ಬೆಂಗಳೂರು: ಇಂದು ಬೆಳ್ಳಂಬೆಳಗ್ಗೆ ಎಸಿಬಿ ಅಧಿಕಾರಿಗಳು ಭರ್ಜರಿ ಬೇಟೆಯಾಡಿದ್ದು, ಭ್ರಷ್ಟ ಅಧಿಕಾರಿಗಳ ಮನೆ ಮೇಲೆ ದಾಳಿ ಮಾಡಿ ಒಟ್ಟು 2 ಕೋಟಿ 10 ಲಕ್ಷ ನಗದು, 9 ಕೋಟಿ ಮೌಲ್ಯದ 17 ಕೆಜಿ 299 ಗ್ರಾಂ ಚಿನ್ನಾಭರಣವನ್ನು ಎಸಿಬಿ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
Advertisement
ಇದು ಕೇವಲ 15 ಸರ್ಕಾರಿ ಅಧಿಕಾರಿಗಳ ಬಳಿ ಪತ್ತೆಯಾಗಿರೋ ಆಸ್ತಿ-ಪಾಸ್ತಿ. ಇವತ್ತು ಬೆಳ್ಳಂಬೆಳಗ್ಗೆ 503 ಎಸಿಬಿ ಅಧಿಕಾರಿಗಳು 15 ಭ್ರಷ್ಟ ಅಧಿಕಾರಿಗಳ ಮೇಲೆ ಸರ್ಜಿಕಲ್ ಸ್ಟ್ರೈಕ್ ನಡೆಸಿದ್ರು. ಬೆಂಗಳೂರು, ಕಲಬುರಗಿ, ಶಿವಮೊಗ್ಗ, ದಾವಣಗೆರೆ, ಮಂಡ್ಯ, ಮೈಸೂರು ಹೀಗೆ 15 ಅಧಿಕಾರಿಗಳಿಗೆ ಸಂಬಂಧಿಸಿದಂತೆ 68 ಸ್ಥಳಗಳಲ್ಲಿ ಏಕಕಾಲಕ್ಕೆ ದಾಳಿ ಮಾಡಲಾಯಿತು. ಬೊಬ್ಬಬ್ಬ ಅಧಿಕಾರಿಯೂ ದೇಪಿದ್ದ ಅಕ್ರಮ ಸಂಪತ್ತನ್ನು ಕಕ್ಕಿಸಿದ್ದಾರೆ. ಒಟ್ಟು 2 ಕೋಟಿ 10 ಲಕ್ಷ ನಗದು, 9 ಕೋಟಿ ಮೌಲ್ಯದ 17 ಕೆಜಿ 299 ಗ್ರಾಂ ಚಿನ್ನಾಭರಣವನ್ನ ಎಸಿಬಿ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಇದನ್ನೂ ಓದಿ: ನನಗೆ ಬರುವ ಸಂಬಳ ಸಾಕಾಗ್ತಿಲ್ಲ: ಮಾಯಣ್ಣ
Advertisement
Advertisement
ದಾಳಿ ವೇಲೆ ಪೈಪ್‍ನಲ್ಲೂ ಹಣ. ರೂಮ್‍ನಲ್ಲೂ ಹಣ. ರಾಶಿ ರಾಶಿ ಚಿನ್ನಾಭರಣ. ಐಷಾರಾಮಿ ಬಂಗಲೆಗಳು ಹೀಗೆ ಸುಖದ ಸುಪ್ಪತ್ತಿಗೆಯಲ್ಲಿ ಐಷಾರಾಮಿ ಜೀವನ ನಡೆಸುತ್ತಿದ್ದವರಿಗೆ ಬಲೆ ಬೀಸಿ ಅಕ್ರಮ ಬಯಲಿಗೆಳೆದಿದ್ದಾರೆ.
Advertisement
ಯಾರಲ್ಲಿ ಎಷ್ಟೇಟ್ಟು?:
ಕಲಬುರಗಿಯ ಪಿಡಬ್ಲ್ಯೂಡಿ ಕಿರಿಯ ಇಂಜಿನಿಯರ್ ಶಾಂತಗೌಡ ಬಿರಾದಾರ್ ಮನೆಯ ಬಾತ್ರೂಮ್ ಪೈಪ್‍ನಲ್ಲಿ ಬಂದಿದ್ದು ನೀರಲ್ಲ. ಬದಲಾಗಿ ಕಂತೆ ಕಂತೆ ಹಣ. ಬಿರಾದಾರ್ ಮಾಸ್ಟರ್ ಪ್ಲಾನ್ ನೋಡಿ ಎಸಿಬಿ ಅಧಿಕಾರಿ ದಂಗಾಗಿ ಹೋಗಿದ್ರು. ಬಿರಾದಾರ್ ಬಾತ್ರೂಮ್ ಪೈಪ್. ಸೀಲಿಂಗ್, ಕೋಣೆಯ ಲಾಕರ್‍ಗಳಲ್ಲಿ ಕಂತೆ ಕಂತೆ ಹಣಮುಚ್ಚಿಟ್ಟಿದ್ದರು. ಬಾತ್ರೂಮ್ ಪೈಪ್ ಕಟ್ ಮಾಡುತ್ತಿದ್ದಂತೆ ನೀರಿನ ಬದಲಾಗಿ ನೋಟಿನ ಕಂತೆಯೇ ಸುರೀತು. ಬಿರಾದಾರ್ ಬಳಿ 54 ಲಕ್ಷ ನಗದು, ಬಾತ್ರೂಮ್ ಪೈಪ್‍ನಲ್ಲಿ 15 ಲಕ್ಷ, ಸೀಲಿಂಗ್‍ನಲ್ಲಿ 6 ಲಕ್ಷ, ಮಗನ ಕೋಣೆಯಲ್ಲಿ 33 ಲಕ್ಷ ನಗದು ಪತ್ತೆಯಾಗಿದೆ. 36 ಎಕರೆ ಕೃಷಿ ಭೂಮಿ, 2 ಮನೆ, 15 ಲಕ್ಷ ಮೌಲ್ಯದ ಗೃಹ ಬಳಕೆ ವಸ್ತುಗಳು, 3 ಐಷಾರಾಮಿ ಕಾರು, 2 ಟ್ರ್ಯಾಕ್ಟರ್, 1 ಸ್ಕೂಲ್ ಬಸ್ ಪತ್ತೆಯಾಗಿವೆ. ಇದನ್ನೂ ಓದಿ: ನಾನು ಪ್ರಾಮಾಣಿಕ ಅಧಿಕಾರಿ, ತೆರಿಗೆ ಕಟ್ಟುತ್ತಿದ್ದೇನೆ: ಎಲ್.ಸಿ.ನಾಗರಾಜ್
ಶಿವಮೊಗ್ಗದಲ್ಲಿ ಸಂಪತ್ತಿನ ಕೃಷಿ:
ಗದಗ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಟಿ.ಎಸ್.ರುದ್ರೇಶಪ್ಪ ಕೃಷಿ ಇಲಾಖೆಯಲ್ಲಿ ಇದ್ದುಕೊಂಡು ಚಿನ್ನದ ಕೃಷಿಯನ್ನೇ ಮಾಡಿರೋದು ಪತ್ತೆಯಾಗಿದೆ. ರುದ್ರೇಶಪ್ಪ ದಾವಣಗೆರೆಯ ಚನ್ನಗಿರಿ ತಾಲೂಕಿನ ತಣ್ಣಿಗೆರೆ ಗ್ರಾಮದವಾರಿದ್ದು, ಗದಗ್‍ನ ಕೃಷಿ ಇಲಾಖೆ ಜಂಟಿ ನಿರ್ದೇಶಕರಾಗಿ ಸೇವೆ ಸಲ್ಲಿಸ್ತಿದ್ದಾರೆ. ಆದ್ರೆ ಶಿವಮೊಗ್ಗದಲ್ಲಿ ಅಪಾರ ಪ್ರಮಾಣದಲ್ಲಿ ಅಕ್ರಮ ಆಸ್ತಿ ಸಂಪಾದಿಸಿದ್ದಾರೆ. ಟಿ.ಎಸ್. ರುದ್ರೇಶಪ್ಪ ಶಿವಮೊಗ್ಗದಲ್ಲಿ 2 ಮನೆ, 4 ನಿವೇಶನ ಹೊಂದಿದ್ದಾರೆ. ಮನೆಯಲ್ಲಿ 9 ಕೆಜಿ 400 ಗ್ರಾಂ ಚಿನ್ನದ ಬಿಸ್ಕೇಟ್ ಪತ್ತೆಯಾಗಿದೆ. ಇದ್ರಲ್ಲಿ 100 ಗ್ರಾಂ ತೂಕದ 60 & 50 ಗ್ರಾಂ ತೂಕದ 8 ಚಿನ್ನದ ಬಿಸ್ಕೆಟ್, 14 ನೆಕ್ಲೆಸ್, 25 ಉಂಗುರ, 12 ಬ್ರೇಸ್‍ಲೆಟ್‍ಗಳು ಇವೆ. ಇನ್ನು 3 ಕೆಜಿ ಬೆಳ್ಳಿ, 2 ಕಾರು, 8 ಎಕರೆ ಕೃಷಿ ಭೂಮಿ, 15 ಲಕ್ಷ 90 ಸಾವಿರ ನಗದು, 20 ಲಕ್ಷ ಬೆಲೆ ಬಾಳುವ ಗೃಹ ಉಪಯೋಗಿ ವಸ್ತುಗಳು ಪತ್ತೆಯಾಗಿವೆ. ಇದನ್ನೂ ಓದಿ: ಬಿಬಿಎಂಪಿ ಎಫ್‍ಡಿಎ ನೌಕರನ ಬಳಿ ಕೋಟಿ ಕೋಟಿ ಆಸ್ತಿ – ಸರ್ಕಾರಕ್ಕೆ ಬರಬೇಕಿದೆ 125 ಕೋಟಿ
ಪ್ರಮೋಷನ್‍ಗೂ ಮೊದಲೇ ಸಕಾಲ ಅಧಿಕಾರಿಗೆ ಶಾಕ್:
ಬೆಂಗಳೂರಿನ ಸಕಾಲದಲ್ಲಿ ಆಡಳಿತಾಧಿಕಾರಿಯಾಗಿರುವ ನಾಗರಾಜುಗೆ ಇವತ್ತು ಎಸಿಬಿ ಶಾಕ್ ಕೊಟ್ಟಿದೆ ಬೆಂಗಳೂರು, ನೆಲಮಂಗಲದಲ್ಲಿ ನಾಗರಾಜುಗೆ ಸೇರಿಆ ನಿವೇಶನಗಳಲ್ಲಿ ಎಸಿಬಿ ತಲಾಶ್ ನಡೆSIಆ ಈ ವೇಳೆ ಕೋಟ್ಯಾಂತರ ಮೌಲ್ಯದ ಆಸ್ತಿಪಾಸ್ತಿ ಪತ್ತೆಯಾಯ್ತು. ಬೆಂಗಳೂರಲ್ಲಿ 1 ಮನೆ, ನಿವೇಶನ ಹೊಂದಿದ್ದಾರೆ. ನೆಲಮಂಗಲದಲ್ಲಿ 1 ಮನೆ, ನೆಲಮಂಗಲ ತಾಲೂಕಿನಲ್ಲಿ 11.25 ಎಕರೆ ಜಮೀನು, ಕೈಗಾರಿಕಾ ಉದ್ದೇಶದ 1 ಕಟ್ಟಡ ಹೊಂದಿದ್ದಾರೆ. ಎಸಿಬಿ ದಾಳಿ ವೇಳೆ 43 ಲಕ್ಷ ನಗದು ಸಿಕ್ಕಿದೆ. 3 ಕಾರು, 1 ಕೆ.ಜಿ 76 ಗ್ರಾಂ ಚಿನ್ನಾಭರಣ, 7 ಕೆ.ಜಿ 284 ಗ್ರಾಂ ಬೆಳ್ಳಿ ವಸ್ತು, 14 ಲಕ್ಷ ರೂ. ಗೃಹ ಉಪಯೋಗಿ ವಸ್ತುಗಳು ಪತ್ತೆಯಾಗಿವೆ.
ಬಿಬಿಎಂಪಿ ಗುಮಾಸ್ತನ `ಮಾಯದ’ ಸಂಪತ್ತು:
ಮಾಯಣ್ಣ, ಬಿಬಿಎಂಪಿ ಕೇಂದ್ರ ಕಚೇರಿ ಬೆಂಗಳೂರಿನಲ್ಲಿ ಪ್ರಥಮ ದರ್ಜೆ ಸಹಾಯಕ. ಈತನಿಗೆ ಸಂಬಂಧಿಸಿದಂತೆ ಕತ್ರಿಗುಪ್ಪೆ, ನಾಯಂಡಳ್ಳಿ, ವಿದ್ಯಾಪೀಠ ಸೇರಿ 8 ಕಡೆ ರೇಡ್ ಆಗಿದೆ. ಬಿಬಿಎಂಪಿ ರಸ್ತೆ & ಮೂಲಭೂತ ಸೌಕರ್ಯ ವಿಭಾಗದಲ್ಲಿ 11 ವರ್ಷಗಳಿಂದ ಠಿಕಾಣಿ ಹೂಡಿದ್ದಾರೆ. ಈತ ಗುಮಾಸ್ತನಾಗಿದ್ದು ಅದ್ಯಾವ ಮಾಯದಲ್ಲಿ ಕೊಳ್ಳೆ ಹೊಡೆದಿದ್ನೋ ಅಪಾರ ಸಂಪತ್ತು ಪತ್ತೆಯಾಗಿದೆ. ಬೆಂಗಳೂರಲ್ಲಿ 4 ವಾಸದ ಮನೆ, ವಿವಿಧ ಕಡೆ 6 ನಿವೇಶನ, 2 ಎಕರೆ ಕೃಷಿ ಜಮೀನು, 2 ಬೈಕ್, 1 ಕಾರ್ ಹೊಂದಿದ್ದು 59 ಸಾವಿರ ನಗದು ಮಾತ್ರ ಸಿಕ್ಕಿದೆ. ಜೊತೆಗೆ 10 ಲಕ್ಷ ರೂ. ಎಫ್‍ಡಿ, ಉಳಿತಾಯ ಖಾತೆಯಲ್ಲಿ 1.50 ಲಕ್ಷ, 600 ಗ್ರಾಂ ಚಿನ್ನಾಭರಣ, 3 ಸ್ಥಳಗಳಲ್ಲಿ ಬೇನಾಮಿ ಆಸ್ತಿ, 12 ಲಕ್ಷ ಮೌಲ್ಯದ ಗೃಹೋಪಯೋಗಿ ವಸ್ತು ಸಿಕ್ಕಿದೆ.
ಆರ್‌ಟಿಓ ಅಧಿಕಾರಿ ಬಳಿ ಚಿನ್ನದ ಗಣಿ:
ಬೆಳಗಾವಿ ಜಿಲ್ಲೆಯ ಗೋಕಾಕ್ ಆರ್‌ಟಿಓ ಅಧಿಕಾರಿ ಸದಾಶಿವ ರಾಯಪ್ಪ ಮರಲಿಂಗಣ್ಣನವರ್ ಸಹಾ ಅಪಾರ ಆಸ್ತಿ ಸಂಪಾದಿಸಿದ್ದಾರೆ. ಬೆಳಗಾವಿ ನಗರದಲ್ಲಿ 1 ವಾಸದ ಮನೆ, 22 ಎಕರೆ ಕೃಷಿ ಜಮೀನು, 1 ಕೆ.ಜಿ 135 ಗ್ರಾಂ ಚಿನ್ನಾಭರಣ ಹೊಂದಿದ್ದು, ಇದರಲ್ಲಿ 26 ಚಿನ್ನದ ಬಳೆ, 5 ಸೆಟ್ ಚಿನ್ನದ ಓಲೆ, 7 ಚಿನ್ನದ ಹಾರ, 3 ಮಾಂಗಲ್ಯ ಸರ ಇದೆ. 8.22 ಲಕ್ಷ ನಗದು ಸಿಕ್ಕಿದ್ದು, 5 ಲಕ್ಷ ಮೌಲ್ಯದ ಗೃಹೋಪಯೋಗಿ ವಸ್ತುಗಳು ಪತ್ತೆಯಾಗಿವೆ.
ಬಿಬಿಎಂಪಿ ಬಾಲಕ ಮತ್ತು ಬಾಲಕಿಯರ ಹೈಸ್ಕೂಲ್ ಡಿ ಗ್ರೂಪ್ ನೌಕರ ಜಿ.ವಿ. ಗಿರಿ ಮನೆ ಮೇಲೂ ದಾಳಿ ನಡೀತು ಬೆಂಗಳೂರಿನಲ್ಲಿ 6 ವಾಸದ ಮನೆ. 4 ಕಾರು, 4 ಬೈಕ್, 8 ಕೆ.ಜಿ ಬೆಳ್ಳಿ ವಸ್ತುಗಳು, 1.16 ಲಕ್ಷ ನಗದು, 15 ಲಕ್ಷ ಮೌಲ್ಯದ ಗೃಹೋಪಯೋಗಿ ವಸ್ತು ಪತ್ತೆಯಾಗಿದೆ. ಇದನ್ನೂ ಓದಿ: ಪೈಪ್, ಬಕೆಟ್‍ನಲ್ಲಿ ಫುಲ್ ಹಣ – ಕಲಬುರಗಿ ಅಧಿಕಾರಿ ಮನೆ ಮೇಲೆ ಎಸಿಬಿ ದಾಳಿ
ಉಳಿದಂತೆ ಜಲಾನಯನ ಯೋಜನೆಗಳಲ್ಲಿ ಅಕ್ರಮ ಆರೋಪದಲ್ಲಿ ಹೇಮಾವತಿ ಡ್ಯಾಮ್ ಎಂಜಿನಿಯರ್ ಶ್ರೀನಿವಾಸ್‍ಗೂ ಬಿಸಿ ತಟ್ಟಿದೆ. ಮೈಸೂರಿನಲ್ಲಿ 1 ಮನೆ, 1 ಫ್ಲ್ಯಾಟ್, 2 ನಿವೇಶನ, 4 ಎಕೆರೆ ಕೃಷಿ ಭೂಮಿ, ನಂಜನಗೂಡಿನಲ್ಲಿ ಫಾರ್ಮ್ ಹೌಸ್, 9 ಕೆಜಿ ಬೆಳ್ಳಿ, 22 ಲಕ್ಷ ಬ್ಯಾಂಕ್ ಠೇವಣಿ ಪತ್ತೆಯಾಗಿದೆ. ಬಳ್ಳಾರಿಯಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿರೋ ಸಬ್ ರಿಜಿಸ್ಟ್ರಾರ್ ಕೆ.ಎಸ್. ಶಿವಾನಂದಗೆ ಸಂಬಂಧಿಸಿದಂತೆ ಮಂಡ್ಯ ನಗರದಲ್ಲಿ 1 ವಾಸದ ಮನೆ, ಬೆಂಗಳೂರಲ್ಲಿ 1 ನಿವೇಶನ, ಬಳ್ಳಾರಿ ಜಿಲ್ಲೆಯ ಮೋಕಾ ಗ್ರಾಮದಲ್ಲಿ ಸುಮಾರು 7 ಎಕರೆ ಕೃಷಿ ಜಮೀನು ಮಾಹಿತಿ ಸಿಕ್ಕಿದೆ. ಸ್ಮಾರ್ಟ್ ಸಿಟಿ ಇಂಜಿನಿಯರ್ ಲಿಂಗೇಗೌಡಗೆ ಸಂಬಂಧಿಸಿದಂತೆ ಮಂಗಳೂರಿನ ಪಾಲಿಕೆ ಕಚೇರಿ, ಉರ್ವಾದ ಮನೆ ಮೇಲೆ ರೇಡ್ ಆಗಿದ್ದು, ಮಂಗಳೂರಿನಲ್ಲಿ 1 ಮನೆ, ಚಾಮರಾಜನಗರ- ಮಂಗಳೂರಿನಲ್ಲಿ 3 ನಿವೇಶನ, 1 ಕೆಜಿ ಬೆಳ್ಳಿ ಅಭರಣ ಪತ್ತೆಯಾಗಿದೆ.