ಕಲಬುರಗಿ: ಆದಾಯಕ್ಕಿಂತ ಹೆಚ್ಚಿನ ಆಸ್ತಿ ಸಂಪಾದನೆ ಆರೋಪದ ಹಿನ್ನೆಲೆಯಲ್ಲಿ ಲೋಕೋಪಯೋಗಿ ಇಲಾಖೆಯ ಅಧಿಕಾರಿ ಶಾಂತಗೌಡ ಬಿರಾದರ್ ಅವರ ಮನೆ ಮೇಲೆ ಇಂದು ಎಸಿಬಿ ದಾಳಿ ನಡೆಸಿದರು.
Advertisement
ಶಾಂತಗೌಡ ಅವರ ಮನೆ, ಕಚೇರಿ, ತೋಟದ ಮನೆ ಮೇಲೆ ದಾಳಿ ನಡೆಸಲಾಗಿದೆ. ಕಲಬುರಗಿ ನಗರದ ಗುಬ್ಬಿ ಕಾಲೋನಿಯಲ್ಲಿರುವ ಮನೆ ಹಾಗೂ ಜಿಲ್ಲೆಯ ಯಡ್ರಾಮಿಯಲ್ಲಿರುವ ತೋಟದ ಮನೆ ಮೇಲೆ ದಾಳಿ ನಡೆಸಿ ಅಕ್ರಮ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ. ಇದನ್ನೂ ಓದಿ: ಬಿಬಿಎಂಪಿ ಎಫ್‍ಡಿಎ ನೌಕರನ ಬಳಿ ಕೋಟಿ ಕೋಟಿ ಆಸ್ತಿ – ಸರ್ಕಾರಕ್ಕೆ ಬರಬೇಕಿದೆ 125 ಕೋಟಿ
Advertisement
Advertisement
ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸುತ್ತಿರುವುದಾಗಿ ಕಲಬುರಗಿ ಎಸಿಬಿ ಎಸ್ ಪಿ ಮಹೇಶ್ ಮೇಘಣ ಅವರು ಹೇಳಿಕೆ ನೀಡಿದ್ದಾರೆ.
Advertisement
ಮೂರು ಕಡೆ ದಾಳಿ: ಇಂದು ಮುಂಜಾನೆ 60 ಸಿಬ್ಬಂದಿ ತಂಡದಿಂದ ಶಾಂತಗೌಡ ಅವರ ಆಸ್ತಿಗಳಿರುವ ಮೂರು ಕಡೆ ಎಸಿಬಿ ದಾಳಿ ನಡೆಸಿದರು. ಮೂವರು ಡಿಎಸ್‍ಪಿಗಳು ನೇತೃತ್ವವನ್ನು ವಹಿಸಿದ್ದರು. ಇನ್ನು ದಾಳಿ ಮುಂದುವರೆದಿದ್ದು, ಅಧಿಕಾರಿಗಳಿಂದ ಕಡತಗಳ ಪರಿಶೀಲನೆ ನಡೆಯುತ್ತಿದೆ. ಎಸಿಬಿ ದಾಳಿ ವೇಳೆ ಅಕ್ರಮ ಆಸ್ತಿಯ ದಾಖಲೆಗಳು ಪತ್ತೆಯಾಗಿದ್ದು, ಇವರು ಬಾಡಿಗೆ ನೀಡಿರುವ ಮನೆಗಳ ದಾಖಲಾತಿಯೂ ಲಭ್ಯವಾಗಿವೆ. ಅಲ್ಲಿಯೂ ನಮ್ಮ ಅಧಿಕಾರಿಗಳ ತಂಡ ಹೋಗಿ ದಾಖಲಾತಿ ಪರಿಶೀಲನೆ ಮಾಡಲಾಗುವುದು ಎಂಬ ಮಾಹಿತಿ ಲಭ್ಯವಾಗಿದೆ. ಇದನ್ನೂ ಓದಿ: ಅಂಬರೀಶ್ ಹೆಸರಲ್ಲಿ ಏನೂ ಮಾಡಿಲ್ಲ ಅನ್ನೋ ಬೇಸರ ಅಭಿಮಾನಿಗಳಲ್ಲಿದೆ: ಸುಮಲತಾ
ಭವ್ಯ ಬಂಗಲೆ: ಕಲಬುರಗಿ ಗುಬ್ಬಿ ಕಾಲೋನಿಯಲ್ಲಿ ಮೂರಂತಸ್ತಿನ ಹಾಗೂ ಬಡೆಪುರದಲ್ಲಿ ಭವ್ಯ ಬಂಗಲೆಯಿದ್ದು, ವಿವಿ ರಸ್ತೆಯಲ್ಲಿ ಎರಡು ನಿವೇಶನಗಳನ್ನು ಹೊಂದಿದ್ದಾರೆ. ಯಡ್ರಾಮಿ ತಾಲ್ಲೂಕಿನ ಹಂಗರಗಾ ಗ್ರಾಮದಲ್ಲಿ 25 ಎಕರೆ ಫಾರ್ಮ್ ಹೌಸ್ ಪತ್ತೆಯಾಗಿದ್ದು, 10 ಎಕರೆ ಜಮೀನು ಪತ್ತೆಯಾಗಿದೆ. ಒಟ್ಟು 35 ಎಕರೆ ಜಮೀನು ಪತ್ತೆಯಾಗಿದೆ. ಜೊತೆಗೆ ಹಂಗರಾಮಗಾ ಗ್ರಾಮದ ಫಾರ್ಮ್‍ನಲ್ಲಿ ಎರಡು ಭವ್ಯ ಬಂಗಲೆಯಿದೆ.
ಇನ್ನೂ ಬೆಂಗಳೂರಿನಲ್ಲೂ ಆಸ್ತಿ ಇರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಅಷ್ಟೇ ಅಲ್ಲದೇ ಎರಡು ಕಾರ್, ಎರಡು ಬೈಕ್ ಸೇರಿ ವಾಹನಗಳು ಪತ್ತೆಯಾಗಿದೆ. ಕಲಬುರಗಿ ನಗರದ ಬ್ರಹ್ಮಪುರ ಬಡಾವಣೆ ಕೋಟನೂರ್ ಡಿ ಬಡಾವಣೆಯಲ್ಲಿ ತಲಾ ಎರಡು ಸೈಟ್ ಪತ್ತೆಯಾಗಿದೆ. 40 ಲಕ್ಷಕ್ಕೂ ಅಧಿಕ ನಗದು, ಹಾಗೂ ಚಿನ್ನಾಭರಣ ಕೂಡ ಪತ್ತೆಯಾಗಿದೆ.
ಪೈಪ್‍ನಲ್ಲಿ ಕಂತೆ ಕಂತೆ ಹಣ: ಎಸಿಬಿ ದಾಳಿ ವಿಷಯ ತಿಳಿದ ಶಾಂತಗೌಡ ಹತ್ತು ನಿಮಿಷ ಮುಂಚೆ ಹಣವನ್ನು ಪೈಪ್‍ನಲ್ಲಿ ಬಿಸಾಕಿದ್ದರು. ಬಾಗಿಲು ತೆರೆಯೋದಕ್ಕೆ ಸತಾಯಿಸುವ ವೇಳೆ ಶಾಂತಗೌಡ ಹಣ ಬಿಸಾಕಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಪ್ಲಂಬರ್‍ರನ್ನು ಕರೆಯಿಸಿ ಪೈಪ್ ಕಟ್ ಮಾಡಿಸಿ ಹಣ ಹುಡುಕುತ್ತಿದ್ದಾರೆ. 40 ಲಕ್ಷಕ್ಕೂ ಅಧಿಕ ಹಣ ಈಗಾಗಲೇ ದೊರೆತಿದೆ. ಇದನ್ನೂ ಓದಿ: ಮದುವೆ ವಾರ್ಷಿಕೋತ್ಸವಕ್ಕೆ ಪತ್ನಿಗೆ ವಿಶೇಷವಾಗಿ ವಿಶ್ ಮಾಡಿದ ಧ್ರುವ
ಬಕೆಟ್‍ನಲ್ಲಿ ಹಣ ತುಂಬಿದ ಅಧಿಕಾರಿಗಳು: ಶಾಂತಗೌಡ ಅವರ ಮನೆಯ ಮೂಲೆ ಮೂಲೆಗಳಲ್ಲೂ ಅಧಿಕಾರಿಗಳು ಶೋಧ ನಡೆಸುತ್ತಿದ್ದಾರೆ. ಹಾಗೆಯೇ ಮಗನ ರೂಂನಲ್ಲೂ 40 ಲಕ್ಷ ರೂ. ನಗದು ದೊರೆತಿದೆ. ಈ ಎಲ್ಲಾ ಹಣಗಳನ್ನು ಅಧಿಕಾರಿಗಳು ಬಕೆಟ್‍ನಲ್ಲಿ ತುಂಬಿಡುತ್ತಿದ್ದಾರೆ. ಬಕೆಟ್ 500 ರೂ. ನೋಟಿನಿಂದಲೇ ತುಂಬಿದೆ.
ಹಂಗಾಮಿ ನೌಕರನಾಗಿ ಸೇರ್ಪಡೆ: 1992 ಜಿಲ್ಲಾ ಪಂಚಾಯ್ತಿ ಆಳಂದನಲ್ಲಿ ಕಿರಿಯ ಅಭಿಯಂತರ ಹಂಗಾಮಿ ನೌಕರನಾಗಿ ಸೇರ್ಪಡೆಯಾಗಿದ್ದರು. 2000ರಲ್ಲಿ ಖಾಯಂ ನೌಕರನಾಗಿ ಸೇರ್ಪಡೆಯಾದ ಶಾಂತಗೌಡ, ಕಲಬುರಗಿ ಜಿಲ್ಲೆಯ ಆಳಂದ, ವಿಜಯಪುರ ಜಿಲ್ಲೆಯ ಆಲಮೇಲ್, ಬೆಳಗಾವಿ, ಜೇವರ್ಗಿಯಲ್ಲಿ ಲೋಕೋಪಯೋಗಿ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದಾರೆ.
ಸಹಕರಿಸದ ಶಾಂತಗೌಡ: ಶಾಂತಗೌಡ ಸೇರಿದ 8 ಕೋಟಿಗೂ ಅಧಿಕ ಮೌಲ್ಯದ ಆಸ್ತಿ ದೊರೆತಿದ್ದು, ಇನ್ನೂ ಎರಡು ಲಾಕರ್ ಕೀ ನೀಡದೆ ಶಾಂತಗೌಡ ಅಧಿಕಾರಿಗಳನ್ನು ಸತಾಯಿಸಿದರು. ಎಸಿಬಿ ಅಧಿಕಾರಿಗಳ ದಾಳಿ ಸಂದರ್ಭದಿಂದ ಇಲ್ಲಿಯವರೆಗೂ ಅಧಿಕಾರಿಗಳಿಗೆ ಸರಿಯಾದ ರೀತಿಯಲ್ಲಿ ಸಹಕಾರ ನೀಡುತ್ತಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.