ಬೆಂಗಳೂರು: ಇಂದು ಬೆಳ್ಳಂಬೆಳಗ್ಗೆಯೇ ಭ್ರಷ್ಟ ಅಧಿಕಾರಿಗಳ ಭೇಟೆಗೆ ಇಳಿದಿದ್ದ ಎಸಿಬಿ ಅಧಿಕಾರಿಗಳು ಕೆಐಎಡಿಬಿ ಚೀಫ್ ಎಂಜಿನಿಯರ್ ಟಿಆರ್ ಸ್ವಾಮಿ ಮನೆ ಮೇಳೆ ದಾಳಿ ನಡೆಸಿದ ಸ್ಥಳದಲ್ಲಿ ಹೈ ಡ್ರಾಮ ನಡೆದಿದೆ ಎಂದು ತಿಳಿದು ಬಂದಿದೆ.
ಬೆಳಗ್ಗೆ 7 ಗಂಟೆ ಸಮಯದಲ್ಲಿ ಅಧಿಕಾರಿಗಳು ದಾಳಿ ನಡೆಸಲು ಆಗಮಿಸಿದ್ದಾರೆ ಎಂಬ ಮಾಹಿತಿ ಲಭಿಸಿದ ಕೂಡಲೇ ಮನೆಯಲ್ಲಿದ್ದ 3 ಕೋಟಿ ರೂ. ಹಣವನ್ನು ಸೂಟ್ ಕೇಸ್‍ಗೆ ತುಂಬಿದ ಸ್ವಾಮಿ ಅರ್ಪಾಟ್ ಮೆಂಟ್ ಬಾಲ್ಕನಿಯಿಂದ ಹೊರಕ್ಕೆ ಎಸೆದಿದ್ದಾರೆ. ಈ ವೇಳೆ ಕಂತೆ ಕಂತೆ ನೋಟು ಅಪಾಟ್ ಮೆಂಟ್ ಗಾರ್ಡನ್ ನಲ್ಲಿ ಎಸೆದಿದ್ದು, ಇದನ್ನು ಕಂಡ ಎಸಿಬಿ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಹಣವನ್ನು ಆಯ್ದುಕೊಂಡು ಬ್ಯಾಗಿಗೆ ತುಂಬಿದ್ದಾರೆ.
Advertisement
Advertisement
ಬಳಿಕ ಹಣದ ಸಮೇತ ಅರ್ಪಾಟ್ ಮೆಂಟ್ ನ 14ನೇ ಮಹಡಿಯಲ್ಲಿದ್ದ ಸ್ವಾಮಿ ಮನೆಗೆ ತೆರಳಿದ್ದಾರೆ. ಅಧಿಕಾರಿಗಳು ಮನೆಯ ಬಾಗಿಲು ತೆಗೆಯಲು ಹೇಳಿದರೂ ಸುಮಾರು 1 ಗಂಟೆ ಕಾಲ ಬಾಗಿಲು ತೆರೆಯದೇ ಹೈಡ್ರಾಮ ನಡೆಸಿದ್ದಾರೆ. ಬಳಿಕ ಹೊರಕ್ಕೆ ಬಂದಿದ್ದು ಅಧಿಕಾರಿಗಳು ತಂದಿದ್ದ ಹಣ ತನ್ನದಲ್ಲ ಎಂದು ವಾದ ನಡೆಸಿದ್ದಾರೆ. ಈ ವೇಳೆ ಎಸಿಬಿ ಅಧಿಕಾರಿಗಳು ತಮ್ಮದೇ ವರಸೆಯಲ್ಲಿ ಪ್ರಶ್ನೆ ಮಾಡಿದ ಬಳಿಕ ಸ್ವಾಮಿ ಸುಮ್ಮನಾಗಿದ್ದಾರೆ ಎಂದು ತಿಳಿದು ಬಂದಿದೆ.
