ಯಾದಗಿರಿ/ಕೊಪ್ಪಳ: ಸಾರ್ವಜನಿಕರ ದೂರಿನ ಮೇರೆಗೆ ಯಾದಗಿರಿ ಹಾಗೂ ಕೊಪ್ಪಳದ ಆರ್‌ಟಿಒ ಕಚೇರಿಗಳ ಮೇಲೆ ಎಸಿಬಿ ಅಧಿಕಾರಿಗಳು ಏಕಕಾಲಕ್ಕೆ ದಾಳಿ ನಡೆಸಿದ್ದಾರೆ.
ಯಾದಗಿರಿಯಲ್ಲಿ ಎಸಿಬಿ ಡಿಎಸ್‍ಪಿ ಸಂತೋಷ ನೇತೃತ್ವದಲ್ಲಿ ದಾಳಿ ನಡೆಸಲಾಗಿದ್ದು, ವಾಹನ ನೋಂದಣಿ ಮತ್ತು ಪರವಾನಗಿ ನೀಡಲು ಕೆಲ ಅಧಿಕಾರಿಗಳು ಮಧ್ಯವರ್ತಿಗಳ ಮೂಲಕ ಜನರಿಗೆ ಲಂಚದ ಬೇಡಿಕೆ ಇಡುತ್ತಿದ್ದರು. ಅಲ್ಲದೆ. ಆರ್‌ಟಿಒ ಕಚೇರಿ ಮುಂಭಾಗದ ಝರಾಕ್ಸ್ ಅಂಗಡಿಯಲ್ಲಿ ಕಾನೂನು ಬಾಹಿರವಾಗಿ ಸರ್ಕಾರದ ಮುದ್ರೆಗಳನ್ನು ಮತ್ತು ವಾಹನ ಚಲಾವಣೆಗೆ ಬೇಕಾದ ಮುಖ್ಯ ದಾಖಲೆಗಳನ್ನು ಸೃಷ್ಟಿ ಮಾಡಲಾಗುತ್ತಿತ್ತು ಎಂಬ ಆರೋಪಿದ ಮೇಲೆ ದಾಳಿ ನಡೆಸಲಾಗಿದೆ.
Advertisement
Advertisement
ಅಲ್ಲದೆ ಈ ಬಗ್ಗೆ ಸಾರ್ವಜನಿಕರು ಎಸಿಬಿ ಅಧಿಕಾರಿಗಳಿಗೆ ಹಲವು ಬಾರಿ ದೂರು ಸಲ್ಲಿಸಿದ್ದರು. ಈ ಬಗ್ಗೆ ಖಚಿತ ಮಾಹಿತಿ ಸಂಗ್ರಹಿಸಿದ ಅಧಿಕಾರಿಗಳು ಇಂದು ಬೆಳಗ್ಗೆ ನಗರದ ಜಿಲ್ಲಾಧಿಕಾರಿಗಳ ಕಚೇರಿ ರಸ್ತೆಯಲ್ಲಿರುವ ಆರ್‌ಟಿಒ ಕಚೇರಿಯಲ್ಲಿ ಎಲ್ಲ ವಿಭಾಗದ ಅಧಿಕಾರಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿದ್ದಾರೆ. ಝರಾಕ್ಸ್ ಶಾಪ್ ಗಳಲ್ಲಿದ್ದ ಕೆಲವು ಪ್ರಮುಖ ದಾಖಲೆಗಳನ್ನು ವಶ ಪಡಿಸಿಕೊಂಡಿದ್ದು, ತೀವ್ರ ಶೋಧ ನಡೆಸಿದ್ದಾರೆ.
Advertisement
ಕೊಪ್ಪಳದಲ್ಲೂ ದಾಳಿ
ಭ್ರಷ್ಟಾಚಾರ ಹಾಗೂ ಏಜೆಂಟರ ಹಾವಳಿ ಆರೋಪದ ಹಿನ್ನಲೆಯಲ್ಲಿ ಕೊಪ್ಪಳದ ಆರ್‌ಟಿಒ ಕಚೇರಿ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಕೊಪ್ಪಳ ನಗರದ ಹೊರವಲಯದಲ್ಲಿರುವ ಆರ್‌ಟಿಒ ಕಚೇರಿ ಮೇಲೆ ಎಸಿಬಿ ಡಿವೈಎಸ್ಪಿಗಳಾದ ಆರ್.ಎಸ್.ಉಜ್ಜಿನಕೊಪ್ಪ, ಚಂದ್ರಕಾಂತ್ ಪೂಜಾರ್ ನೇತೃತ್ವದಲ್ಲಿ ದಾಳಿ ನಡೆದಿದೆ. ಎಸಿಬಿ ಏಜೆಂಟರನ್ನು ಹಾಗೂ ಕೆಲವು ದಾಖಲೆಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
Advertisement
ಆರ್‌ಟಿಒ ಕಚೇರಿಯಲ್ಲಿನ ನೌಕರರು ಹಾಗೂ ಏಜೆಂಟರು ಸಾರ್ವಜನಿಕರಿಂದ ಅಧಿಕ ಹಣ ವಸೂಲಿ ಮಾಡುತ್ತಿರುವ ಕುರಿತು ಎಸಿಬಿ ಅಧಿಕಾರಿಗಳಿಗೆ ದೂರು ಬಂದಿದ್ದವು. ದೂರಿನ ಹಿನ್ನಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ದಾಳಿ ವೇಳೆ ಹಲವಾರು ಏಜೆಂಟರು ಹಾಗೂ ನೌಕರರಿಂದ ಅಪಾರ ಪ್ರಮಾಣದ ನಗದು ವಶಪಡಿಸಿಕೊಂಡಿದ್ದಾರೆ ಎನ್ನಲಾಗಿದೆ.