ಬೆಂಗಳೂರು: ಕಾಂಗ್ರೆಸ್ ಕನಸಿನ ಕೂಸಿನಿಂದಲೇ ಚಾಮರಾಜಪೇಟೆಯ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಲಾಕ್ ಆಗಿದ್ದಾರೆ.
ಲೋಕಾಯುಕ್ತ ಪ್ರಬಲವಾಗಿದ್ದಾಗ ಎಸಿಬಿ(ಭ್ರಷ್ಟಾಚಾರ ನಿಗ್ರಹ ದಳ) ತೆರೆದಿದ್ದೆ ಕಾಂಗ್ರೆಸ್ ಸರ್ಕಾರ. ಸಿದ್ದರಾಮಯ್ಯ ಅವಧಿಯಲ್ಲಿ ಎಸಿಬಿಯನ್ನು ತರಲಾಗಿತ್ತು.
Advertisement
ಲೋಕಾಯುಕ್ತಗಿಂತ ಎಸಿಬಿಯನ್ನು ಪ್ರಬಲ ಮಾಡುತ್ತೇವೆ ಎಂದು ಸರ್ಕಾರ ಹೇಳಿದ್ದರೂ ಕೆಳಹಂತದ ಅಧಿಕಾರಿಗಳ ಬಂಧನಕ್ಕೆ ಮಾತ್ರ ಸೀಮಿತ ಆಗಿತ್ತು. ಆದರೆ ಈಗ ಕಾಂಗ್ರೆಸ್‌ನ ಪ್ರಭಾವಿ ಶಾಸಕನ ಮನೆ ಮೇಲೆ ಎಸಿಬಿ ದಾಳಿ ಮಾಡಿ ಸುದ್ದಿಯಾಗಿದೆ. ಇದನ್ನೂ ಓದಿ: ಆದಾಯ ಮೀರಿ ಆಸ್ತಿ ಗಳಿಕೆ – ಶಾಸಕ ಜಮೀರ್ ಮನೆ ಮೇಲೆ ಎಸಿಬಿ ದಾಳಿ
Advertisement
Advertisement
ಪೋಷಿಸುತ್ತಿದೆ ಬಿಜೆಪಿ
ಲೋಕಾಯುಕ್ತರ ಬಳಿ ಇದ್ದ ಭ್ರಷ್ಟಾಚಾರದ ವಿರುದ್ಧದ ದಾಳಿ, ತನಿಖೆ ನಡೆಸುವ ಅಧಿಕಾರವನ್ನು ಕಸಿದುಕೊಂಡು ಎಸಿಬಿಗೆ ನೀಡಲು 2016ರ ಮಾರ್ಚ್ 14 ರಂದು ಅಂದಿನ ಕಾಂಗ್ರೆಸ್ ಸರಕಾರ ಆದೇಶ ಹೊರಡಿಸಿತು. ಅದರ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿ ವಿಚಾರಣೆ ಹೈಕೋರ್ಟ್ ಮುಂದೆ ಬಾಕಿ ಇದೆ.
Advertisement
ಎಸಿಬಿ ರದ್ದು ಮಾಡಿದಾಗ ಪ್ರತಿಪಕ್ಷದಲ್ಲಿದ್ದ ಬಿಜೆಪಿ ತಾನು ಅಧಿಕಾರಕ್ಕೆ ಬಂದರೆ ತಕ್ಷಣವೇ ಎಸಿಬಿ ರದ್ದು ಮಾಡಿ, ಲೋಕಾಯುಕ್ತಕ್ಕೆ ಮರಳಿ ಅಧಿಕಾರ ನೀಡಲಾಗುವುದೆಂದು ಹೇಳಿತ್ತು. ಆದರೆ ಸದ್ಯ ಬಿಜೆಪಿಯೇ ಅಧಿಕಾರದಲ್ಲಿದ್ದರೂ ಇಲ್ಲಿಯವರೆಗೆ ರದ್ದು ಮಾಡುವ ಯಾವುದೇ ನಿರ್ಧಾರವನ್ನು ಕೈಗೊಂಡಿಲ್ಲ.
Live Tv