ಬೀದರ್: ಆಕಸ್ಮಿಕ ಬೆಂಕಿ ಹೊತ್ತಿಕೊಂಡಿರುವ ಪರಿಣಾಮ 14 ಎಕರೆ ಜೋಳ, 6 ಎಕರೆಯಲ್ಲಿ ಬೆಳೆದಿದ್ದ ಕಬ್ಬು, ಪರಂಗಿ ಹಣ್ಣು ಜೊತೆಗೆ 120 ಮಾವಿನ ಗಿಡಗಳು ಬೆಂಕಿಗಾಹುತಿಯಾಗಿರುವ ಘಟನೆ ಜಿಲ್ಲೆಯ ಭಾಲ್ಕಿ (Bhalki) ಪಟ್ಟಣದ ಹೊರವಲಯದ ತೋಟದಲ್ಲಿ ನಡೆದಿದೆ.
ಪ್ರಶಾಂತ್ ಪಾಟೀಲ್ ಎಂಬುವವರಿಗೆ ಸೇರಿದ 6 ಎಕರೆ ಹೊಲದಲ್ಲಿ ಬೆಳೆದಿದ್ದ ಕಬ್ಬು, ಪಪ್ಪಾಯಿ, ಮಾವು ಹಾಗೂ ಭರತ್ ನಾಟೀಕರ್ ಎಂಬುವವರ 14 ಎಕರೆಯ ಜೋಳ ಸುಟ್ಟು ಭಸ್ಮವಾಗಿದೆ.ಇದನ್ನೂ ಓದಿ: ಜಾತಿಗಣತಿ ವರದಿ ಯಾರ ಪರವೂ ಅಲ್ಲ, ವಿರುದ್ಧವೂ ಅಲ್ಲ: ಹೆಚ್.ಸಿ.ಮಹದೇವಪ್ಪ
ಸುಮಾರು 120 ಮಾವಿನ ಗಿಡಗಳಿಗೆ ಬೆಂಕಿ ತಗುಲಿದ್ದು, ಅಪಾರ ಪ್ರಮಾಣದ ಹಾನಿಯಾಗಿದೆ. ಜೊತೆಗೆ ಅಕ್ಕಪಕ್ಕದ ಹೊಲದಲ್ಲಿನ ಬೆಳೆಗಳಿಗೂ ಹಾನಿಯಾಗಿದೆ. ಟ್ರಾನ್ಸ್‌ಫಾರ್ಮ್‌ನಲ್ಲಿನ ವಿದ್ಯುತ್ ಪ್ರವಹಸಿ ಬೆಂಕಿ ತಗುಲಿರುವ ಶಂಕೆ ವ್ಯಕ್ತವಾಗಿದೆ.
ನಿರಂತರವಾಗಿ ಕರೆ ಮಾಡಿದರೂ ಸಕಾಲಕ್ಕೆ ಸ್ಥಳಕ್ಕೆ ಬಾರದ ಅಗ್ನಿಶಾಮಕ ದಳದ ಸಿಬ್ಬಂದಿ ವಿರುದ್ಧ ರೈತರು ಕಿಡಿಕಾರಿದ್ದಾರೆ. ಬಳಿಕ ಬೆಂಕಿ ನಂದಿಸಿದ್ದು, ಭಾಲ್ಕಿ (Bhalki) ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಇದನ್ನೂ ಓದಿ: ಸೈಕೋಪಾತ್‌ನಿಂದ ಬಾಲಕಿಯ ಅತ್ಯಾಚಾರಕ್ಕೆ ಯತ್ನಿಸಿ ಕೊಲೆ – ಹತ್ಯೆ ಖಂಡಿಸಿ ತೀವ್ರ ಪ್ರತಿಭಟನೆ