ಬೆಂಗಳೂರು: ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರ ಬಳಿ 15 ಲಕ್ಷ ರೂ. ಲಂಚ ಪಡೆಯುತ್ತಿದ್ದ ವೇಳೆ ಟ್ರಾಫಿಕ್ ಇನ್ಸ್ ಪೆಕ್ಟರ್ ಒಬ್ಬರು ಎಸಿಬಿ ಬಲೆಗೆ ಬಿದ್ದಿದ್ದಾರೆ.
ಕೆಂಗೇರಿ ಟ್ರಾಫಿಕ್ ಇನ್ಸ್ ಪೆಕ್ಟರ್ ಶಬರೀಶ್ ಎಸಿಬಿ ಬಲೆಗೆ ಬಿದ್ದ ಅಧಿಕಾರಿಯಾಗಿದ್ದು, 7 ಲಕ್ಷ ರೂ. ಲಂಚ ಪಡೆಯುವಾಗ ಸಿಕ್ಕಿ ಬಿದ್ದಿದ್ದಾರೆ. ಶಬರೀಶ್ ಅವರು ಈ ಹಿಂದೆ ಮಾಗಡಿ ಠಾಣೆಯಲ್ಲಿ ಇನ್ಸ್ ಪೆಕ್ಟರ್ ಕಾರ್ಯ ನಿರ್ವಹಿಸಿದ್ದರು.
- Advertisement
ಏನಿದು ಪ್ರಕರಣ: ಮಾಗಡಿ ಪೊಲೀಸ್ ಠಾಣೆಯಲ್ಲಿ ಇನ್ಸ್ ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ವೇಳೆ ಶಬರೀಶ್ ರಿಯಲ್ ಎಸ್ಟೇಟ್ ಏಜೆಂಟ್ ಒಬ್ಬರ ವಿರುದ್ಧ ನಿವೇಶನದಾರರಿಗೆ ಅಕ್ರಮ ಎಸಗಿದ ದೂರು ಬಂದಿತ್ತು. ಈ ದೂರಿನ ಅನ್ವಯ ಇನ್ಸ್‍ಪೆಕ್ಟರ್ ಉದ್ಯಮಿ ವಿರುದ್ಧ ಪ್ರಕರಣ ದಾಖಲು ಮಾಡುವ ಬೆದರಿಕೆ ಹಾಕಿ 15 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು.
- Advertisement
ಇನ್ಸ್‍ಪೆಕ್ಟರ್ ಅವರ ಬೆದರಿಕೆ ಹಾಕುವ ವಿಚಾರವನ್ನು ಎಸಿಬಿ ಅಧಿಕಾರಿಗಳಿಗೆ ದೂರು ನೀಡಿದ್ದ ಉದ್ಯಮಿ ಇಂದು ಹಣ ನೀಡುವುದಾಗಿ ತಿಳಿಸಿ ಶಬರೀಶ್ ಅವರಿಗೆ ಕರೆದಿದ್ದರು. ಉದ್ಯಮಿಯಿಂದ ಹಣ ಪಡೆಯತ್ತಿದ್ದ ವೇಳೆ ದಾಳಿ ನಡೆಸಿದ ಅಧಿಕಾರಿಗಳು ಶಬರೀಶ್‍ರನ್ನ ಬಲೆಗೆ ಕೆಡವಿದ್ದಾರೆ. ಅಲ್ಲದೇ ಇನ್ಸ್ ಪೆಕ್ಟರ್ ಅವರೊಂದಿಗೆ ಇದ್ದ ಹುಲ್ಲೂರಯ್ಯ ಎಂಬ ಖಾಸಗಿ ವ್ಯಕ್ತಿಯನ್ನು ಎಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ.