಾತಿಯ ಮಂಜು ಪಾವಗಡ (Manju Pavagada) ಸಹೋದರ ಪ್ರದೀಪ್‍ಗೆ ಧರ್ಮದೇಟು ಹಾಕಿದ್ದಾರೆ.
ಪ್ರದೀಪ್ ಸದ್ಯಕ್ಕೆ ವಾರಪತ್ರಿಕೆಯೊಂದರ ಸಂಪಾದಕನಾಗಿ ಕೆಲಸ ಮಾಡುತ್ತಿದ್ದಾನೆ. ಈತ ಸಬ್ಸಿಡಿ ಸಾಲ (Subsidized Loan) ಮಂಜೂರು ಮಾಡಿಕೊಡುವಂತೆ ನಗರ ಜೀವನೋಪಾಯ ಕೇಂದ್ರಕ್ಕೆ ಹೋಗಿದ್ದ. ಈ ವೇಳೆ ಲಂಚದಾಸೆ ತೋರಿಸಿ ವೀಡಿಯೋ ಮಾಡಿಕೊಂಡಿದ್ದ. ಬಳಿಕ ಈ ವೀಡಿಯೋ ತೋರಿಸಿ ನಗರ ಜೀವನೋಪಾಯ ಕೇಂದ್ರದಲ್ಲಿ ಸಿಆರ್‌ಸಿ ಆಗಿ ಕೆಲಸ ಮಾಡುತ್ತಿದ್ದ ಯುವತಿಗೆ ನಿರಂತರ ಬ್ಲಾಕ್ ಮೇಲ್ ಮಾಡುತ್ತಿದ್ದ ಆರೋಪ ಕೇಳಿ ಬಂದಿದೆ. ಇದನ್ನೂ ಓದಿ: PFIನಿಂದ ಬೆದರಿಕೆ – ಐವರು RSS ನಾಯಕರಿಗೆ Y ಭದ್ರತೆ
Advertisement
Advertisement
ಘಟನೆ ಕುರಿತು ನಿನ್ನೆ ಸಂಜೆ ಆ ಯುವತಿ ಕೆಲಸ ಮಾಡುವ ಜಾಗಕ್ಕೆ ಬಂದು ಬೆದರಿಕೆ ಹಾಕುತ್ತಿದ್ದಾಗ ಅಲ್ಲಿದ್ದವರು ಧರ್ಮದೇಟು ಹಾಕಿದ್ದಾರೆ. ಅಷ್ಟೇ ಅಲ್ಲದೇ ಮಹಾನಗರ ಪಾಲಿಕೆ ಆವರಣದಲ್ಲಿ ಪ್ರದೀಪ್‍ನ ಜೊತೆ ಬಂದಿದ್ದ ನಕಲಿ ಪತ್ರಕರ್ತರು ಸೇರಿ ಹ್ಯೂಮನ್ ರೈಟ್ಸ್ ಎಂದು ಹೇಳಿಕೊಂಡು ಬಂದವರಿಗೂ ಗೂಸಾ ಬಿದ್ದಿದೆ. ಘಟನೆಗೆ ಸಂಬಂಧಿಸಿ ಬ್ಲಾಕ್ ಮೇಲ್‍ಗೆ ಮುಂದಾಗಿದ್ದ ನಾಲ್ವರು ತುಮಕೂರು ನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ತುಮಕೂರು (Tumkur) ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ಕರ್ನಾಟಕದ ಜನರಿಗೆ ಪವರ್ ಸ್ಟ್ರೋಕ್ – ನವರಾತ್ರಿ ಹಬ್ಬಕ್ಕೆ ಕರೆಂಟ್ ಶಾಕ್ ಗಿಫ್ಟ್