Connect with us

Districts

ರಾಯಚೂರಿನಲ್ಲಿ ಸ್ಕೂಟಿ ಮೇಲೆ ಲಾರಿ ಹರಿದು ಮಹಿಳೆ ಸಾವು

Published

on

ರಾಯಚೂರು: ನಗರದ ಚಂದ್ರಮೌಳೇಶ್ವರ ವೃತ್ತದ ಬಳಿ ಸ್ಕೂಟಿ ಮೇಲೆ ಲಾರಿ ಹರಿದ ಪರಿಣಾಮ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಕಲ್ಮಲ ಗ್ರಾಮದ ನಿವಾಸಿ 36 ವರ್ಷದ ತಾಯಮ್ಮ ಮೃತ ದುರ್ದೈವಿ. ಘಟನೆಯಿಂದ ಸವಾರನಿಗೆ ಸಣ್ಣ-ಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸಿಟಿ ಟಾಕೀಸ್ ನಿಂದ ಚಂದ್ರಮೌಳೇಶ್ವರ ವೃತ್ತದವರೆಗೆ ಕಿರಿದಾದ ರಸ್ತೆಯಿದ್ದು ಭಾರೀ ವಾಹನಗಳ ಸಂಚಾರದಿಂದ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ.

ಅಪಘಾತದ ಬಳಿಕ ಲಾರಿ ಚಾಲಕ ಪೊಲೀಸರಿಗೆ ಶರಣಾಗಿದ್ದಾನೆ. ಈ ಸಂಬಂಧ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚಿಕ್ಕ ರಸ್ತೆಯಲ್ಲಿ ಲಾರಿಗಳ ಓಡಾಟ ನಿಲ್ಲಿಸುವಂತೆ ಸಾಕಷ್ಟು ಮನವಿ ಮಾಡಿದ್ರೂ ಅಧಿಕಾರಿಗಳು ಸ್ಪಂದಿಸದ ಹಿನ್ನೆಲೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Click to comment

Leave a Reply

Your email address will not be published. Required fields are marked *