ಬಾಗಲಕೋಟೆ: ಅಡುಗೆ ಟ್ಯಾಂಕರ್‌ಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಅದರಲ್ಲಿದ್ದ ಎಣ್ಣೆಯಲ್ಲ ರಸ್ತೆಯಲ್ಲಿ ಸೋರಿಕೆಯಾಗಿದೆ. ಹೀಗಾಗಿ ಜನರು ಕೊಡ, ಬಕೆಟ್, ಕ್ಯಾನ್, ಚಂಬಿನಲ್ಲಿ ಎಣ್ಣೆಯನ್ನು ತುಂಬಿಕೊಂಡು ಹೋದ ಘಟನೆ ಇಳಕಲ್-ಹುನಗುಂದ ರಾಷ್ಟ್ರೀಯ ಹೆದ್ದಾರಿ 50 ರಲ್ಲಿ ಘಟನೆ ನಡೆದಿದೆ.
ಎಣ್ಣೆ ತುಂಬಿದ್ದ ಕ್ಯಾಂಟೇನರ್‍ಗೆ ಹಿಂಬದಿಯಿಂದ ಲಾರಿ ಗುದ್ದಿದೆ. ಕ್ಯಾಂಟೇನರ್ ಬಿದ್ದು ಅಡುಗೆ ಎಣ್ಣೆ ಸೊರಿಕೆಯಾಗಿದೆ. ಆದರೆ ಕ್ಯಾಂಟೇನರ್ ಚಾಲಕ ಒಳಗಡೆ ಸಿಕ್ಕಿಹಾಕಿಕೊಂಡಿದ್ದು, ಬದುಕಿದ್ದಾನೊ, ಸತ್ತಿದ್ದಾನೋ ಅಂಥ ತಿರುಗಿ ನೋಡದೆ ಅಡುಗೆ ಎಣ್ಣೆ ತುಂಬಿಕೊಳ್ಳಲು ಜನ ಮುಗಿಬಿದ್ದಿದ್ದಾರೆ. ಕ್ಯಾಂಟೇನರ್ ಬಿದ್ದಿದ್ದರಿಂದ ಎಣ್ಣೆ ಸೋರಿ ರಸ್ತೆಯಲ್ಲ ಆವರಿಸಿದೆ. ಈ ಎಣ್ಣೆಮಯ ರಸ್ತೆಯಲ್ಲಿ ಬಳ್ಳಾರಿ ಮೂಲದ ಸುಮೊ ವಾಹನ, ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಜಾಲಿ ಕಂಟಿಗೆ ನುಗ್ಗಿದೆ. ವಾಹನದ ಒಳಗಡೆ ಇರುವ ಜನರ ಕಡೆ ಯಾರು ಗಮನ ಹರಿಸದೇ ಎಲ್ಲರೂ ಎಣ್ಣೆ ಕಡೆಗೆ ಲಕ್ಷ್ಯ ನೀಡಿದ್ದಾರೆ.
Advertisement
Advertisement
ರಸ್ತೆಯಲ್ಲಿ ಎಣ್ಣೆ ಸಾಕಷ್ಟು ಬಿದ್ದಿದ್ದರಿಂದ ಈಗಾಗಲೇ ಏಳು ಬೈಕ್ ಗಳು ಸ್ಕಿಡ್ ಆಗಿ ಸವಾರರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಇಳಕಲ್ ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ ಅಪಘಾತ ನಡೆದಿದ್ದು, ಸ್ಥಳಕ್ಕೆ ಸಿಪಿಐ, ಪಿಎಸ್‍ಐ, ಪೇದೆಗಳು ಇದ್ದರೂ ಜನದಟ್ಟಣೆ ಇನ್ನೂ ನಿಯಂತ್ರಣಕ್ಕೆ ಬಂದಿಲ್ಲ.
Advertisement
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv