ತಮಿಳಿನ ಹೆಸರಾಂತ ನಟ ಸೂರ್ಯಗೆ (Surya) ಶೂಟಿಂಗ್ ವೇಳೆ ತೀವ್ರ ಗಾಯಗಳಾಗಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ (Hospital) ದಾಖಲಿಸಲಾಗಿದೆ. ಕಂಗುವ ಶೂಟಿಂಗ್ ವೇಳೆ ಅವರ ಭುಜದ ಮೇಲೆ ಕ್ಯಾಮೆರಾ ಬಿದ್ದ ಕಾರಣದಿಂದಾಗಿ ಏಟು ಬಿದ್ದಿತ್ತು. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಈ ವಿಷಯ ಕೇಳುತ್ತಿದ್ದಂತೆಯೇ ಸೂರ್ಯನ ಅಭಿಮಾನಿಗಳು ಆತಂಕಕ್ಕೆ ಒಳಗಾಗಿದ್ದರು.
Advertisement
ಈ ಕುರಿತಂತೆ ಸ್ವತಃ ಸೂರ್ಯ ಅವರೇ ಸೋಷಿಯಲ್ ಮಿಡಿಯಾದಲ್ಲಿ ಬರೆದುಕೊಂಡಿದ್ದಾರೆ. ಆತಂಕ ಪಡುವಂಥದ್ದು ಏನೂ ಆಗಿಲ್ಲ. ಚೇತರಿಸಿಕೊಳ್ಳುತ್ತಿದ್ದೇನೆ. ಹಾರೈಸಿದ ನಿಮ್ಮೆಲ್ಲರಿಗೂ ಧನ್ಯವಾದಗಳು. ಆದಷ್ಟು ಬೇಗ ಮತ್ತೆ ಚಿತ್ರೀಕರಣದಲ್ಲಿ ಭಾಗಿ ಆಗುತ್ತೇನೆ ಎಂದು ಅವರು ಬರೆದುಕೊಂಡಿದ್ದಾರೆ.
Advertisement
Advertisement
ಈ ನಡುವೆ ‘ಕಂಗುವ’ (Kanguva) ಸಿನಿಮಾ ಟೀಮ್ ನಿಂದ ಭರ್ಜರಿ ಅಪ್ ಡೇಟ್ ಸಿಕ್ಕಿದೆ. ಈ ಸಿನಿಮಾವನ್ನು ಬರೋಬ್ಬರಿ 38 ಭಾಷೆಗಳಲ್ಲಿ ರಿಲೀಸ್ ಮಾಡುವುದಾಗಿ ಚಿತ್ರತಂಡ ಘೋಷಣೆ ಮಾಡಿದೆ. ಜೊತೆಗೆ 3 ಡಿ ತಂತ್ರಜ್ಞಾನದಲ್ಲೂ ಈ ಸಿನಿಮಾವನ್ನು ನೋಡಬಹುದಾಗಿದೆ. ಈ ಸಿನಿಮಾದ ಶೂಟಿಂಗ್ ಇನ್ನೂ ಕಂಪ್ಲೀಟ್ ಆಗಿಲ್ಲ. ಆಗಲೇ ಭರ್ಜರಿ ವ್ಯಾಪಾರ ಕೂಡ ಆರಂಭಿಸಿದೆ. ಭಾರೀ ಮೊತ್ತಕ್ಕೆ ಓಟಿಟಿಗೆ ಸೇಲ್ ಆಗುವ ಮೂಲಕ ಸಂಭ್ರಮವನ್ನು ಇಮ್ಮಡಿಗೊಳಿಸಿದೆ.
Advertisement
ಮೂಲಗಳ ಪ್ರಕಾರ ಅಮೆಜಾನ್ ಪ್ರೈಮ್ ಸಂಸ್ಥೆಯು ಕಂಗುವ ಸಿನಿಮಾದ ಓಟಿಟಿ (OTT) ಹಕ್ಕನ್ನು ಬರೋಬ್ಬರಿ 80 ಕೋಟಿಗೆ ಖರೀದಿ ಮಾಡಿದೆಯಂತೆ. ಇದು ಎಲ್ಲ ಭಾಷೆಯ ಹಕ್ಕುಗಳನ್ನೂ ಒಳಗೊಂಡಿದೆ ಎನ್ನಲಾಗುತ್ತಿದೆ. ಈ ಮಾಹಿತಿಯನ್ನು ಚಿತ್ರತಂಡವೇ ಬಹಿರಂಗ ಪಡಿಸಿದೆ ಎಂದು ಕೆಲ ಮಾಧ್ಯಮಗಳ ವರದಿ ಮಾಡಿವೆ.
ಸ್ಟುಡಿಯೋ ಗ್ರೀನ್ನಡಿ ಕೆ.ಇ. ಜ್ನಾನ ವೇಲ್ ರಾಜ ನಿರ್ಮಿಸಿ, ಶಿವ (Shiva) ನಿರ್ದೇಶಿಸುತ್ತಿರುವ ಈ ಚಿತ್ರವು ಪ್ರಾರಂಭವಾದಾಗಿನಿಂದ ಅಭಿಮಾನಿಗಳ ವಲಯದಲ್ಲಿ ಸಾಕಷ್ಟು ಕುತೂಹಲ ಕೆರಳಿಸಿದೆ. ಬಹುಕೋಟಿ ವೆಚ್ಚದ ಈ ಚಿತ್ರದಲ್ಲಿ ಸೂರ್ಯಗೆ ನಾಯಕಿಯಾಗಿ ಬಾಲಿವುಡ್ ಬೆಡಗಿ ದಿಶಾ ಪಠಾಣಿ (Disha Pathani) ಅಭಿನಯಿಸುತ್ತಿದ್ದು, ಯೋಗಿ ಬಾಬು ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
‘ಕಂಗುವ’ ಚಿತ್ರವು ಹಲವು ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗುತ್ತಿರುವುದರಿಂದ ಎಲ್ಲ ಭಾಷೆಗಳಿಗೂ ಕನೆಕ್ಟ್ ಆಗುವಂತಹ ಶೀರ್ಷಿಕೆಯೊಂದರ ಹುಡುಕಾಟದಲ್ಲಿ ಚಿತ್ರತಂಡ ಇತ್ತು. ಆ ಶೀರ್ಷಿಕೆ ಕೊನೆಗೂ ಸಿಕ್ಕಿದ್ದು, ‘ಕಂಗುವ’ ಎಂದರೆ, ಬೆಂಕಿಯ ಶಕ್ತಿಯುಳ್ಳವನು ಎಂದರ್ಥ. ಇಲ್ಲಿ ನಾಯಕ ಒಬ್ಬ ಸೂಪರ್ ಹೀರೋ ಆಗಿದ್ದು, ಹಲವು ಅವತಾರಗಳಲ್ಲಿ ಕಾಣಿಸಿಕೊಳ್ಳುತ್ತಾನೆ.