ಶೂಟಿಂಗ್ ವೇಳೆ ಅಪಘಾತ: ಕೈ ಕಳೆದುಕೊಳ್ಳುತ್ತಿದ್ದೆ ಎಂದ ಸೈಫ್ ಅಲಿಖಾನ್

Public TV
1 Min Read
Saif Ali Khan

ಬಾಲಿವುಡ್ ನ ಖ್ಯಾತ ನಟ ಸೈಫ್ ಅಲಿಖಾನ್ (Saif Ali Khan) ಅವರ ಆರೋಗ್ಯದಲ್ಲಿ ದಿಢೀರ್ ಏರುಪೇರಾಗಿದೆ ಎನ್ನುವ ಮಾಹಿತಿ ಇತ್ತು. ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹೇಳಲಾಗಿತ್ತು. ಮುಂಬೈನ ಕೋಕಿಲಾಬೆನ್ ಆಸ್ಪತ್ರೆಯಲ್ಲಿ (Hospital) ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವರದಿ ಆಗಿತ್ತು. ಆದರೆ, ಈ ಕುರಿತಂತೆ ಯಾವುದೇ ಅಧಿಕೃತ ಮಾಹಿತಿ ಇರಲಿಲ್ಲ.

saif ali khan

ಇದೀಗ ಸ್ವತಃ ಸೈಫ್ ಅಲಿ ಖಾನ್ ಅವರೇ ಈ ಕುರಿತಂತೆ ಮಾತನಾಡಿದ್ದಾರೆ. ಜೊತೆಗೆ ಆಸ್ಪತ್ರೆಯಿಂದ ಮನೆಗೂ ಮರಳಿದ್ದಾರೆ. ಸೈಫ್ ಅವರ ಮೊಣಕಾಲಿಗೆ ಗಂಭೀರ ಗಾಯವಾಗಿ, ಭುಜದ ಮೂಳೆ ಕೂಡ ಮುರಿದಿದೆ ಎಂದು ಹೇಳಲಾಗಿತ್ತು. ಗಂಭೀರವಾಗಿಯೇ ಗಾಯವಾಗಿದ್ದರಿಂದ ಶಸ್ತ್ರ ಚಿಕಿತ್ಸೆಗೆ ಒಳಗಾಗುವ ಸಾಧ್ಯತೆ ಇದೆ ಎನ್ನುವ ವದಂತಿಗಳು ಹಬ್ಬಿದ್ದವು. ಆದರೆ, ಕೈಗೆ ಮಾತ್ರ ಪೆಟ್ಟಾಗಿದ್ದು, ಅದಕ್ಕೆ ಚಿಕಿತ್ಸೆ ಪಡೆದಿದ್ದಾರೆ. ಉಳಿದಂತೆ ಭುಜದ ಮೂಳೆಗೆ ಯಾವುದೇ ಸಮಸ್ಯ ಆಗಿಲ್ಲ.

saif ali khan

ದೇವರ ಸಿನಿಮಾದ ಶೂಟಿಂಗ್ ವೇಳೆ ಅಪಘಾತವಾಗಿತ್ತು. ನಂತರದ ದಿನಗಳಲ್ಲಿ ಕೈ ನೋವು ಕಾಣಿಸಿಕೊಂಡಿದ್ದರಿಂದ ಸೈಫ್ ಆಸ್ಪತ್ರೆಗೆ ದಾಖಲಾಗಿದ್ದರು. ಒಂದು ವೇಳೆ ಅವರು ಸುಮ್ಮನೆ ಇದ್ದಿದ್ದರೆ ಕೈ ಕಳೆದುಕೊಳ್ಳುವಂತಹ ಸ್ಥಿತಿ ನಿರ್ಮಾಣವಾಗುತ್ತಿತ್ತು ಎಂದಿದ್ದಾರೆ.

 

ಆಸ್ಪತ್ರೆಯಲ್ಲಿ ಸೈಫ್ ಇದ್ದಾಗ ಪತ್ನಿ ಕರೀನಾ (Kareena Kapoor) ಕೂಡ ಅವರ ಜೊತೆಯೇ ಇದ್ದು ಆರೈಕೆ ಮಾಡಿದ್ದಾರೆ. ಚಿಕಿತ್ಸೆ ಮುಗಿಸಿಕೊಂಡು ಪತಿಯನ್ನು ಕರೆದುಕೊಂಡು ಮನೆಗೆ ಮರಳಿದ್ದಾರೆ. ಆತಂಕ ಪಡುವಂಥದ್ದು ಏನೂ ಆಗಿಲ್ಲವೆಂದು ಸ್ಪಷ್ಟ ಪಡಿಸಿದ್ದಾರೆ.

Share This Article