Connect with us

Chitradurga

ಟಾಟಾ ವೆಂಚರ್‍ಗೆ ಮಹಿಂದ್ರ ಮ್ಯಾಕ್ಸಿಮೋ ಡಿಕ್ಕಿ: ಇಬ್ಬರ ಸಾವು, 21 ಮಂದಿಗೆ ಗಾಯ

Published

on

ಚಿತ್ರದುರ್ಗ: ನಿಂತಿದ್ದ ಟಾಟಾ ವೆಂಚರ್‍ಗೆ ಮಹಿಂದ್ರಾ ಮ್ಯಾಕ್ಸಿಮೋ ವಾಹನ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸಾವನ್ನಪಿದ್ದು, 21 ಜನರು ಗಾಯಗೊಂಡ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ.

ಜಿಲ್ಲೆಯ ಹಿರಿಯೂರು ತಾಲೂಕಿನ ಐಮಂಗಲ ಗ್ರಾಮದ ಬಳಿ ಈ ಅಪಘಾತ ಸಂಭವಿಸಿದೆ. ಐಮಂಗಲ ಗ್ರಾಮದ ನಿವಾಸಿ ಜುಬೇರ್ ಅಹ್ಮದ್ (40) ಮತ್ತು ಶಿರಸಿ ನಿವಾಸಿ ಟಿಪ್ಪುಸಾಬ್ (45) ಅಪಘಾತದಲ್ಲಿ ಮೃತಪಟ್ಟ ದುರ್ದೈವಿಗಳು. ಟಾಟಾ ವೆಂಚರ್‍ನಲ್ಲಿ ಒಟ್ಟು 9 ಜನರು ಪ್ರಯಾಣಿಸುತ್ತಿದ್ದರು. ಅವರೆಲ್ಲರೂ ಶವಸಂಸ್ಕಾರಕ್ಕಾಗಿ ಶಿರಸಿಯಿಂದ ತುಮಕೂರಿಗೆ ತೆರಳುತ್ತಿದ್ದರು ಎಂದು ತಿಳಿದುಬಂದಿದೆ.

ಸ್ಥಳಕ್ಕೆ ಐಮಂಗಲ ಠಾಣೆಯ ಪೊಲೀಸರು ಆಗಮಿಸಿದ್ದು, ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಜಿಲ್ಲಾಸ್ಪತ್ರೆಗೆ ಎಸ್‍ಪಿ ರಂಗರಾಜನ್ ಮತ್ತು ಡಿವೈಎಸ್‍ಪಿ ಎಸ್.ನಾಗರಾಜ್ ಭೇಟಿ ನೀಡಿದ್ದಾರೆ.

ಈ ಸಂಬಂಧ ಐಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Click to comment

Leave a Reply

Your email address will not be published. Required fields are marked *