Advertisement
ಈ ಹಂತದಲ್ಲಿ ಮನೆ ಪ್ರವೇಶಿಸಿದ ಅಧಿಕಾರಿಗಳು ಪರಿಶೀಲನೆ ನಡೆಸಿದ್ದು, ಮನೆಯ ಯಾವ ಮೂಲೆ ಹುಡುಕಿದರೂ ಸಿಗುತ್ತಿದ್ದ ಕಂತೆ ಕಂತೆ ಹಣ ಕಂಡು ದಂಗಾಗಿದ್ದಾರೆ. ಮನೆಯಲ್ಲಿದ್ದ ಟಿವಿ ಕೆಳ ಭಾಗ, ಆಡುಗೆ ಮನೆ, ಕ್ಯಾಬಿನ್, ಹಳೆಯ ಬ್ಯಾಗ್, ಸೋಫಾ ಕೆಳಗೆ, ಬಾತ್ ರೂಂ ಬಕೆಟ್ ಗಳಲ್ಲಿ ಹಣ ತುಂಬಿಡಲಾಗಿತ್ತು. ಇದರೊಂದಿಗೆ ಬೆಂಗಳೂರು, ಮೈಸೂರಿನಲ್ಲಿ ಸೈಟ್‍ಗಳು, ಮಕ್ಕಳ ಹೆಸರಲ್ಲಿ ದುಬಾರಿ ಬೆಲೆಯ ಕಾರುಗಳ ಖರೀದಿ ಮಾಡಿರುವ ಕುರಿತ ದಾಖಲೆಗಳು ಪತ್ತೆಯಾಗಿದೆ.
Advertisement
ಅಪಾರ್ಟ್ ಮೆಂಟ್‍ನಲ್ಲಿ ಟಿಆರ್ ಸ್ವಾಮಿ ಅವರೊಂದಿಗೆ ವಾಸವಿದ್ದ ಸಹೋದರಿ ಕೂಡ ಆಟೋರಿಕ್ಷಾದಲ್ಲಿ 30 ಲಕ್ಷ ರೂ. ಸಾಗಿರುವ ವೇಳೆ ಸಿಕ್ಕಿಬಿದ್ದಿದ್ದಾರೆ. ಈ ಹಣವನ್ನು ಎಸಿಬಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಸದ್ಯ ಎಸಿಬಿ ಅಧಿಕಾರಿಗಳ ಪಂಚನಾಮೆ ಪೂರ್ಣಗೊಂಡಿದ್ದು, ದೊರೆತ ಹಣ ಹಾಗೂ ಆಸ್ತಿ ದಾಖಲೆಗಳ ಬಗ್ಗೆ ಟಿಆರ್ ಸ್ವಾಮಿ ಅವರ ಹೇಳಿಕೆ ಕೂಡ ಪಡೆದಿದ್ದಾರೆ. ಎಸಿಬಿ ಅಧಿಕಾರಿಗಳ ಪರಿಶೀಲನೆ ಸಂಪೂರ್ಣವಾಗಿದ್ದು, ಕೆಲ ತಾಂತ್ರಿಕ ಕೆಲಸಗಳು ಮಾತ್ರ ನಡೆಯಬೇಕಿದೆ ಎಂದು ಮೂಲಗಳಿಂದ ಮಾಹಿತಿ ಲಭಿಸಿದೆ.
ಮನೆಯಲ್ಲಿ ಏನೇನು ಸಿಕ್ಕಿದೆ?
ಸ್ವಾಮಿ.ಟಿ.ಆರ್: ಕುಟುಂಬಸ್ಥರ ಮತ್ತು ಸಂಬಂಧಿಕರ ಹೆಸರಿನಲ್ಲಿ 8 ಮನೆ, 10 ನಿವೇಶನಗಳು, ವಿವಿಧೆಡೆ 10 ಎಕರೆ ಕೃಷಿ ಜಮೀನು, 1.6 ಕೆಜಿ ಚಿನ್ನ, 3 ಕಾರು, 4.52 ಕೋಟಿ ರೂ ಪತ್ತೆಯಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv