ಬೆಂಗಳೂರು: ಟಿವಿಎಸ್ ಗಾಡಿಗೆ ಕ್ಯಾಂಟರ್ ಡಿಕ್ಕಿ ಹೊಡೆದ ಪಡಿಣಾಮ ಸ್ಥಳದಲ್ಲೇ ಬೈಕ್ ಸವಾರ ಸಾವನ್ನಪ್ಪಿರುವ ಘಟನೆ ನಗರದ ರೇಸ್ ಕೋರ್ಸ್ ರಸ್ತೆಯಲ್ಲಿರುವ ರೇಸ್ ವ್ಯೂ ಹೋಟೆಲ್ ಮುಂಭಾಗದಲ್ಲಿ ನಡೆದಿದೆ.
ಸುಮಾರು 50 ವರ್ಷದ ರಾಮ್‍ಚಂದನ್ ಅಪಘಾತದಲ್ಲಿ ಮೃತಪಟ್ಟ ದುರ್ದೈವಿ. ಇಂದು ಬೆಳಗ್ಗೆ ಸುಮಾರು 7.50 ಗಂಟೆಗೆ ರಾಮ್‍ಚಂದನ್ ಮೆಜಸ್ಟಿಕ್‍ನಿಂದ ಶಿವಾನಂದ ಸರ್ಕಲ್‍ಗೆ ನ್ಯೂಸ್ ಪೇಪರ್ ಹಾಕಲು ತೆರಳುತ್ತಿದ್ದರು. ಈ ಸಂದರ್ಭದಲ್ಲಿ ರೇಸ್ ಕೋರ್ಸ್ ರಸ್ತೆಯಲ್ಲಿ ಅತಿ ವೇಗವಾಗಿ ಹಿಂಬದಿಯಿಂದ ಕ್ಯಾಂಟರ್ ಬಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಇದರ ಪರಿಣಾಮ ಚಂದನ್ ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಅಪಘಾತ ನಡೆದ ಸ್ಥಳಕ್ಕೆ ಹೈಗ್ರೌಂಡ್ ಸಂಚಾರಿ ಪೊಲೀಸರು ಭೇಟಿ ನೀಡಿ ಪರಾರಿಯಾಗುತ್ತಿದ್ದ ಕ್ಯಾಂಟರ್ ಚಾಲಕ ರಾಮ್‍ವೀರ್ ಸಿಂಗ್ ನನ್ನು ಬಂಧಿಸಿ ವಿಚಾರಣೆನಡೆಸುತ್ತಿದ್ದಾರೆ.