– ಏರ್‌ಶೋಗೆ ತೆರಳಿದ್ದ ಅಗ್ನಿಶಾಮಕ ವಾಹನಗಳು
ದಾವಣಗೆರೆ: ಜಾನುವಾರುಗಳಿಗೆ ಸಂಗ್ರಹಣೆ ಮಾಡಿದ್ದ 12 ಲೋಡ್ ರಾಗಿ ಹುಲ್ಲಿನ ಬಣವೆಗೆ ಆಕಸ್ಮಿಕವಾಗಿ ಬೆಂಕಿ (Fire Accident) ತಗುಲಿ, ಸಂಪೂರ್ಣ ಭಸ್ಮವಾದ ಘಟನೆ ಜಗಳೂರು (Jagalu) ತಾಲೂಕಿನ ವ್ಯಾಸಗೊಂಡನಹಳ್ಳಿಯಲ್ಲಿ ನಡೆದಿದೆ.
Advertisement
ಗ್ರಾಮದ ತಿಪ್ಪೇಸ್ವಾಮಿ ಎನ್ನುವ ರೈತರಿಗೆ (Farmer) ಸೇರಿದ್ದ ರಾಗಿ ಹುಲ್ಲಿನ ಬಣವೆಯಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದೆ. ಈ ವೇಳೆ ಗ್ರಾಮಸ್ಥರು ಬೆಂಕಿ ನಂದಿಸಲು ಹರ ಸಾಹಸಪಟ್ಟಿದ್ದಾರೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ.
Advertisement
Advertisement
ಬೆಂಗಳೂರಿನ (Bengaluru) ಏರ್ ಶೋಗೆ ಅಗ್ನಿಶಾಮಕ ವಾಹನಗಳು ತೆರಳಿದ್ದವು. ಇದರಿಂದ ಬೆಂಕಿ ನಂದಿಸಲು ಅಗ್ನಿಶಾಮಕ ವಾಹನಗಳು ಸಿಗದೆ ರೈತರು ಪರದಾಡಿದ್ದಾರೆ. ಅಗ್ನಿ ಅವಘಡದಿಂದ ಸುಮಾರು 2 ಲಕ್ಷ ರೂ. ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.
Advertisement
ಜಗಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.