ಚಿಕ್ಕಬಳ್ಳಾಪುರ: ಬೆಂಗಳೂರು-ಹೈದರಾಬಾದ್ (Bengaluru-Hyderabad) ರಾಷ್ಟ್ರೀಯ ಹೆದ್ದಾರಿ ಹಾದುಹೋಗುವ ಚಿಕ್ಕಬಳ್ಳಾಪುರದ (Chikkaballapura) ಚದಲಪುರ ಸರ್ಕಲ್ ಬಳಿ ಎರಡು ಮಹೀಂದ್ರಾ ಥಾರ್ ಕಾರುಗಳು (Two Thar Cars) ಅಪಘಾತಕ್ಕೀಡಾಗಿವೆ.
ಚಿಕ್ಕಬಳ್ಳಾಪುರದಿಂದ ಬೆಂಗಳೂರು ಕಡೆಗೆ ಹೋಗುತ್ತಿದ್ದಾಗ ಮೈನ್ಸ್ ಚೆಕ್ ಪೋಸ್ಟ್ ಬಿಟ್ಟು ತುಸು ದೂರದಲ್ಲಿ ಒಂದು ಥಾರ್ ಕಾರಿನ ಚಕ್ರ ಸ್ಫೋಟಗೊಂಡು ಚಾಲಕನ ನಿಯಂತ್ರಣ ತಪ್ಪಿದೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಮೊದಲ ವರ್ಷಧಾರೆ – ಮುಂದಿನ 4 ದಿನ ರಾಜ್ಯಾದ್ಯಂತ ಮಳೆ
ಈ ವೇಳೆ ಹಿಂದುಗಡೆಯಿಂದ ಬರುತ್ತಿದ್ದ ಮತ್ತೊಂದು ಥಾರ್ ಕಾರು ಅಪಘಾತಕ್ಕೀಡಾದ ಥಾರ್ ಕಾರಿಗೆ ಡಿಕ್ಕಿಯಾಗಿ ನಂತರ ಎರಡೂ ಕಾರು ರಸ್ತೆ ಬದಿಯ ಜಮೀನುಗಳತ್ತ ನುಗ್ಗಿವೆ.
ಅದೃಷ್ಟವಶಾತ್ ಎರಡು ಕಾರಿನಲ್ಲಿದ್ದವರು ಸಣ್ಣ ಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ನಂದಿಗಿರಿಧಾಮ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

