ಬಳ್ಳಾರಿ: ಜಿಲ್ಲೆಯ ಕಂಪ್ಲಿ ತಾಲೂಕಿನ ಮೆಟ್ರಿ ಬಳಿಯ ಚಿನ್ನಾಪೂರ ಗುಡ್ಡದಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು ಭಾರೀ ಆತಂಕ ಸೃಷ್ಟಿಸಿದೆ.
ಸೋಮವಾರ ಸಂಜೆ 7 ಗಂಟೆ ಸುಮಾರಿಗೆ ಬೆಂಕಿ ಹೊತ್ತಿಕೊಂಡಿದ್ದು, ಮೂರರಿಂದ 4 ಕಿಲೋಮೀಟರ್ ನಷ್ಟು ಬೆಂಕಿ ವ್ಯಾಪಿಸಿದೆ.
Advertisement
Advertisement
ಗುಡ್ಡದಲ್ಲಿ ಕರಡಿ, ಚಿರತೆ, ನವಿಲುಗಳು ಸೇರಿ ಅನೇಕ ಕಾಡು ಪ್ರಾಣಿಗಳಿದ್ದು, ಪ್ರಾಣಿ, ಪಕ್ಷಿ ಸಂಕುಲಕ್ಕೆ ಹಾನಿಯಾಗುವ ಭೀತಿ ಎದುರಾಗಿದೆ. ಇದನ್ನೂ ಓದಿ: ಸಾವಿನ ಸಂಖ್ಯೆ ಮುಚ್ಚಿಡಲು ಶವಗಳನ್ನು ನದಿಗೆ ಎಸೆದಿದ್ದರಿಂದ ತ್ರಿವೇಣಿ ಸಂಗಮ ಮಲಿನವಾಗಿದೆ: ಜಯಾ ಬಚ್ಚನ್
Advertisement
Advertisement
ಇನ್ನೂ ಘಟನೆ ನಡೆದ 3 ಗಂಟೆಗಳ ಬಳಿಕ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದು, ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ರೂ ನಿರ್ಲಕ್ಷ್ಯವಹಿಸಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. ಇದನ್ನೂ ಓದಿ: ಸಿಸಿಟಿವಿ ಎದುರಲ್ಲೇ ಲಂಚ ಸ್ವೀಕಾರ ಆರೋಪ – ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಸವಿತಾ ಸಸ್ಪೆಂಡ್