Nelamangala | 2 ಸ್ಕೂಲ್ ಬಸ್‌ಗಳ ನಡುವೆ ಅಪಘಾತ – ಮಕ್ಕಳಿಗೆ ಸಣ್ಣಪುಟ್ಟ ಗಾಯ

Public TV
1 Min Read
Nelamangala School Bus Overturn

ನೆಲಮಂಗಲ: ವಿವಿಧ ಗ್ರಾಮಗಳಿಂದ ಪುಟಾಣಿ ಮಕ್ಕಳನ್ನ ಪಿಕ್ ಮಾಡಿ ಶಾಲೆಗೆ ಬರುವ ಸಂರ‍್ಭದಲ್ಲಿ ಶಾಲಾ ಬಸ್ (School Bus) ಚಾಲಕನ ನಿರ್ಲಕ್ಷ್ಯದಿಂದ ಒಂದು ಶಾಲಾ ವಾಹನ ಪಲ್ಟಿಯಾದ ಪರಿಣಾಮ ಮಕ್ಕಳಿಗೆ ಸಣ್ಣಪುಟ್ಟ ಗಾಯಗಳಾದ ಘಟನೆ ಬೆಂಗಳೂರು (Bengaluru) ಹೊರವಲಯ ನೆಲಮಂಗಲ (Nelamangala) ಉಪವಿಭಾಗದ ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Nelamangala School Bus Overturn 1

ಮಾದಾವರದ ನೈಸ್ ರಸ್ತೆಯ ಪಿಕಾಕ್ ಬಡಾವಣೆಯಲ್ಲಿ ಅಪಘಾತ ನಡೆದಿದೆ. ಘಟನೆಯಲ್ಲಿ ಬೆಂಗಳೂರು ಉತ್ತರ ತಾಲೂಕಿನ ಡೆಲ್ಲಿ ಪಬ್ಲಿಕ್ ಶಾಲೆಯ ವಾಹನ ಪಲ್ಟಿಯಾಗಿದೆ. 30ಕ್ಕೂ ಹೆಚ್ಚಿನ ಮಕ್ಕಳನ್ನ ಶಾಲೆಗೆ ಕರೆತರಲಾಗುತ್ತಿದ್ದು, ಚಾಲಕರ ನಡುವೆ ಪೈಪೋಟಿ ಉಂಟಾಗಿ ನಿರ್ಲಕ್ಷ್ಯದಿಂದ ಚಾಲನೆ ಮಾಡಿದ ಪರಿಣಾಮ ಬಸ್ ಪಲ್ಟಿಯಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ ಮುಂದಿನ 4 ದಿನ ಮಳೆ ಸಾಧ್ಯತೆ – ಇಂದು ರಾಜ್ಯಾದ್ಯಂತ ಯೆಲ್ಲೋ ಅಲರ್ಟ್

ಘಟನೆಯಲ್ಲಿ ಶಾಲಾ ಪುಟಾಣಿ ಮಕ್ಕಳು ಪ್ರಾಣಪಾಯದಿಂದ ಪಾರಾಗಿದ್ದು, ಬಸ್ ಪಲ್ಟಿಯಾದ ಹಿನ್ನೆಲೆ ಕೆಲ ಮಕ್ಕಳಿಗೆ ಸಣ್ಣಪುಟ್ಟ ಗಾಯಗಳಾಗಿದೆ. ಮಕ್ಕಳ ಪೋಷಕರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಆತಂಕ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಮಾದನಾಯಕನಹಳ್ಳಿ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿದ್ದಾರೆ. ಇದನ್ನೂ ಓದಿ: ಟ್ರಕ್ಕಿಂಗ್ ವೇಳೆ ಕಾಡಿನಲ್ಲಿ ನಾಪತ್ತೆಯಾದ ಚಿತ್ರದುರ್ಗದ 10 ಮೆಡಿಕಲ್ ವಿದ್ಯಾರ್ಥಿಗಳು – 6 ಗಂಟೆ ಬಳಿಕ ಪತ್ತೆ

Share This Article