ದಾವಣಗೆರೆ: ಆಯತಪ್ಪಿ ಬೈಕಿನಿಂದ ಬಿದ್ದ ಪರಿಣಾಮ ಯುವಕ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಜಿಲ್ಲೆಯ ಆಲೂರು ಹಟ್ಟಿ ಗ್ರಾಮದ ಬಳಿ ನಡೆದಿದೆ.
ಅಭಿಷೇಕ್(28) ಮೃತ ಯುವಕ. ಈ ಘಟನೆ ಶನಿವಾರ ಮಧ್ಯರಾತ್ರಿ ನಡೆದಿದ್ದು, ಅಪಘಾತದಲ್ಲಿ ಮತ್ತೊಬ್ಬ ಯುವಕ ಬೈರೇಶ್‍ಗೆ ಗಂಭೀರವಾಗಿ ಗಾಯಗಳಾಗಿದ್ದು, ಆತನನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.
Advertisement
ಅಭಿಷೇಕ್ ಮತ್ತು ಬೈರೇಶ್ ಇಬ್ಬರು ಬೈಕಿನಲ್ಲಿ ದಾವಣಗೆರೆಯಿಂದ ತಮ್ಮ ಗ್ರಾಮವಾದ ಹೈಗೂರಿಗೆ ಹೋಗುತ್ತಿದ್ದರು. ಆದರೆ ಆಲೂರು ಗಟ್ಟಿಯಲ್ಲಿ ಮಧ್ಯರಾತ್ರಿ ಆದ ಕಾರಣ ಸರಿಯಾಗಿ ದಾರಿ ಕಾಣದೆ ಬೈಕಿನಿಂದ ಇಬ್ಬರೂ ಆಯತಪ್ಪಿ ಬಿದ್ದಿದ್ದಾರೆ. ಪರಿಣಾಮ ಅಭಿಷೇಕ್ ತಲೆಗೆ ತೀವ್ರವಾಗಿ ಪೆಟ್ಟಾಗಿದ್ದು, ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.
Advertisement
ಈ ಘಟನೆ ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.