ಶೂಟಿಂಗ್ ವೇಳೆ ಅವಘಡ: ಅಮಿತಾಭ್ ಬಚ್ಚನ್ ಗೆ ಗಂಭೀರ ಗಾಯ

Public TV
1 Min Read
amitabh bachchan 1

ಪ್ರಾಜೆಕ್ಟ್ ಕೆ ಚಿತ್ರದ ಚಿತ್ರೀಕರಣದ ವೇಳೆ ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಭ್ ಬಚ್ಚನ್ (Amitabh Bachchan) ಗಾಯಗೊಂಡಿದ್ದಾರೆ. ಹೈದರಾಬಾದ್ ನಲ್ಲಿ ನಡೆಯುತ್ತಿದ್ದ ಸಾಹಸ ದೃಶ್ಯದ ಚಿತ್ರೀಕರಣದ ವೇಳೆ ಅವರು ಗಂಭೀರ ಗಾಯಗೊಂಡಿದ್ದು ಚಿಕಿತ್ಸೆ ಬಳಿಕ ಅವರಿಗೆ ಬೆಡ್ ರೆಸ್ಟ್‌ಗೆ ವೈದ್ಯರು ಸಲಹೆ ನೀಡಿದ್ದಾರೆ.

amitabh bachchan 2

ಸಾಮಾಜಿಕ ಜಾಲತಾಣಗಳಲ್ಲಿ ಖುದ್ದು ಮಾಹಿತಿ ನೀಡಿರುವ ಅಮಿತಾಭ್ ಬಚ್ಚನ್, ಚಿತ್ರೀಕರಣದ ವೇಳೆ ಪಕ್ಕೆಲುಬಿನ ಕಾರ್ಟಿಲೇಜ್ ಮುರಿದಿದೆ, ಹೈದರಾಬಾದ್ ನ ಎಐಜಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಬಳಿಕ ಮುಂಬೈನಲ್ಲಿರುವ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿರುವುದಾಗಿ ಹೇಳಿದ್ದಾರೆ. ಇದನ್ನೂ ಓದಿ: ಬಿಗ್ ಬಾಸ್ ಸ್ಪರ್ಧಿ ಗಂಗವ್ವಗೆ ಮನೆ ಕಟ್ಟಲು ಸಹಾಯ ಮಾಡಿದ ನಟ ನಾಗಾರ್ಜುನ

amitabh bachchan 3

ಗಾಯವು ತೀವ್ರ ನೋವಿನಿಂದ ಕೂಡಿದ್ದು ನಡೆದಾಡಲು ಕಷ್ಟವಾಗಿದೆ ಮತ್ತು ಉಸಿರಾಟದ ಸಮಸ್ಯೆಯೂ ಇದೆ. ಅದಾಗ್ಯೂ ಯಾವುದೇ ತೊಂದರೆಗಳಿಲ್ಲ, ಚೇತರಿಕೆ ಕಾಣಲು ಹಲವು ವಾರಗಳ ಸಮಯ ಬೇಕಾಗಬಹುದು ಹೀಗಾಗಿ ಯಾವ ಹಿತೈಷಿಗಳನ್ನು ಭೇಟಿಯಾಗಲು ಸಾಧ್ಯವಾಗುತ್ತಿಲ್ಲ, ಮನೆಯ ಬಳಿ ಯಾರು ಬರಬೇಡಿ ಅಗತ್ಯ ಮಾಹಿತಿಯನ್ನು ಹಂಚಿಕೊಳ್ಳಲಾಗುವುದು ಎಂದು ಅವರು ತಮ್ಮ ಪೊಸ್ಟ್ ನಲ್ಲಿ ತಿಳಿಸಿದ್ದಾರೆ.

amitabh bachchan

ಇನ್ನು ಈ ಬಗ್ಗೆ ವೈಜಯಂತಿ ಮೂವೀಸ್ ತಂಡ ಟ್ವೀಟ್ ಮಾಡಿದ್ದು, 5 ದಶಕಗಳಿಗೂ ಹೆಚ್ಚು ಕಾಲ ಮನರಂಜನೆ ನೀಡಿದ ಶಕ್ತಿಕೇಂದ್ರ ನೀವು, ಈ ಬಾರಿ ಬಿಡುಗಡೆ ಮಾಡಿದ ಹೊಸ ಅವತಾರವನ್ನು ಜಗತ್ತಿಗೆ ತೋರಿಸಲು ಕಾಯಲು ಸಾಧ್ಯವಿಲ್ಲ. ಶಕ್ತಿ ಯಾವಾಗಲೂ ನಿಮ್ಮೊಂದಿಗೆ ಇರಲಿ ಮತ್ತು ನೀವು ನಮ್ಮ ಹಿಂದಿರುವ ಶಕ್ತಿ ಎಂದು ಹೇಳಿದೆ.

157 1574037 amitabh bachchan full hd wallpaper amitabh bachchan full 1200x900 1
amitabh bachchan full hd wallpaper

ಪ್ರಾಜೆಕ್ಟ್ ಕೆ (Project K)  ಹಿಂದೆ ಮತ್ತು ತೆಲುಗಿನಲ್ಲಿ ಸಿದ್ದವಾಗುತ್ತಿರುವ ದ್ವಿಭಾಷಾ ಸಿನಿಮಾವಾಗಿದ್ದು ಅಶ್ವಿನ್ ಇದನ್ನು ನಿರ್ದೇಶಿಸುತ್ತಿದ್ದಾರೆ. ಪ್ರಭಾಸ್  (Prabhas) ಮತ್ತು ದೀಪಿಕಾ ಪಡುಕೋಣೆ (Deepika Padukone) ಪ್ರಮುಖ ಪ್ರಾತ್ರದಲ್ಲಿದ್ದು, ಜನವರಿ 12, 2024ಕ್ಕೆ ಚಿತ್ರ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *