ಬೆಂಗಳೂರು: ಬೆಳ್ಳಂಬೆಳಗ್ಗೆ ಎಸಿಬಿ ತಂಡ ಕೆಐಎಡಿಬಿ ಮತ್ತು ಬಿಡಿಎ ಅಧಿಕಾರಿಗಳ ಮನೆ ಮೇಲೆ ದಾಳಿ ನಡೆಸಿದ್ದು, ಅಪಾರ ಪ್ರಮಾಣದ ನಗದು ಮತ್ತು ಚಿನ್ನ ಪತ್ತೆಯಾಗಿದೆ.
ಮಲ್ಲೇಶ್ವರಂನಲ್ಲಿರುವ ಕೆಐಎಡಿಬಿ ಚೀಫ್ ಎಂಜಿನಿಯರ್ ಟಿ.ಆರ್.ಸ್ವಾಮಿ ಮನೆ ಮೇಲೆ ದಾಳಿ ಮಾಡಲಾಗಿದೆ. ಅಷ್ಟೇ ಅಲ್ಲದೇ ಮಂತ್ರಿ ಗ್ರೀನ್ಸ್ ಅಪಾರ್ಟ್ ಮೆಂಟ್ ನಲ್ಲಿರುವ ಫ್ಲ್ಯಾಟ್ ಮೇಲೂ ದಾಳಿಯನ್ನು ಮಾಡಲಾಗಿದೆ. ದಾಳಿ ವೇಳೆ ಅಧಿಕ ಪ್ರಮಾಣದ ಅಂದರೆ 10 ಕೋಟಿ ನಗದು ಮತ್ತು ಚಿನ್ನಾಭರಣ ಪತ್ತೆಯಾಗಿದೆ.
Advertisement
Advertisement
ಕೆಐಡಿಬಿ ಚೀಫ್ ಎಂಜಿನಿಯರ್ ಸ್ವಾಮಿ ಮನೆ ಮಂತ್ರಿ ಸ್ಕೇರ್ ನಲ್ಲಿದ್ದು, ಸ್ವಾಮಿ ಮನೆಯಲ್ಲಿ ಅಧಿಕ ಪ್ರಮಾಣದ ನಗದು ಪತ್ತೆಯಾಗಿದೆ. ಟಿ.ಆರ್.ಸ್ವಾಮಿ ಅವರು ಎಸಿಬಿ ಅಧಿಕಾರಿಗಳನ್ನು ಕಂಡು ದಂಗಾಗಿ ಕಂತೆ ಕಂತೆ ನೋಟುಗಳನ್ನು ಕಿಟಕಿಯ ಹೊರಗಡೆಯಿಂದ ಎಸೆದಿದ್ದಾರೆ. ಆದರೆ ಇದೇ ವೇಳೆ ಅಧಿಕಾರಿಗಳ ಕೈಗೆ ರೆಂಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದು, ಅವರನ್ನು ಅಧಿಕಾರಿಗಳು ವಿಚಾರಣೆ ಮಾಡುತ್ತಿದ್ದಾರೆ. ಮಂತ್ರಿ ಗ್ರೀನ್ಸ್ ಅಪಾರ್ಟ್ ನಲ್ಲಿರುವ ಎರಡು ಫ್ಲ್ಯಾಟ್ ನಲ್ಲಿ ಸುಮಾರು 10 ಕೋಟಿ ಹಣ ಪತ್ತೆಯಾಗಿದ್ದು, ಎಬಿಸಿ ಅಧಿಕಾರಿಗಳು ಕೌಂಟಿಂಗ್ ಮೆಷಿನ್ ನಲ್ಲಿ ಹಣ ಲೆಕ್ಕ ಹಾಕುತ್ತಿದ್ದಾರೆ.
Advertisement
Advertisement
ಟಿ.ಆರ್.ಸ್ವಾಮಿ
ಇತ್ತ ಬಿಡಿಎ ಅಧೀಕ್ಷಕ ಅಭಿಯಂತರ ಎನ್.ಜಿ. ಗೌಡಯ್ಯ ಅವರ ಬಸವೇಶ್ವರ ನಗರದಲ್ಲಿರುವ ಮನೆ ಮೇಲೆ ದಾಳಿ ಮಾಡಲಾಗಿದ್ದು, ದಾಳಿ ವೇಳೆ ಯಾವುದೇ ರೀತಿಯ ಹಣ, ಚಿನ್ನ ಪತ್ತೆಯಾಗಿಲ್ಲ. ಬೇನಾಮಿ ಆಸ್ತಿ ಪತ್ರ ಸಿಕ್ಕಿದ್ದು, ಮೂಲ ದಾಖಲಾತಿಗಳನ್ನು ಎಸಿಬಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಗೌಡಯ್ಯ ಎಸಿಬಿ ದಾಳಿ ಹಿನ್ನೆಲೆಯಲ್ಲಿ ಬಿಡಿಎನಲ್ಲಿರುವ ಕಚೇರಿಗೂ ಬೀಗ ಹಾಕಿದ್ದು, ಕೆಲವೇ ಕ್ಷಣದಲ್ಲಿ ಎಸಿಬಿಯಿಂದ ಗೌಡಯ್ಯ ಕಚೇರಿ ತಪಾಸಣೆ ಸಾದ್ಯತೆ ಇದೆ.
ವಸತಿ ಸಮುಚ್ಚಯದ ಗುತ್ತಿಗೆದಾರರ ಜೊತೆ ಕಮಿಷನ್ ಹೆಸರಿನಲ್ಲಿ ಕೋಟಿ ಕೋಟಿ ಅವ್ಯವಹಾರ ನಡೆಸುತ್ತಿದ್ದಾರೆ ಅನ್ನೋ ಆರೋಪ ಮೊದಲಿನಿಂದಲೂ ಕೇಳಿ ಬರುತ್ತಿತ್ತು. ಗೌಡಯ್ಯ ತನ್ನ ಕಾರಿನ ಡ್ರೈವರ್ ಗೂ ಸಹ ಮನೆ ತೋರಿಸಿರಲಿಲ್ಲ. ಇವರು ಅಕ್ರಮವಾಗಿ ಹಣ ಸಂಪಾದಿಸುತ್ತಿದ್ದಾರೆ ಎಂಬ ಆರೋಪಗಳಿದ್ದು, ಮಾಹಿತಿ ಮೇರೆಗೆ ಇಂದು ಎಸಿಬಿ ತಂಡ ದಾಳಿ ನಡೆಸಿದೆ. ಅಷ್ಟೇ ಅಲ್ಲದೇ ಸುಮಾರು ವರ್ಷಗಳಿಂದ ಬಿಡಿಎ ಬಿಟ್ಟು ಕದಲಿಲ್ಲ. ಟ್ರಾನ್ಸ್ ಫರ್ ಆಗಿದ್ದರು ಸಹ ಮತ್ತೆ ರಾಜಕಾರಣಿಗಳಿಗೆ ಕೋಟಿ ಕೋಟಿ ಹಣ ನೀಡಿ ಬಿಡಿಎಗೆ ಹಾಕಿಸಿಕೊಳ್ಳುತ್ತಿದ್ದರು ಎಂದು ತಿಳಿದುಬಂದಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv