ಬೆಂಗಳೂರು: ಇಂದು ಬೆಳ್ಳಂಬೆಳಗ್ಗೆ ಸರ್ಕಾರಿ ಕುಬೇರರ ಕೋಟೆಗೆ ಎಸಿಬಿ ಅಧಿಕಾರಿಗಳು ಲಗ್ಗೆಯಿಟ್ಟಿತು. ಆದಾಯ ಮೀರಿ ಆಸ್ತಿ ಗಳಿಕೆ ಆರೋಪದ ಮೇಲೆ 21 ಅಧಿಕಾರಿಗಳಿಗೆ ಸಂಬಂಧಿಸಿದ ಮನೆ, ಕಚೇರಿಗಳ ಮೇಲೆ ಬೆಂಗಳೂರು ಸೇರಿ ರಾಜ್ಯದ 80 ಕಡೆ 400 ಅಧಿಕಾರಿಗಳು ಏಕಕಾಲದಲ್ಲಿ ರೇಡ್ ನಡೆಸಿದ್ರು.
Advertisement
ಬಾಗಲಕೋಟೆ, ಬೆಳಗಾವಿ, ಹಾವೇರಿ,ಧಾರವಾಡ, ಬೀದರ್, ಕಾರವಾರ, ಚಿತ್ರದುರ್ಗ, ಉಡುಪಿ, ಹಾಸನ ಸೇರಿ ಹಲವೆಡೆ ಶೋಧ ನಡೆಸಿ ಕೋಟಿ ಕೋಟಿ ಹಣ, ಚಿನ್ನಾಭರಣ ಹೊರತೆಗೆದ್ರು. ಉಡುಪಿಯ ಕೊರಂಗ್ರಪಾಡಿಯಲ್ಲಿರುವ ಸಣ್ಣ ನೀರಾವರಿ ಇಲಾಖೆ ಎಇ ಹರೀಶ್ ಮನೆಯಲ್ಲಿ 2 ಕೆಜಿ ಚಿನ್ನ, ಕಂತೆ ಕಂತೆ ಹಣ ಪತ್ತೆಯಾಗಿದೆ. 15ಕ್ಕೂ ಹೆಚ್ಚು ಚಿನ್ನದ ಬಳೆ, 30ಕ್ಕೂ ಹೆಚ್ಚು ಸರ, ನೆಕ್ಲೆಸ್, ಬ್ರಾಸ್ಲೆಟ್, ಚಿನ್ನದ ತಟ್ಟೆ, ಚಿನ್ನದ ತಗಡು, ದುಬಾರಿ ಬೆಲೆಯ ವಾಚ್‍ಗಳು ಪತ್ತೆಯಾಗಿದೆ.
Advertisement
Advertisement
ಬಾಗಲಕೋಟೆಯ ಆರ್‍ಟಿಓ ಅಧಿಕಾರಿ ಯಲ್ಲಪ್ಪ ಪಡಸಾಲಿಯ ಕೊಪ್ಪಳ, ಧಾರವಾಡ ನಿವಾಸದಲ್ಲಿ 58 ಲಕ್ಷ ಹಣ ಸಿಕ್ಕಿದೆ. ಬೆಳಗಾವಿ ಪಿಡಿಬ್ಲ್ಯೂಡಿ ಅಧೀಕ್ಷಕ ಬಿ.ವೈ ಪವಾರ್ ಮನೆಯ ಬಾತ್ ರೂಂನಲ್ಲಿ 5 ಲಕ್ಷ ಪತ್ತೆಯಾಗಿದೆ. ಒಟ್ಟು 50ಲಕ್ಷ ಮೌಲ್ಯದ ಚಿನ್ನ, 9.5 ಲಕ್ಷ ನಗದು ಸಿಕ್ಕಿದೆ. ಬೆಂಗಳೂರಿನ ಐಬಿ ಸಿಪಿಐ ಉದಯರವಿಯ ಮುದಗಲ್ ನಿವಾಸದಲ್ಲಿ ರಾಶಿ ರಾಶಿ ಹಣ, ಚಿನ್ನಾಭರಣ ಪತ್ತೆಯಾಗಿದೆ. ಇದನ್ನೂ ಓದಿ: ಡಿನೊಟಿಫೈ ಕೇಸಲ್ಲಿ ಶನಿವಾರ ಬಿಎಸ್‍ವೈ ಬೇಲ್ ಭವಿಷ್ಯ
Advertisement
ಬೆಂಗಳೂರಿನ ಪಿಡಬ್ಲ್ಯೂಡಿ ಇಲಾಖೆ ನಿವೃತ್ತ ಎಂಜಿನಿಯರ್ ಜಿ ಮಂಜುನಾಥ್ ಕೊರೋನಾ ಕಾಲದಲ್ಲಿ ಕೋಟಿ ಕೋಟಿ ವಹಿವಾಟು ನಡೆಸಿರೋದು ಬೆಳಕಿಗೆ ಬಂದಿದೆ. ತಾಯಿ ಹೆಸರಲ್ಲಿ ಬೇನಾಮಿ ಆಸ್ತಿ ಮಾಡಿರೋದು ಗೊತ್ತಾಗಿದೆ. ಜಯನಗರದ 9ನೇ ಬ್ಲಾಕ್‍ನಲ್ಲಿ 20 ಕೋಟಿ ಮೌಲ್ಯದ ವಾಣಿಜ್ಯ ಕಟ್ಟಡ, ಮಗಳ ಹೆಸರಿನಲ್ಲಿ ಪ್ಲ್ಯಾಟ್ ಇದೆ. ಕಂದಾಯ ಇಲಾಖೆಯ ಹಲವು ಕಡತಗಳು ಪತ್ತೆಯಾಗಿರೋದು ಹಲವು ಅನುಮಾನಗಳಿಗೆ ಕಾರಣವಾಗಿವೆ.
ಯಾರ್ಯಾರ ಮನೆ ಮೇಲೆ ದಾಳಿಯಗಿದೆ..?
* ಭೀಮರಾವ್ ಪವಾರ್, ಅಧೀಕ್ಷಕ ಎಂಜಿನಿಯರ್, ಪಿಡಬ್ಲುಡಿ ಇಲಾಖೆ, ಬೆಳಗಾವಿ
* ಹರೀಶ್, ಸಹಾಯಕ ಎಂಜಿನಿಯರ್, ಸಣ್ಣ ನೀರಾವರಿ ಇಲಾಖೆ, ಉಡುಪಿ
* ರಾಮಕೃಷ್ಣ, ಎಇಇ, ಸಣ್ಣ ನೀರಾವರಿ ಇಲಾಖೆ, ಹಾಸನ
* ರಾಜೀವ್ ನಾಯಕ್, ಎಇ, ಲೋಕೋಪಯೋಗಿ ಇಲಾಖೆ, ಕಾರವಾರ
* ಬಿ.ಆರ್. ಬೋಪಯ್ಯ, ಪೊನ್ನಂಪೇಟೆ ಜಿ.ಪಂ ಜೆ.ಇ
* ಮಧುಸೂದನ್, ಡಿಸ್ಟ್ರಿಕ್ಟ್ ರಿಜಿಸ್ಟ್ರಾರ್, ಐಜಿಆರ್ ಕಚೇರಿ, ಬೆಳಗಾವಿ
* ಪರಮೇಶ್ವರಪ್ಪ, ಎಇ, ಸಣ್ಣ ನೀರಾವರಿ ಇಲಾಖೆ, ಹೂವಿನಹಡಗಲಿ
* ಯಲ್ಲಪ್ಪ ಎನ್ ಪಡಸಲಿ, ಆರ್‍ಟಿಒ, ಬಾಗಲಕೋಟೆ
* ಶಂಕರಪ್ಪ ಗೊಗಿ, ಯೋಜನಾ ನಿರ್ದೇಶಕ, ನಿರ್ಮಿತಿ ಕೇಂದ್ರ, ಬಾಗಲಕೋಟೆ
* ಪ್ರದೀಪ್ ಎಸ್. ಆಲೂರು, ಪಂಚಾಯತ್ ಗ್ರೇಡ್ ಸೆಕ್ರೆಟರಿ, ಗದಗ
* ಸಿದ್ದಪ್ಪ ಟಿ, ಉಪ ಎಲೆಕ್ಟ್ರಿಕಲ್ ಅಧಿಕಾರಿ, ಬೆಂಗಳೂರು
* ತಿಮ್ಮಪ್ಪ ಪಿ.ಸಿರ್ಸಗಿ, ಜಿಲ್ಲಾ ಯೋಜನಾ ಅಧಿಕಾರಿ, ಬೀದರ್
* ಮೃತ್ಯುಂಜಯ ತಿರನಿ, ಅಸಿಸ್ಟೆಂಟ್ ಕಂಟ್ರೋಲರ್, ಕರ್ನಾಟಕ ಪಶು ವಿವಿ, ಬೀದರ್
* ಮೋಹನ್ ಕುಮಾರ್, ಇಇ, ನೀರಾವರಿ ಇಲಾಖೆ, ಚಿಕ್ಕಬಳ್ಳಾಪುರ
* ಶ್ರೀಧರ್, ಜಿಲ್ಲಾ ರಿಜಿಸ್ಟ್ರಾರ್, ಕಾರವಾರ
* ಮಂಜುನಾಥ್ ಜಿ, ನಿವೃತ್ತ ಇಇ, ಲೋಕೋಪಯೋಗಿ ಇಲಾಖೆ, ಬೆಂಗಳೂರು
* ಶಿವಲಿಂಗಯ್ಯ, ಗ್ರೂಪ್ ಸಿ ನೌಕರ, ಬಿಡಿಎ
* ಉದಯ ರವಿ, ಪೊಲೀಸ್ ಇನ್ಸ್ ಪೆಕ್ಟರ್, ಕೊಪ್ಪಳ
* ಬಿ.ಜಿ ತಿಮ್ಮಯ್ಯ, ಕೇಸ್ ವರ್ಕರ್, ಕಡೂರು ಪುರಸಭೆ
* ಚಂದ್ರಪ್ಪ ಸಿ. ಓಲೆಕರ್, ಯುಟಿಪಿ ಕಚೇರಿ, ರಾಣೆಬೆನ್ನೂರು
* ಜನಾರ್ದನ್, ನಿವೃತ್ತ ರಿಜಿಸ್ಟ್ರಾರ್, ಬೆಂಗಳೂರು ವಿವಿ