ಬೆಂಗಳೂರು: ಅಪಘಾತ ಮಾಡಿ ಆಟೋ ಚಾಲಕ ಪರಾರಿಯಾಗಿದ್ದನು. ಇದೀಗ ಬಾಲಿವುಡ್ ನಟ ಸಂಜಯ್ ದತ್ ಫೋಟೋ ಮೂಲಕ ಆರೋಪಿಯನ್ನು ಪೊಲೀಸರು ಪತ್ತೆ ಮಾಡಿ ಬಂಧಿಸಿದ್ದಾರೆ.
ಕಳೆದ ಎರಡು ದಿನಗಳ ಹಿಂದೆ ಆಟೋ ಚಾಲಕನ ನಿರ್ಲಕ್ಷ್ಯಕ್ಕೆ ನಿವೃತ್ತ ಪೊಲೀಸ್ ಸಿಬ್ಬಂದಿ ರಾಮದಾಸ್ ಮೃತಪಟ್ಟಿದ್ದಾರೆ. ರಾಮದಾಸ್ ನಿವೃತ್ತಿಯಾದ ಬಳಿಕ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಮಗನೊಂದಿಗೆ ವಾಸವಾಗಿದ್ದರು. ಸೋಮವಾರ ಕೆಲಸದ ನಿಮಿತ್ತ ಕೋರಮಂಗಲದಲ್ಲಿರುವ ಕೆಎಸ್‍ಆರ್ ಪಿ ಕಚೇರಿಗೆ ಬಂದಿದ್ದರು. ಕೆಲಸ ಮುಗಿದ ಬಳಿಕ ಮಡಿವಾಳ ಮಾರ್ಕೆಟ್‍ನಲ್ಲಿ ತರಕಾರಿ ತೆಗೆದುಕೊಳ್ಳಲು ರಸ್ತೆ ದಾಟುತ್ತಿದ್ದಾಗ ಒನ್ ವೇನಲ್ಲಿ ಆಟೋ ಬಂದು ಡಿಕ್ಕಿ ಹೊಡೆದು ಆಟೋ ಸಮೇತ ಚಾಲಕ ಪರಾರಿಯಾಗಿದ್ದನು ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಹರಿಶೇಖರನ್ ತಿಳಿಸಿದ್ದಾರೆ.
ಈ ಪ್ರಕರಣ ದಾಖಲಿಸಿಕೊಂಡಿದ್ದ ಮಡಿವಾಳ ಸಂಚಾರಿ ಪೊಲೀಸರು ಆಟೋ ಚಾಲಕನಿಗಾಗಿ ಹುಡುಕಾಟ ನಡೆಸಿದ್ದರು. ಆದರೆ ಪತ್ತೆಯಾಗಿಲ್ಲ. ಆಗ ಸಂಜಯ್ ದತ್ ಅವರ ಫೋಟೋ ಸಹಾಯ ಮಾಡಿತ್ತು. ಆಟೋ ಚಾಲಕ ತನ್ನ ಆಟೋದ ಹಿಂದೆ ಸಂಜಯ್ ದತ್‍ನ ಫೋಟೋ ಹಾಕಿಕೊಂಡಿದ್ದನು. ಬಳಿಕ ಪೊಲೀಸರು ಸಂಜಯ್ ದತ್ ಫೋಟೋ ಹಾಕಿಕೊಂಡಿದ್ದ ಆಟೋಗಳಿಗೆ ಹುಡುಕಾಟ ನಡೆಸಿದ್ದರು. ಕೊನೆಗೆ ಸಿದ್ದಾಪುರ ಬಳಿ ಆಟೋ ಇದೆ ಅನ್ನೋ ಮಾಹಿತಿ ಮೇರೆಗೆ ಆಟೋ ಚಾಲಕ ಶೋಯೆಬ್ ಖಾನ್‍ನ್ನು ಬಂಧಿಸಿ ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡಿದ್ದಾನೆ.
ಸದ್ಯಕ್ಕೆ ಈ ಪ್ರಕರಣ ದಾಖಲಿಸಿಕೊಂಡಿರುವ ಮಡಿವಾಳ ಸಂಚಾರಿ ಪೊಲೀಸರು ಆರೋಪಿ ಬಗ್ಗೆ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
[wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]