Connect with us

Crime

ಟ್ರ್ಯಾಕ್ಟರ್‌ಗೆ ಬೈಕ್ ಡಿಕ್ಕಿ – ಡ್ರಾಪ್ ಪಡೆದಿದ್ದ ತಾಯಿ, ಮಗ ಸೇರಿ ಮೂವರ ದುರ್ಮರಣ

Published

on

ಹಾಸನ: ನಿಂತಿದ್ದ ಟ್ರ್ಯಾಕ್ಟರ್‌ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೂವರು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಅರಕಲಗೂಡು ತಾಲೂಕಿನ ಕಾಟ್ನಾಳು ಗ್ರಾಮದ ಬಳಿ ನಡೆದಿದೆ.

ಬೈಕ್ ಸವಾರ ಮಣಿ(27), ಮಂಜುಳ(35) ಮತ್ತು ಮಗ ಆಕಾಶ್(9) ಮೃತ ದುರ್ದೈವಿಗಳು. ಮೃತರು ರಾಮನಾಥಪುರ ಮೂಲದವರು ಎಂದು ತಿಳಿದು ಬಂದಿದೆ. ಬುಧವಾರ ರಾತ್ರಿ ತಾಯಿ ಮತ್ತು ಮಗ ರಾಮನಾಥಪುರದಿಂದ ತಮ್ಮ ಗ್ರಾಮಕ್ಕೆ ತೆರಳುತ್ತಿದ್ದರು.

ಈ ವೇಳೆ ಬೈಕ್ ಸವಾರ ಮಣಿ ಬಳಿ ಡ್ರಾಪ್ ಕೇಳಿ ಬೈಕ್ ಹತ್ತಿದ್ದಾರೆ. ಆದರೆ ಸವಾರನ ನಿರ್ಲಕ್ಷ್ಯದಿಂದ ಕಾಟ್ನಾಳು ಗ್ರಾಮದ ಬಳಿ ನಿಂತಿದ್ದ ಟ್ರ್ಯಾಕ್ಟರ್‌ಗೆ ಡಿಕ್ಕಿ ಹೊಡೆದಿದ್ದಾನೆ. ಪರಿಣಾಮ ಮೂವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಮಾಹಿತಿ ತಿಳಿದು ಕೊಣನೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Click to comment

Leave a Reply

Your email address will not be published. Required fields are marked *