ದಾವಣಗೆರೆ: ಮೆಕ್ಕೆಜೋಳ ಇಂಡಸ್ಟ್ರಿ ಲೈಸೆನ್ಸ್ ನೀಡಲು 30 ಸಾವಿರ ರೂ. ಬೇಡಿಕೆ ಇಟ್ಟ ಪಿಡಿಒ ಒಬ್ಬರು ನಗರದ ಪಾರ್ಕ್ ವೊಂದರಲ್ಲಿ ಲಂಚ ಸ್ವೀಕರಿಸುವಾಗ ಎಸಿಬಿ ಬಲೆಗೆ ಬಿದ್ದಾರೆ.
ತಾಲೂಕಿನ ಹೆಬ್ಬಾಳು ಗ್ರಾಮ ಪಂಚಾಯಿತಿ ಪಿಡಿಒ ಸ್ವಾಮಿಲಿಂಗಪ್ಪ ಎಸಿಬಿ ಬಲೆಗೆ ಸಿಕ್ಕಿಬಿದ್ದ ಅಧಿಕಾರಿ. ಇಂದು ಸ್ವಾಮಿಲಿಂಗಪ್ಪ ಅವರು ನಿಜಲಿಂಗಪ್ಪ ಬಡಾವಣೆಯ ಪಾರ್ಕ್ ನಲ್ಲಿ ಬಸವರಾಜ್ ಎಂಬವರಿಂದ 30 ಸಾವಿರ ರೂ. ಲಂಚ ಸ್ವೀಕರಿಸುತ್ತಿದ್ದರು. ಖಚಿತ ಮಾಹಿತಿ ಪಡೆದ ಎಸಿಬಿ ಅಧಿಕಾರಿಗಳು ದಾಳಿ ಮಾಡಿದ್ದಾರೆ.
Advertisement
ಜಿಲ್ಲೆಯಲ್ಲಿಯೇ ಅತಿ ಭ್ರಷ್ಟ ಪಿಡಿಒ ಅಂತ ಸ್ವಾಮಿಲಿಂಗಪ್ಪ ವಿರುದ್ಧ ಎಸಿಬಿಗೆ ಸಾರ್ವಜನಿಕರು ದೂರು ನೀಡಿದ್ದರು. ಹೀಗಾಗಿ ಸ್ವಾಮಿಲಿಂಗಪ್ಪ ಲಂಚ ಪಡೆಯುವಾಗಲೇ ಬಂಧನ ಮಾಡಲು ಪ್ಲಾನ್ ರೂಪಿಸಿದ್ದರು. ಇಂದು ಎಸಿಬಿ ಇನ್ಸ್‍ಪೆಕ್ಟರ್ ಪ್ರಕಾಶ್ ಗೌಡ ಪಾಟೀಲ್ ನೇತೃತ್ವದಲ್ಲಿ ದಾಳಿ ನಡೆಸಿ, ಬಂಧಿಸಿದ್ದಾರೆ. ಬಳಿಕ ಪಿಡಿಒ ಸ್ವಾಮಿಲಿಂಗಪ್ಪ ಅವರಿಂದ ಹಣ ವಶಕ್ಕೆ ಪಡೆದು, ವಿಚಾರಣೆಗೆ ಒಳಪಡಿಸಿದ್ದಾರೆ.
Advertisement
ಇದೇ ತಿಂಗಳ 11ರಂದು ಉತ್ತರ ಕನ್ನಡ ಜಿಲ್ಲೆಯ ಕಾರವಾರ ನಗರಸಭೆಯ ಸಿಬ್ಬಂದಿ ಉಲ್ಲಾಸ್ ನಾಯ್ಕ್ ಹಾಗೂ ಸುರೇಶ್ ಖಾತಾ ಉತಾರ ಹಾಗೂ ಫಾರಂ ನಂಬರ್ 3 ನೀಡಲು ಲಂಚ ಕೇಳಿ, ಹಣ ಸ್ವೀಕರಿಸುತ್ತಿದ್ದ ವೇಳೆ ಎಸಿಬಿ ಅಧಿಕಾರಿಗಳ ಕೈಗೆ ಸಿಕ್ಕಿದ್ದರು. ಇಬ್ಬರು ಸೇರಿ ಕಚೇರಿಯಲ್ಲಿ ಸಂದೇಶ್ ನಾಯ್ಕ್ ಎಂಬವರಿಂದ ಲಂಚ ಪಡೆಯುತ್ತಿದ್ದರು. ಖಚಿತ ಮಾಹಿತಿ ಆಧಾರದ ಮೇಲೆ ಎಸಿಬಿ ಡಿವೈಎಸ್‍ಪಿ ಗಿರೀಶ್ ನೇತೃತ್ವದ ತಂಡವು ದಾಳಿ ನಡೆಸಿತ್ತು.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv