ಬೆಂಗಳೂರು: ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಯುವ ಟೆಕ್ಕಿಗಳು ಪ್ರಾಣ ಕಳೆದುಕೊಂಡಿರುವ ಘಟನೆ ಬ್ಯಾಟರಾಯನಪುರ ಜಂಕ್ಷನ್ ನಲ್ಲಿ ನಡೆದಿದೆ.
ಕಿರಣ್ (34), ಯತೀಶ್( 22) ಅಪಘಾತದಲ್ಲಿ ಮೃತಪಟ್ಟ ದುರ್ದೈವಿಗಳು. ಟೆಕ್ಕಿಗಳಿಬ್ಬರು ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನವರಾಗಿದ್ದು ಕಳೆದ ವರ್ಷವಷ್ಟೇ ಎಂಜಿನಿಯರಿಂಗ್ ಮುಗಿಸಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡು ಅಮೃತಹಳ್ಳಿಯಲ್ಲಿ ವಾಸವಾಗಿದ್ದರು. ವಿಕೇಂಡ್ ಇದ್ದ ಕಾರಣ ಕಿರಣ್ ಮತ್ತು ಯತೀಶ್ ನಿನ್ನೆ ತಡರಾತ್ರಿ ಹೊರಗಡೆ ಬಂದಿದ್ದಾರೆ. ಅಮೃತಹಳ್ಳಿಯಿಂದ ಬಂದು ಬ್ಯಾಟರಾಯಪುರ ಸಿಗ್ನಲ್ ಬಳಿ ಏರ್‌ಪೋರ್ಟ್ ಕಡೆ ಹೋಗಲು ಮುಂದಾಗಿದ್ದಾಗ ವೇಗವಾಗಿ ಬಂದ ಕಾರು ಬೈಕ್‍ಗೆ ರಭಸವಾಗಿ ಡಿಕ್ಕಿ ಹೊಡೆದಿದೆ. ಕಾರು ಗುದ್ದಿದ ರಭಸಕ್ಕೆ ಬುಲೆಟ್ ಬೈಕ್‍ನಲ್ಲಿದ್ದ ಇಬ್ಬರು ಟೆಕ್ಕಿಗಳು 30 ರಿಂದ 50 ಮೀಟರ್ ದೂರ ಹೋಗಿ ಬಿದ್ದಿದ್ದಾರೆ. ಇದನ್ನೂ ಓದಿ: ಚಕ್ಕಲಿ, ನಿಪ್ಪಟ್ಟು ಮಾರಾಟದಿಂದ ಬಂದ ಹಣ ಸಾಲುತ್ತಿಲ್ಲವೆಂದು ಗಾಂಜಾ ಮಾರಿ ಸಿಕ್ಕಿಬಿದ್ರು
ತುಂಬಾ ರಭಸವಾಗಿದ್ದ ಕಾರ್, ಬೈಕ್‍ಗೆ ಡಿಕ್ಕಿ ಹೊಡೆದ ಸ್ಥಳದಿಂದ 30 ಮೀಟರ್ ದೂರದಲ್ಲಿದ್ದ ಸಿಗ್ನಲ್ ಪೋಲ್‍ಗೆ ಗುದ್ದಿ ಅಲ್ಲಿಂದ 20 ಮೀಟರ್ ದೂರ ಹೋಗಿ ಶೋರೂಂ ಒಂದರ ಕಾಂಪೌಂಡ್‍ಗೆ ಗುದ್ದಿ ನಜ್ಜುಗುಜ್ಜಾಗಿ ಹೋಗಿದೆ. ಕಾರು ಚಾಲಕ ಮಾತ್ರ ಪವಾಡ ಸದೃಶ್ಯ ರೀತಿಯಲ್ಲಿ ಬದುಕಿದ್ದು ಕೂಡಲೇ ಘಟನಾ ಸ್ಥಳದಿಂದ ಪರಾರಿಯಾಗಿದ್ದಾನೆ. ಹೆಬ್ಬಾಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಚಾಲಕನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಇದನ್ನೂ ಓದಿ: ಅಪ್ಪ-ಅಮ್ಮ ನಿಮ್ಮ ಆರೋಗ್ಯದ ಬಗ್ಗೆ ಗಮನಕೊಡಿ, ನನ್ನ ಬಗ್ಗೆ ಯೋಚಿಸ್ಬೇಡಿ- ಯೋಧನ ಭಾವುಕ ವೀಡಿಯೋ ವೈರಲ್