CrimeDistrictsLatestMain Post

ಶ್ರೀರಂಗಪಟ್ಟಣದಲ್ಲಿ ಎಸಿಬಿ ಬಲೆಗೆ ಬಿದ್ದ ಸರ್ವೇ ಅಧಿಕಾರಿ!

ಮಂಡ್ಯ: ಭೂಮಾಪನ ಕಚೇರಿಯ ಸರ್ವೇ ಅಧಿಕಾರಿ 10 ಸಾವಿರ ಲಂಚ ಪಡೆಯುವ ವೇಳೆ ಎಸಿಬಿ ಬಲೆಗೆ ಬಿದ್ದಿರುವ ಘಟನೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಮಿನಿ ವಿಧಾನಸೌಧದಲ್ಲಿ ಜರುಗಿದೆ.

ಶ್ರೀರಂಗಪಟ್ಟಣದ ಮಿನಿ ವಿಧಾನಸೌಧದ ಭೂ ಮಾಪನ ಇಲಾಖೆಯ ಸರ್ವೇ ಸೂಪರ್ ವೈಸರ್ ಲೋಕೇಶ್ ಎಸಿಬಿ ಬಲೆಗೆ ಬಿದ್ದ ಅಧಿಕಾರಿ. ಲೋಕೇಶ್ ವಿರುದ್ಧ ಪದೇ ಪದೇ ಎಸಿಬಿ ಕಚೇರಿಗೆ ಸಾರ್ವಜನಿಕರಿಂದ ದೂರುಗಳು ಕೇಳಿಬರುತ್ತಿದ್ದವು. ಸಾರ್ವಜನಿಕರ ದೂರಿನ ಅನ್ವಯ ಹಲವು ದಿನಗಳಿಂದ ಎಸಿಬಿ ಅಧಿಕಾರಿಗಳು ದಾಳಿ ನಡೆಸಬೇಕೆಂದು ಪ್ಲಾನ್ ಮಾಡುತ್ತಿದ್ದರು. ಇದನ್ನೂ ಓದಿ: ಬೊಮ್ಮಾಯಿ ಸರ್ಕಾರಕ್ಕೆ 6 ತಿಂಗಳು – ರಿಪೋರ್ಟ್ ಕಾರ್ಡ್ ತರಿಸಿಕೊಂಡ ಹೈಕಮಾಂಡ್!

ರೈತನೋರ್ವ ತನ್ನ ಜಮೀನು ದುರಸ್ತಿಗೆ ಲೋಕೇಶ್ ಬಳಿ ಬಂದಾಗ 15 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದಾನೆ. ಆ ರೈತ ಅಡ್ವಾನ್ಸ್ 3 ಸಾವಿರ ರೂಪಾಯಿಯನ್ನು ಲೋಕೇಶ್‍ಗೆ ನೀಡಿದ್ದ. ಬಳಿಕ ಎಸಿಬಿ ಅಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ನೀಡಿದ ವೇಳೆ ನೀನು ಉಳಿದ 10 ಸಾವಿರ ನೀಡು, ನಾವು ಅಧಿಕಾರಿಯನ್ನು ಅರೆಸ್ಟ್ ಮಾಡುತ್ತೇವೆ ಎಂದು ಹೇಳಿದ್ದಾರೆ.

ಅದೇ ರೀತಿ ರೈತ ಇಂದು 10 ಸಾವಿರ ರೂಪಾಯಿಯನ್ನು ಲೋಕೇಶ್‍ಗೆ ನೀಡುವ ವೇಳೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ, ಲೋಕೇಶ್‍ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಈ ದಾಳಿ ಎಸಿಬಿ ಡಿವೈಎಸ್‍ಪಿ ಧರ್ಮೇಂದ್ರ ನೇತೃತ್ವದಲ್ಲಿ ಇನ್ಸ್‍ಪೆಕ್ಟರ್ ಪುರುಷೋತ್ತಮ್, ವಿನೋದ್‍ರಾಜ್ ನೇತೃತ್ವದಲ್ಲಿ ನಡೆದಿದ್ದು, ಮಹದೇವು, ಕುಮಾರ್, ಪಾಪಣ್ಣ, ವೆಂಕಟೇಶ್, ಮಹೇಶ್ ಭಾಗಿಯಾಗಿದ್ದರು. ಇದನ್ನೂ ಓದಿ: ಬಿಜೆಪಿ ಶಾಸಕನ ಪುತ್ರ ಸೇರಿ 7 ವೈದ್ಯಕೀಯ ವಿದ್ಯಾರ್ಥಿಗಳ ದುರ್ಮರಣ!

Leave a Reply

Your email address will not be published.

Back to top button