Tumakuru | ಬಸ್, ಬೈಕ್ ನಡುವೆ ಅಪಘಾತ – ಯುಗಾದಿಗೆ ಊರಿಗೆ ತೆರಳುತ್ತಿದ್ದ ಇಬ್ಬರು ಸಾವು

Public TV
1 Min Read
Accident

ತುಮಕೂರು: ಕೆಎಸ್‌ಆರ್‌ಟಿಸಿ (KSRTC) ಬಸ್-ಬೈಕ್ ನಡುವೆ ಅಪಘಾತ ಸಂಭವಿಸಿದ ಪರಿಣಾಮ ಯುಗಾದಿ (Ugadi) ಹಬ್ಬಕ್ಕೆಂದು ಊರಿಗೆ ತೆರಳುತ್ತಿದ್ದ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಚಿಕ್ಕಪಾಲನಹಳ್ಳಿ ಗೇಟ್ ಬಳಿ ನಡೆದಿದೆ.

ಅಪಘಾತ ಉಂಟಾದ ಪರಿಣಾಮ ಬೈಕ್‌ನಲ್ಲಿ ತೆರಳುತ್ತಿದ್ದ ವ್ಯಕ್ತಿ ಹಾಗೂ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತರು ಪಾವಗಡ ಮೂಲದವರಾಗಿದ್ದು, ಯುಗಾದಿ ಹಬ್ಬಕ್ಕೆಂದು ಬೆಂಗಳೂರಿನಿಂದ ಪಾವಗಡಕ್ಕೆ ತೆರಳುತ್ತಿದ್ದರು. ಇದನ್ನೂ ಓದಿ: ನಾಗ್ಪುರಕ್ಕೆ ಭೇಟಿ ನೀಡಲಿದ್ದಾರೆ ಪ್ರಧಾನಿ ಮೋದಿ – ಸ್ಮೃತಿ ಮಂದಿರಕ್ಕೆ ಭೇಟಿ

ಕೋಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ. ಇದನ್ನೂ ಓದಿ: ಮಲ್ಪೆ ಸರ್ವಋತು ಮೀನುಗಾರಿಕಾ ಬಂದರು – ಸಿಸಿಟಿವಿ, ಸರಿಯಾದ ಸೆಕ್ಯೂರಿಟಿ ಇಲ್ಲ

Share This Article